ವಿಶ್ವವಿಖ್ಯಾತ ಮೈಸೂರು ದಸರಾ ಕುರಿತು ಜಿಲ್ಲಾಡಳಿತದಿಂದ ವಿಶೇಷ ವಿಡಿಯೋ

| Updated By: ವಿವೇಕ ಬಿರಾದಾರ

Updated on: Sep 23, 2024 | 8:20 AM

ವಿಶ್ವವಿಖ್ಯಾತ ಮೈಸೂರು ದಸರಾ ಕುರಿತಾಗಿ ವಿಶೇಷ ವಿಡಿಯೋ ತಯಾರಾಗಿದೆ. ಮೈಸೂರು ಜಿಲ್ಲಾಧಿಕಾರಿ ಲಕ್ಷೀಕಾಂತ್ ರೆಡ್ಡಿ ಮಾರ್ಗದರ್ಶನದಲ್ಲಿ ಈ ವಿಡಿಯೋ ಮಾಡಲಾಗಿದೆ. ಅಪರ ಜಿಲ್ಲಾಧಿಕಾರಿ ಶಿವರಾಜ್ ಸಾಹಿತ್ಯ ಬರೆದಿದ್ದಾರೆ. ಈ ಮೂಲಕ ಜಿಲ್ಲಾಡಳಿತ ದಸರಾ ಆಕರ್ಷಣೆ ಹೆಚ್ಚಿಸಲು ಮುಂದಾಗಿದೆ.

ವಿಶ್ವವಿಖ್ಯಾತ ಮೈಸೂರು ದಸರಾ 2024ಕ್ಕೆ ಸಕಲ ಸಿದ್ದತೆ ನಡೆಯುತ್ತಿದೆ. ಗಜಪಡೆಗಳ ತಾಲೀಮು ಆರಂಭವಾಗಿದೆ. ಮೈಸೂರು ನಗರವನ್ನು ದೀಪಗಳಿಂದ ಶೃಂಗರಿಸಲಾಗುತ್ತಿದೆ. ಇದೀಗ, ಜಿಲ್ಲಾಡಳಿತ ಮೈಸೂರು ದಸರಾ ಕುರಿತಾಗಿ ವಿಶೇಷ ವಿಡಿಯೋ ತಯಾರಿಸಿದೆ. ಮೈಸೂರು ಜಿಲ್ಲಾಧಿಕಾರಿ ಲಕ್ಷೀಕಾಂತ್ ರೆಡ್ಡಿ ಮಾರ್ಗದರ್ಶನದಲ್ಲಿ ಈ ವಿಡಿಯೋ ಮಾಡಲಾಗಿದೆ. ಅಪರ ಜಿಲ್ಲಾಧಿಕಾರಿ ಶಿವರಾಜ್ ಸಾಹಿತ್ಯ ಬರೆದಿದ್ದಾರೆ. ಮೈಸೂರು ದಸರೆಯ ವೈಭವ, ಅರಮನೆ ಮತ್ತು ಚಾಮುಂಡಿಬೆಟ್ಟದ ಕುರಿತು ವಿಡಿಯೋದಲ್ಲಿದೆ. ಈ ಮೂಲಕ ಜಿಲ್ಲಾಡಳಿತ ಮೈಸೂರು ದಸರಾದ ಮಹತ್ವ ಸಾರುತ್ತಿದೆ. ಜಿಲ್ಲಾಡಳಿತ ದಸರಾ ಆಕರ್ಷಣೆ ಹೆಚ್ಚಿಸಲು ಮುಂದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ