Mysore Dasara 2025: ಚಾಮುಂಡೇಶ್ವರಿ ಪೂಜೆ ಬಳಿಕ ಆರತಿ ಪಡೆದ ಬಾನು ಮುಷ್ತಾಕ್
Mysore Dasara Inauguration; ಮೈಸೂರು ದಸರಾ ಉದ್ಘಾಟನೆಗೆ ಆಗಮಿಸಿರುವ ಬೂಕರ್ ಪ್ರಶಸ್ತಿ ವಿಜೇತೆ ಸಾಹಿತಿ ಬಾನು ಮುಷ್ತಾಕ್ ಸೋಮವಾರ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದರ್ಶನ ಪಡೆದರು. ಸಿಎಂ ಸಿದ್ದರಾಮಯ್ಯ ಜತೆ ದೇಗುಲಕ್ಕೆ ಆಗಮಿಸಿದ ಅವರು, ಚಾಮುಂಡೇಶ್ವರಿ ಮಂಗಳಾರತಿ ಪಡೆದು ನಮಸ್ಕರಿಸಿದ್ದಾರೆ. ವಿಡಿಯೋ ಇಲ್ಲಿದೆ.
ಮೈಸೂರು, ಸೆಪ್ಟೆಂಬರ್ 22: ಮೈಸೂರಿನಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ. ದಸರಾ ಉದ್ಘಾಟಕಿ, ಬೂಕರ್ ಪ್ರಶಸ್ತಿ ವಿಜೇತೆ ಸಾಹಿತಿ ಬಾನು ಮುಷ್ತಾಕ್ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದರ್ಶನ ಪಡೆದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರರ ಜತೆ ಚಾಮುಂಡೇಶ್ವರಿ ಪೂಜೆ ವೀಕ್ಷಿಸಿದ ಬಾನು ಮುಷ್ತಾಕ್, ಮಂಗಳಾರತಿ ಬಳಿಕ ಆರತಿ ಪಡೆದು ನಮಸ್ಕರಿಸಿದರು.
Published on: Sep 22, 2025 10:45 AM
