ಮೈಸೂರು ದಸರಾ 2026: ಗಜಪಡೆಗೆ ವೀರನಹೊಸಳ್ಳಿಯಲ್ಲಿ ಸಚಿವ ಯತೀಂದ್ರ ಸಿದ್ದರಾಮಯ್ಯರಿಂದ ಚಾಲನೆ
ಮೈಸೂರು ದಸರಾ 2026ರ ಗಜಪಡೆಗೆ ಹುಣಸೂರಿನ ವೀರನಹೊಸಳ್ಳಿಯಲ್ಲಿ ಚಾಲನೆ ದೊರೆತಿದೆ. ಉಸ್ತುವಾರಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಅವರು ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಆನೆಗಳ ಪಾದ ತೊಳೆದು ನೈವೇದ್ಯ ಅರ್ಪಿಸಿದರು. ಜನಸಂದಣಿಯ ನಡುವೆಯೂ ಭವ್ಯವಾಗಿ ನಡೆದ ಈ ಕಾರ್ಯಕ್ರಮದಲ್ಲಿ 9 ದಸರಾ ಆನೆಗಳು ಮೈಸೂರಿನತ್ತ ಪಯಣ ಆರಂಭಿಸಿದವು.
ಮೈಸೂರು, ಆಗಸ್ಟ್ 26: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2026ರ ಸಿದ್ಧತೆಗಳು ಅಧಿಕೃತವಾಗಿ ಆರಂಭವಾಗಿವೆ. ಉಸ್ತುವಾರಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಅವರು ದಸರಾ ಗಜಪಡೆಗೆ ಹುಣಸೂರಿನ ವೀರನಹೊಸಳ್ಳಿಯಲ್ಲಿ ಚಾಲನೆ ನೀಡಿದ್ದಾರೆ. ಬೆಳಿಗ್ಗೆ 10 ರಿಂದ 10.28ರ ಶುಭ ತುಲಾ ಲಗ್ನದಲ್ಲಿ ಪೂಜೆಕಾರ್ಯ ನಡೆದಿದ್ದು, ದಸರಾ ಗಜಪಡೆಗೆ ಫಲತಾಂಬೂಲ ನೀಡುವ ಮೂಲಕ ಚಾಲನೆ ನೀಡಲಾಗಿದೆ. ಮೊದಲ ಹಂತದಲ್ಲಿ ಧನಂಜಯ, ಮಹೇಂದ್ರ, ಏಕಲವ್ಯ, ಪ್ರಶಾಂತ, ಗೋಪಿ, ಶ್ರೀರಾಮ, ಸುಗ್ರೀವ, ಲಕ್ಷ್ಮೀ, ಕಾವೇರಿ ಸೇರಿ 9 ಆನೆಗಳು ನಾಡಿನತ್ತ ಆಗಮಿಸುತ್ತಿವೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos

