ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ: ಈ ವೇಳೆ ಮೈಸೂರು ಬರ ಬಗ್ಗೆ ವಿಚಾರಿಸಿದ ಸ್ವಾಮೀಜಿ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟಕರಾಗಿ ಆಯ್ಕೆಯಾಗಿರುವ ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಯನ್ನು ಅಧಿಕೃತವಾಗಿ ಆಹ್ವಾನ ನೀಡಲಾಗಿದೆ. ಇಂದು (ಅಕ್ಟೋಬರ್ 04) ಮೈಸೂರು ದಸರಾ ಸ್ವಾಗತ ಸಮಿತಿ ಕೊಪ್ಪಳದ ಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಶ್ರೀಗಳಿಗೆ ಅಧಿಕೃತ ಆಹ್ವಾನ ನೀಡಿದೆ. ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ, ಸಿಇಒ ಯುಕೇಶ್ ಕುಮಾರ್ ನೇತೃತ್ವದ ದಸರಾ ಸ್ವಾಗತ ಸಮಿತಿ, ಶ್ರೀಗಳಿಗೆ ದಸರಾ ಅಂಬಾರಿಯ ನೆನಪಿನ ಕಾಣಿಕೆ ಕೊಟ್ಟು ಆಹ್ವಾನ ಪತ್ರಿಕೆ ನೀಡಿತು.
ಕೊಪ್ಪಳ, (ಅಕ್ಟೋಬರ್ 04): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟಕರಾಗಿ ಆಯ್ಕೆಯಾಗಿರುವ ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಯನ್ನು ಅಧಿಕೃತವಾಗಿ ಆಹ್ವಾನ ನೀಡಲಾಗಿದೆ. ಇಂದು (ಅಕ್ಟೋಬರ್ 04) ಮೈಸೂರು ದಸರಾ ಸ್ವಾಗತ ಸಮಿತಿ ಕೊಪ್ಪಳದ ಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಶ್ರೀಗಳಿಗೆ ಅಧಿಕೃತ ಆಹ್ವಾನ ನೀಡಿದೆ. ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ, ಸಿಇಒ ಯುಕೇಶ್ ಕುಮಾರ್ ನೇತೃತ್ವದ ದಸರಾ ಸ್ವಾಗತ ಸಮಿತಿ, ಶ್ರೀಗಳಿಗೆ ದಸರಾ ಅಂಬಾರಿಯ ನೆನಪಿನ ಕಾಣಿಕೆ ಕೊಟ್ಟು ಆಹ್ವಾನ ಪತ್ರಿಕೆ ನೀಡಿತು.
ಇನ್ನು ಇದೇ ವೇಳೆ ಮೈಸೂರು ಜಿಲ್ಲಾಧಿಕಾರಿ, ನೀವು ಯಾವಾಗ ಬರುತ್ತೀರಾ ಎಂದು ಗವಿಸಿದ್ದೇಶ್ವರ ಶ್ರೀಗಳನ್ನು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಶ್ರೀಗಳು, ನಿಮ್ಮ ಶಿಷ್ಟಾಚಾರ ಏನಿದೆ ಹೇಳಿ ಎಂದಿದ್ದಾರೆ. ಜೊತೆಗೆ ಮೈಸೂರು ಬರಗಾಲದ ಬಗ್ಗೆ ಡಿಸಿ ಅವರಿಂದ ಮಾಹಿತಿ ಪಡೆದ್ದುಕೊಂಡಿದ್ದು ವಿಶೇಷ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
