ಪಿತೃಪಕ್ಷದಂದು ಖದೀಮನ ಕೈಚಳಕ: ಗುಂಡೇಟು ತಿಂದು ಜೈಲಿಗೆ ಹೋಗಿದ್ದ ಕಳ್ಳ ಮತ್ತೆ ಸಿಕ್ಕಿ ಬಿದ್ದ

[lazy-load-videos-and-sticky-control id=”vJ4V65pUZ7E”] ನೆಲಮಂಗಲ: ಹುಟ್ಟು ಗುಣ ಸುಟ್ಟರೂ ಹೋಗೋಲ್ಲ ಅನ್ನು ಗಾದೆ ಮಾತಿನಂತೆ ಇಲ್ಲೊಬ್ಬ ಕಳ್ಳ ಪೊಲೀಸರ ಗುಂಡೇಟು ತಿಂದು ಕಾಲು ಪಂಚರ್ ಮಾಡಿಕೊಂಡು ಜೈಲುಪಾಲಾಗಿದ್ದರೂ ಚಾಳಿ ಬಿಡದೆ ಮತ್ತೆ ಕಳ್ಳತನ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ. ನ್ಯಾಯ ಹೇಳಿ ಶಿಕ್ಷೆ ಕೊಡಿಸೋ ವಕೀಲರ ಮನೆಯಲ್ಲೇ ಈ ಖದೀಮ ತನ್ನ ಕೈಚಳಕ ತೋರಿಸಿ ಕಂಬಿ ಹಿಂದೆ ಬಿದ್ದಿದ್ದಾನೆ. ಜಯಂತ್ ಅಲಿಯಾಸ್ ಬ್ಯಾಟರಿ ಜಯಂತ್ ಬಂಧಿತ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಸುಭಾಷ್‌ನಗರದ ನಿವಾಸಿ ವಕೀಲ ಹನುಮಂತರಾಯಪ್ಪಇದೇ ತಿಂಗಳ 11 […]

ಪಿತೃಪಕ್ಷದಂದು ಖದೀಮನ ಕೈಚಳಕ: ಗುಂಡೇಟು ತಿಂದು ಜೈಲಿಗೆ ಹೋಗಿದ್ದ ಕಳ್ಳ ಮತ್ತೆ ಸಿಕ್ಕಿ ಬಿದ್ದ
ಆಯೇಷಾ ಬಾನು

Updated on: Sep 29, 2020 | 3:46 PM

[lazy-load-videos-and-sticky-control id=”vJ4V65pUZ7E”]

ನೆಲಮಂಗಲ: ಹುಟ್ಟು ಗುಣ ಸುಟ್ಟರೂ ಹೋಗೋಲ್ಲ ಅನ್ನು ಗಾದೆ ಮಾತಿನಂತೆ ಇಲ್ಲೊಬ್ಬ ಕಳ್ಳ ಪೊಲೀಸರ ಗುಂಡೇಟು ತಿಂದು ಕಾಲು ಪಂಚರ್ ಮಾಡಿಕೊಂಡು ಜೈಲುಪಾಲಾಗಿದ್ದರೂ ಚಾಳಿ ಬಿಡದೆ ಮತ್ತೆ ಕಳ್ಳತನ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ.

ನ್ಯಾಯ ಹೇಳಿ ಶಿಕ್ಷೆ ಕೊಡಿಸೋ ವಕೀಲರ ಮನೆಯಲ್ಲೇ ಈ ಖದೀಮ ತನ್ನ ಕೈಚಳಕ ತೋರಿಸಿ ಕಂಬಿ ಹಿಂದೆ ಬಿದ್ದಿದ್ದಾನೆ. ಜಯಂತ್ ಅಲಿಯಾಸ್ ಬ್ಯಾಟರಿ ಜಯಂತ್ ಬಂಧಿತ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಸುಭಾಷ್‌ನಗರದ ನಿವಾಸಿ ವಕೀಲ ಹನುಮಂತರಾಯಪ್ಪಇದೇ ತಿಂಗಳ 11 ನೇ ತಾರೀಖು ಪಿತೃಪಕ್ಷಕ್ಕೆಂದು ತಮ್ಮ ಊರಿಗೆ ತೆರಳಿದ್ದರು. ಈ ವೇಳೆ ಪಕ್ಕದ ಮನೆಯಲ್ಲೇ ಇದ್ದುಕೊಂಡು ಹೊಂಚುಹಾಕಿದ್ದ ಆರೋಪಿ ಜಯಂತ್ ಹಾಗೂ ಉಮೇಶ್ ಐದು ಲಕ್ಷ ಮೌಲ್ಯದ ಚಿನ್ನಾಭರಣವನ್ನ ದರೋಡೆ ಮಾಡಿ ಪರಾರಿಯಾಗಿದ್ದರು.

ಗುಂಡೇಟು ತಿಂದರೂ ಬುದ್ಧಿ ಬರಲಿಲ್ಲ:
ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ನಗರ ಪೊಲೀಸರು ಇನ್ಸ್ಪೆಕ್ಟರ್ ಶಿವಣ್ಣ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ, ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ 9ಕ್ಕಿಂತ ಹೆಚ್ಚು ಠಾಣೆಗೆ ಬೇಕಾಗಿದ್ದ ಆರೋಪಿ ಜಯಂತ್‌ನನ್ನು ಮಾರ್ಚ್ 22 2019 ರಂದು ಬಂಧಿಸುವ ವೇಳೆ ಪೊಲೀಸರ ಮೇಲೆ‌ ಹಲ್ಲೆಗೆ ಯತ್ನಿಸಿದ ಕಾರಣ ಪೊಲೀಸರು ಜಯಂತನ ಕಾಲಿಗೆ ಗುಂಡಿಕ್ಕಿ ಆರೋಪಿಯನ್ನ ಸೆರೆ ಹಿಡಿದು ಜೈಲಿಗಟ್ಟಿದ್ದರು. ಆದ್ರೆ ಬೇಲ್ ಮೇಲೆ ಹೊರಬಂದ ಆರೋಪಿ ಜಯಂತ್ ತನ್ನ ಹಳೆ ಚಾಳಿ ಮುಂದುವರೆಸಿ ಮತ್ತೆ ಪೊಲೀಸರ ಅತಿಥಿಯಾಗಿದ್ದಾನೆ.

Published On - 1:38 pm, Tue, 29 September 20

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us