ಕೋಲಾರದಲ್ಲಿ ನವ ವಧು-ವರರ ಹೊಡೆದಾಟ-ಎಸ್ಪಿ ಶಾಕಿಂಗ್​ ರಿಯಾಕ್ಷನ್

ಕೋಲಾರದಲ್ಲಿ ನವ ವಧು-ವರರ ಹೊಡೆದಾಟ-ಎಸ್ಪಿ ಶಾಕಿಂಗ್​ ರಿಯಾಕ್ಷನ್

ಕಿರಣ್ ಹನುಮಂತ್​ ಮಾದಾರ್
|

Updated on:Aug 08, 2024 | 3:13 PM

ಕೆಜಿಎಫ್(KGF) ತಾಲ್ಲೂಕು ಚಂಬರಸನಹಳ್ಳಿ ಗ್ರಾಮದಲ್ಲಿ ನಿನ್ನೆ(ಆಗಸ್ಟ್​ 07) ವಧು ಲಿಖಿತ ಶ್ರೀ ಹಾಗೂ ನವೀನ್ ಅದ್ಧೂರಿಯಾಗಿ ಮದುವೆ ಆಗಿ ಇಬ್ಬರು ಹೊಡೆದಾಡಿಕೊಂಡು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಕೋಲಾರ ಎಸ್ಪಿ ಶಾಕಿಂಗ್​ ರಿಯಾಕ್ಷನ್​ ಕೊಟ್ಟಿದ್ದು, ‘ ಪ್ರಾಥಮಿಕ ತನಿಖೆಯಲ್ಲಿ ಇಬ್ಬರು ರೂಮ್​ಗೆ ಹೋದಾಗ, ಇಬ್ಬರ ನಡುವೆ ಮನಸ್ಥಾಪ ಬಂದು, ವರ ನವೀನ್ ಹರಿತವಾದ ಆಯುಧದಿಂದ ಹೊಡೆದಿರುವುದು ತಿಳಿದು ಬಂದಿದೆ ಎಂದಿದ್ದಾರೆ.

ಕೋಲಾರ, ಆ.08: ಜಿಲ್ಲೆಯ ಕೆಜಿಎಫ್(KGF) ತಾಲ್ಲೂಕು ಚಂಬರಸನಹಳ್ಳಿ ಗ್ರಾಮದಲ್ಲಿ ನಿನ್ನೆ(ಆಗಸ್ಟ್​ 07) ವಧು ಲಿಖಿತ ಶ್ರೀ ಹಾಗೂ ನವೀನ್ ಅದ್ಧೂರಿಯಾಗಿ ಮದುವೆ ಆಗಿ, ಬಳಿಕ ಹೊಡೆದಾಡಿಕೊಂಡು ಮೃತರಾಗಿದ್ದರು. ಈ ಕುರಿತು ಮಾತನಾಡಿದ ಕೋಲಾರ ಎಸ್ಪಿ, ‘ಎರಡು ಕಡೆಯವರ ಸಂಬಂಧಿಕರು ಸೇರಿ ವಿವಾಹ ಮಾಡಿದ್ದಾರೆ. ಬಳಿಕ ಸಾಯಂಕಾಲ 5 ಗಂಟೆ ಸುಮಾರಿಗೆ ನೂತನ ಜೋಡಿ, ವರನ ಮನೆಗೆ ಹೋಗಿದ್ದಾರೆ. ನಂತರ ಇಬ್ಬರು ಒಂದು ರೂಂನ ಒಳಗೆ ಹೋಗಿದ್ದು, ಕೆಲಸಮಯದ ಬಳಿಕ ಗಲಾಟೆ ಶಬ್ದ ಕೇಳುತ್ತದೆ. ಕೂಡಲೇ ಎಲ್ಲರೂ ಹೋಗಿ ನೋಡಿದಾಗ ಇಬ್ಬರು ರಕ್ತದ ಮಡುವಿನಲ್ಲಿ ಬಿದ್ದಿರುತ್ತಾರೆ. ಇಬ್ಬರನ್ನು ಆಟೋದಲ್ಲಿ ಕರೆದುಕೊಂಡು ಬಂದು ಕೆಜಿಎಫ್​ನ ಆಸ್ಪತ್ರೆಯಲ್ಲಿ ಸೇರಿಸುತ್ತಾರೆ. ಆದರೆ, ವಧು ಲಿಖಿತ ಶ್ರೀ ಸಾವನ್ನಪ್ಪಿದ್ದಾರೆ. ಇಂದು (ಆ.08) ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದಾಗ ದುರಾದೃಷ್ಟವಶಾತ್​ ವರ ನವೀನ್ ಕೂಡ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ:ಕೋಲಾರ ನವದಂಪತಿ ಹೊಡೆದಾಟ ಪ್ರಕರಣ: ಬೇರೆ ಯಾರೋ ಹೊಡೆದಿದ್ದಾರೆಂದು ಆರೋಪಿಸಿದ ಕುಟುಂಬ

ಈ ಕುರಿತು ವಧುವಿನ ತಂದೆ ದೂರು ದಾಖಲಿಸಿದ್ದು, ಪ್ರಾಥಮಿಕ ತನಿಖೆಯಲ್ಲಿ ಇಬ್ಬರು ರೂಮ್​ಗೆ ಹೋದಾಗ, ಇಬ್ಬರ ನಡುವೆ ಮನಸ್ಥಾಪ ಬಂದು, ವರ ನವೀನ್ ಹರಿತವಾದ ಆಯುಧದಿಂದ ಹೊಡೆದಿರುವುದು ತಿಳಿದು ಬಂದಿದೆ. ಇನ್ನು ಎಲ್ಲರೂ ಬರುವಷ್ಟರಲ್ಲಿ ತನ್ನ ಮೇಲೇ ತಾನೇ ಹಲ್ಲೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 08, 2024 02:52 PM