ದಕ ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಪೊಲೀಸ್ ಅಧಿಕಾರಿಗಳು ಅಭಿಪ್ರಾಯಗಳನ್ನು ಕೇಳಿದ್ದಾರೆ: ಸತೀಶ್ ಕುಂಪಲ
ಜಿಲ್ಲೆಯ 36 ಹಿಂದೂ ಕಾರ್ಯಕರ್ತರಿಗೆ ಪೊಲೀಸ್ ನೊಟೀಸ್ ಮತ್ತು ಗಡೀಪಾರು ಮಾಡುವ ಅದೇಶದ ಬಗ್ಗೆ ಮಾತಾಡಿದ ಸತೀಶ್, ಲಿಸ್ಟ್ ಅನ್ನು ಹಿಂದಿನ ಅಧಿಕಾರಿಗಳು ತಯಾರಿಸಿದ್ದು ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದರು. ಗಲಭೆಗಳು ತಲೆದೋರಿದಾಗ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಹಿಂದೂ ಕಾರ್ಯಕರ್ತರ ಸಭೆ ನಡೆಸಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಬೇಕಿತ್ತು ಎಂದು ಸತೀಶ್ ಹೇಳಿದರು.
ಮಂಗಳೂರು, ಜೂನ್ 3: ದಕ್ಷಿಣ ಕನ್ನಡ ಜಿಲ್ಲೆಯ ನೂತನ ಪೊಲೀಸ್ ಕಮೀಶನರ್ ಮತ್ತು ಪೊಲೀಸ್ ವರಿಷ್ಠಾಧಿಕಾರಿಯಾಗಿ (Dakshin Kannada SP) ಚಾರ್ಜ್ ಸ್ವೀಕರಿಸಿರುವ ಅಧಿಕಾರಿಗಳನ್ನು ಇಂದು ಜಿಲ್ಲೆಯ ಬಿಜೆಪಿ ಶಾಸಕರು ಮತ್ತು ಮುಖಂಡರ ನಿಯೋಗವೊಂದು ಭೇಟಿ ಮಾಡಿತು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅಧಿಕಾರಿಗಳ ಜೊತೆ ಒಂದೊಳ್ಳೆಯ ಚರ್ಚೆ ಆಗಿದೆ, ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ನೆಲೆಸಲು ತಮ್ಮಿಂದ ಅಗತ್ಯವಿರುವ ನೆರವು ನೀಡಲು ತಯಾರಿರುವುದಾಗಿ ಹೇಳಿದ್ದೇವೆ, ತಮ್ಮ ಅಭಿಪ್ರಾಯಗಳನ್ನು ಅವರು ಕೇಳಿದ್ದಾರೆ, ಅವರಿಬ್ಬರ ಪ್ರಾಮಾಣಿಕ ಪ್ರಯತ್ನಗಳಿಂದ ಜಿಲ್ಲೆಯಲ್ಲಿ ಶಾಂತಿ ಮರುಸ್ಥಾಪನೆಗೊಳ್ಳುವ ವಿಶ್ವಾಸ ತಮಗಿದೆ ಎಂದು ಹೇಳಿದರು.
ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆಯಿಂದ ಪುತ್ತಿಲ, ಭರತ್ ಕುಮ್ಡೇಲು, ಮಹೇಶ್ ಶೆಟ್ಟಿ ತಿಮರೋಡಿ ಸೇರಿ 36 ಜನರ ಗಡೀಪಾರಿಗೆ ಪ್ರಕ್ರಿಯೆ ಶುರು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Published on: Jun 03, 2025 03:01 PM