ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಆಗುತ್ತಿಲ್ಲ, ನಮ್ಮ ಗಮನವೆಲ್ಲ 2028 ರ ಚುನಾವಣೆ ಮೇಲಿದೆ: ಶಿವಕುಮಾರ್

Updated on: Jul 01, 2025 | 4:26 PM

ಕಾಂಗ್ರೆಸ್ ವಿಚಾರವಾಗಿ ಹೇಳೋದಾದರೆ, ಎಲ್ಲೆಡೆ ಪಕ್ಷದ ಸಂಘಟನೆಯ ಬಗ್ಗೆ ಮಾತುಕತೆ ನಡೆಯುತ್ತಿದೆ. ಬೆಳಗಾವಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಈ ವರ್ಷವನ್ನು ಸಂಘಟನೆಯ ವರ್ಷವಾಗಿ ಘೋಷಣೆ ಮಾಡಿದ್ದಾರೆ, ಹಾಗಾಗಿ ಜಿಲ್ಲಾಧ್ಯಕ್ಷರುಗಳಿಗೆ ಶಕ್ತಿ ತುಂಬುವ ಕೆಲಸ ನಡೆಯುತ್ತಿದೆ, ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿಯವರು ಎಲ್ಲ ಜಿಲ್ಲಾಧ್ಯಕ್ಷರನ್ನು ದೆಹಲಿಗೆ ಕರೆಸಿ ಸಭೆ ನಡೆಸಿದ್ದಾರೆ ಮತ್ತು ಜವಾಬ್ದಾರಿಗಳನ್ನು ತಿಳಿ ಹೇಳಿದ್ದಾರೆ ಎಂದು ಶಿವಕುಮಾರ್ ಹೇಳಿದರು.

ಬೆಂಗಳೂರು, ಜುಲೈ 1: ರಾಮಮಗರ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ (Iqbal Hussain) ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಣದವರು ಮತ್ತು ಅದು ಎಲ್ಲರಿಗೂ ಗೊತ್ತಿರುವ ಸಂಗತಿ. ಇತ್ತೀಚಿಗೆ ಅವರು ಶಿವಕುಮಾರ್ ಸಿಎಂ ಆಗಲಿದ್ದಾರೆ ಅಂತ ಪದೇಪದೆ ಹೇಳುತ್ತಾ ಕೊಂಚ ಜಾಸ್ತಿಯೇ ನಿಷ್ಠೆ ಪ್ರದರ್ಶಿಸುತ್ತಿದ್ದಾರೆ. ಆದರೆ ಶಿವಕುಮಾರ್ ಶಾಸಕನ ವಿರುದ್ಧ ಇವತ್ತು ಕಿಡಿ ಕಾರಿದರು. ಅವನ್ಯಾರು ನಾನು ಮುಖ್ಯಮಂತ್ರಿ ಆಗ್ತೀನಿ ಅಂತ ಹೇಳೋದಿಕ್ಕೆ? ಅವನಿಗೆ ಒಂದರೆಡು ದಿನಗಳಲ್ಲಿ ನೋಟೀಸ್ ಜಾರಿ ಮಾಡ್ತೀನಿ, ನಾವೀಗ ಯೋಚನೆ ಮಾಡುತ್ತಿರೋದು 2028 ಚುನಾವಣೆ ಬಗ್ಗೆ; ಮುಖ್ಯಮಂತ್ರಿ ಬದಲಾವಣೆ, ನಾಯಕತ್ವ ಬದಲಾವಣೆ ಬಗ್ಗೆ ಮಾತಾಡಲು ರಂದೀಪ್ ಸುರ್ಜೆವಾಲಾ ಬಂದಿಲ್ಲ ಎಂದು ಶಿವಕುಮಾರ್ ಹೇಳಿದರು.

ಇದನ್ನೂ ಓದಿ:   ನಾನು, ಡಿಕೆ ಶಿವಕುಮಾರ್ ಚೆನ್ನಾಗಿಯೇ ಇದ್ದೇವೆ, ಸರ್ಕಾರ ಬಂಡೆಯಂತೆ ಭದ್ರ: ಡಿಸಿಎಂ ಕೈಹಿಡಿದೆತ್ತಿ ಸಿದ್ದರಾಮಯ್ಯ ಘೋಷಣೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ