ಚುನಾವಣಾ ಪ್ರಚಾರದಲ್ಲಿ ಯಾರನ್ನೂ ಕಡೆಗಣಿಸುವ ಪ್ರಶ್ನೆ ಉದ್ಭವಿಸಲ್ಲ; ಎಲ್ಲರೂ ಜವಾಬ್ದಾರಿ ಅರಿತು ಕೆಲಸ ಮಾಡುತ್ತಾರೆ: ಲಕ್ಷ್ಮಣ ಸವದಿ

|

Updated on: Mar 26, 2024 | 11:57 AM

ಪಕ್ಷದ ಹೈಕಮಾಂಡ್ ಇದುವರೆಗೆ ಯಾರಿಗೂ ಕ್ಷೇತ್ರಗಳ ಜವಾಬ್ದಾರಿಯನ್ನು ವಹಿಸಿಕೊಟ್ಟಿಲ್ಲ, ಅಭ್ಯರ್ಥಿಗಳ ಆಯ್ಕೆಗಾಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಮೀಕ್ಷೆಗಳನ್ನು ನೀಡುವ ಕೆಲಸವಹಿಸಿಕೊಡಲಾಗಿತ್ತು, ಪ್ರಚಾರ ಕಾರ್ಯದಲ್ಲಿ ಯಾರನ್ನು ಕಡೆಗಣಿಸಿದ್ದಾರೆ ಯಾರನ್ನು ಪರಾಂಬರಿಸಿದ್ದಾರೆ ಅಂತ ಪ್ರಶ್ನೆ ಉದ್ಭವಿಸಲ್ಲ ಎಂದು ಸವದಿ ಹೇಳಿದರು.

ಚಿಕ್ಕೋಡಿ: ಚುನಾವಣಾ ಪ್ರಚಾರ ಕಾರ್ಯದಲ್ಲಿ (poll campaigning) ಕಾಂಗ್ರೆಸ್ ಪಕ್ಷ ತಮ್ಮನ್ನು ಕಡೆಗಣಿಸುತ್ತಿದೆ ಎಂಬ ವದಂತಿಯನ್ನು ಅಥಣಿ ಶಾಸಕ ಮತ್ತು ಚಿಕ್ಕೋಡಿಯಲ್ಲಿ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿಯನ್ನು (Priyanka Jarkiholi) ಗೆಲ್ಲಿಸಲು ಪಣ ತೊಟ್ಟಿರುವ ಲಕ್ಷ್ಮಣ ಸವದಿ (Laxman Savadi) ಅಲ್ಲಗಳೆದರು. ಚಿಕ್ಕೋಡಿಯಲ್ಲಿ ಇಂದು ಟಿವಿ9 ವರದಿಗಾರನೊಂದಿಗೆ ಮಾತಾಡಿದ ಸವದಿ, ಇನ್ನೂ ಚುನಾವಣಾ ಪ್ರಚಾರ ಆರಂಭವಾಗಿಲ್ಲ, ಈಗಷ್ಟೇ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ, ನಾಮಪತ್ರಗಳ ಸಲ್ಲಿಕೆಯಾದ ಬಳಿಕ ಚುನಾವಣಾ ಸಮಿತಿಗಳನ್ನು ರಚಿಸಿ ಪ್ರಚಾರ ಆರಂಭಿಸಲಾಗುತ್ತದೆ. ಪಕ್ಷದ ಹೈಕಮಾಂಡ್ ಇದುವರೆಗೆ ಯಾರಿಗೂ ಕ್ಷೇತ್ರಗಳ ಜವಾಬ್ದಾರಿಯನ್ನು ವಹಿಸಿಕೊಟ್ಟಿಲ್ಲ, ಅಭ್ಯರ್ಥಿಗಳ ಆಯ್ಕೆಗಾಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಮೀಕ್ಷೆಗಳನ್ನು ನೀಡುವ ಕೆಲಸವಹಿಸಿಕೊಡಲಾಗಿತ್ತು, ಪ್ರಚಾರ ಕಾರ್ಯದಲ್ಲಿ ಯಾರನ್ನು ಕಡೆಗಣಿಸಿದ್ದಾರೆ ಯಾರನ್ನು ಪರಾಂಬರಿಸಿದ್ದಾರೆ ಅಂತ ಪ್ರಶ್ನೆ ಉದ್ಭವಿಸಲ್ಲ ಎಂದು ಸವದಿ ಹೇಳಿದರು. ಚುನಾವಣೆಯ ಸಂದರ್ಭದಲ್ಲಿ ಜವಾಬ್ದಾರಿ ನೀಡಿದರೆ ಮಾತ್ರ ಕೆಲಸ ಮಾಡಬೇಕು ಅಂತಿರಲ್ಲ, ಎಲ್ಲರೂ ಜವಾಬ್ದಾರಿ ಅರಿತು ಕೆಲಸ ಮಾಡಬೇಕಾಗುತ್ತದೆ ಎಂದು ಲಕ್ಷ್ಮಣ ಸವದಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿ ಮುಂಭಾಗದ ಪೋಸ್ಟರ್ ನಲ್ಲಿ ಲಕ್ಷ್ಮಣ ಸವದಿ ಫೋಟೋ ಇಲ್ಲದಿರುವುದು ಪ್ರಮಾದವೋ?