ವಕ್ಫ್ ಭೂವಿವಾದ; ಬಿಜೆಪಿ ಅಧಿಕಾರದಲ್ಲಿದ್ದಾಗಲೂ ರೈತರಿಗೆ ನೋಟೀಸ್​ ಜಾರಿಯಾಗಿದ್ದವು: ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ

Updated on: Oct 31, 2024 | 6:07 PM

ವಕ್ಫ್ ಬೋರ್ಡ್ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ರೈತರ ಹೊಲಗಳಿಗೆ ಧಕ್ಕೆಯಿಲ್ಲ, ಕೊಟ್ಟಿರುವ ನೋಟೀಸ್​ಗಳನ್ನು ವಾಪಸ್ಸು ಪಡೆಯಲಾಗುವುದು, ಬಿಜೆಪಿ ವೃಥಾ ರಾಜಕಾರಣ ಮಾಡುತ್ತಿದೆ, ಅದು ಅಧಿಕಾರಲ್ಲಿದ್ದಾಗ 200ಕ್ಕೂ ಹೆಚ್ಚು ನೋಟೀಸ್​ಗಳನ್ನು ರೈತರಿಗೆ ನೀಡಿತ್ತಲ್ಲ? ಬಿಜೆಪಿ ನಾಯಕರು ಅದನ್ನು ಮರೆತಿದ್ದಾರಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಬೆಂಗಳೂರು: ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಷಯಗಳನ್ನು ಕೋರುತ್ತಾ ಮಾತು ಆರಂಭಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಶಕ್ತಿ ಯೋಜನೆಯನ್ನು ಪರಿಷ್ಕರಣೆ ಮಾಡುವ ಯೋಚನೆ ಸರ್ಕಾರದ ಮುಂದಿಲ್ಲ, ಅಂಥ ಪ್ರಸ್ತಾವನೆ ಇಲ್ಲ ಮತ್ತು ಸರ್ಕಾರದ ಉದ್ದೇಶವೂ ಆಗಿಲ್ಲ ಎಂದು ಹೇಳಿದರು. ಮಹಿಳೆಯರು ಮಾತಾಡಿಕೊಳ್ಳುತ್ತಿದ್ದಾರೆ, ವಿಷಯದ ಬಗ್ಗೆ ಚರ್ಚೆ ಆಗಿರುವಂತಿದೆ, ಅದರೆ ತಾನು ಚರ್ಚೆಯ ಭಾಗವಾಗಿರಲಿಲ್ಲ, ಮಾಹಿತಿ ಸಂಗ್ರಹಿಸಿ ಉತ್ತರಿಸುತ್ತೇವೆ ಎಂದು ಸಿಎಂ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಮುಡಾ ಸೈಟ್​ ಹಿಂಪಡೆಯಲು ಸಿದ್ದರಾಮಯ್ಯ ಸಮ್ಮತಿ: ನಿವೇಶನ ​ಪಡೆದವರಿಗೆ ಟೆನ್ಷನ್​ ಶುರು

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.