ಮುಡಾ ಸೈಟ್​ ಹಿಂಪಡೆಯಲು ಸಿದ್ದರಾಮಯ್ಯ ಸಮ್ಮತಿ: ನಿವೇಶನ ​ಪಡೆದವರಿಗೆ ಟೆನ್ಷನ್​ ಶುರು

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನ ಹಂಚಿಕೆಯಲ್ಲಿನ ಹಗರಣ ತಿರುವು ಪಡೆದುಕೊಂಡಿದೆ. 2020ರಿಂದ ನೀಡಲಾದ ನಿವೇಶನಗಳನ್ನು ಹಿಂಪಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ. ಈ ಆದೇಶದಿಂದ 50:50 ಅನುಪಾತದಲ್ಲಿ ನಿವೇಶನ ಪಡೆದವರಿಗೆ ಆತಂಕ ಶುರುವಾಗಿದೆ.

ಮುಡಾ ಸೈಟ್​ ಹಿಂಪಡೆಯಲು ಸಿದ್ದರಾಮಯ್ಯ ಸಮ್ಮತಿ: ನಿವೇಶನ ​ಪಡೆದವರಿಗೆ ಟೆನ್ಷನ್​ ಶುರು
ಪತ್ರ, ಸಿದ್ದರಾಮಯ್ಯ
Follow us
| Updated By: ವಿವೇಕ ಬಿರಾದಾರ

Updated on:Oct 31, 2024 | 2:17 PM

ಮೈಸೂರು, ಅಕ್ಟೋಬರ್​ 31: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಹಗರಣ ತಿರುವು ಪಡೆದುಕೊಂಡಿದೆ. ಮುಡಾದಿಂದ ಹಂಚಿಕೆಯಾಗಿದ್ದ ನಿವೇಶನಗಳನ್ನು ರದ್ದುಗೊಳಿಸುವಂತೆ ಬಿಜೆಪಿ ಶಾಸಕ (BJP MLA) ಬರೆದಿದ್ದ ಪತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಸಮ್ಮತಿ ಸೂಚಿಸಿದ್ದಾರೆ. ಮುಡಾ ಹಗರಣ ಪತಿಗೆ ಕಂಟಕವಾಗಿ ಪರಿಣಮಿಸುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ನಿ ಪಾರ್ವತಿಯವರು ಮುಡಾದಿಂದ ಹಂಚಿಕೆಯಾಗಿದ್ದ ನಿವೇಶನಗಳನ್ನು ವಾಪಸ್​ ನೀಡಿದ್ದರು.

ಈ ಬೆನ್ನಲ್ಲೇ ಮೈಸೂರು ಬಿಜೆಪಿ ಶಾಸಕ ಟಿ.ಎಸ್​ ಶ್ರೀವತ್ಸ್​ 2020ರಲ್ಲಿ 50:50 ಅನುಪಾತದಲ್ಲಿ ಹಂಚಿಕೆಯಾಗಿದ್ದ ಮುಡಾ ನಿವೇಶನಗಳನ್ನು ರದ್ದುಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಶಾಸಕ ಟಿಎಸ್​ ಶ್ರೀವತ್ಸ್​ ಅವರ ಪತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮತಿ ಸೂಚಿಸಿದ್ದಾರೆ. 50:50 ಅನುಪಾತದ ನಿವೇಶನಗಳನ್ನು ಹಿಂಪಡೆಯಲು ಅಗತ್ಯ ಕ್ರಮಕೈಗೊಳ್ಳಿ ಎಂದು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಲಿಖಿತ ಸೂಚನೆ ನೀಡಿದ್ದಾರೆ. ಇದರಿಂದ 50:50 ಅನುಪಾತದಲ್ಲಿ ನಿವೇಶನ ಪಡೆದವರಿಗೆ ಟೆನ್ಷನ್ ಶುರುವಾಗಿದೆ.

ಇದನ್ನೂ ಓದಿ: ಮುಡಾ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ: ಮುಡಾ ಮಾಜಿ ಆಯುಕ್ತ ನಟೇಶ್ ಇಡಿ ವಶಕ್ಕೆ

ಶ್ರೀವತ್ಸ್​ ಪತ್ರದಲ್ಲಿ ಏನಿದೆ?

ಬಿಜೆಪಿ ಶಾಸಕ ಶ್ರೀವತ್ಸ್​ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ “ತಮ್ಮ ಪತ್ನಿಯವರಾದ ಶ್ರೀಮತಿ ಪಾರ್ವತಿಯವರು ಮುಡಾ ನಿವೇಶನಗಳನ್ನು ಹಿಂದಿರುಗಿಸಿರುವುದನ್ನು ಸ್ವಾಗತಿಸುತ್ತೇವೆ. ಮುಂದುವರೆಯುತ್ತಾ, 2020 ರಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ ನಟೇಶ್ ಕೆಎಎನ್​ರವರ ಅವಧಿಯಿಂದ ದಿನೇಶ್ ಕೆಎಎಸ್​ ಅವಧಿಯವರೆಗೆ ಅಕ್ರಮ ನಿವೇಶನಗಳನ್ನು ಮನಸೋಇಚ್ಛೆ ಹಂಚಿಕೆ ಮಾಡಲಾಗಿದೆ.

ಇಂತಹ ಎಲ್ಲ ಅಕ್ರಮ ನಿವೇಶನಗಳ ಆದೇಶಗಳನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಭಿವೃದ್ಧಿಯ ದೃಷ್ಟಿಯಿಂದ ರದ್ದುಗೊಳಿಸಿ ನಿವೇಶನಗಳನ್ನು ಹಿಂಪಡೆಯಲು ಸೂಕ್ತ ಆದೇಶ ನೀಡಬೇಕು.” ಎಂದು ಪತ್ರದ ಮೂಲಕ ಮನವಿ ಮಾಡಿದ್ದರು.

2020 ರಿಂದ 2024 ಅವಧಿಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಉಪಯೋಗಿಸಿಕೊಂಡಿರುವ ಜಮೀನಿಗೆ ಪರಿಹಾರವಾಗಿ ಕಾನೂನು ಬಾಹಿರವಾಗಿ ರಚಿತ ಬೇರೆ ಬಡಾವಣೆಗಳಲ್ಲಿ ನೀಡಲಾಗಿರುವ ಎಲ್ಲಾ ಬದಲಿ ನಿವೇಶನಗಳನ್ನು ಹಿಂಪಡೆಯಬೇಕು.

  •  ತಾಂತ್ರಿಕ ಸಮಿತಿಯ ವರದಿ ಮತ್ತು ಅಭಿಪ್ರಾಯಗಳನ್ನು ಕೂಡಲೇ ಜಾರಿಗೊಳಿಸಬೇಕು.
  • ಅಕ್ರಮ ನಿವೇಶನಗಳ ಬಗ್ಗೆ ಕೂಡಲೇ ಸಂಬಂಧಪಟ್ಟ ಉಪ ನೋಂದಣಾಧಿಕಾರಿ/ ಜಿಲ್ಲಾ ನೋಂದಣಾಧಿಕಾರಿಗಳಿಗೆ ನಿರ್ದೇಶನ ನೀಡಿ ಆಸ್ತಿಗಳು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವಿವಾದಿತ ಆಸ್ತಿಗಳು ಎಂದು ಇಸಿಯಲ್ಲಿ ದಾಖಲಿಸಬೇಕು.
  • ಈ ಅಕ್ರಮ ನಿವೇಶನಗಳಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಚಟುವಟಿಕೆಗಳು ನಡೆಯದಂತೆ ಅದೇಶಿಸಬೇಕು ಎಂದು ಬಿಜೆಪಿ ಶಾಸಕ ಶ್ರೀವತ್ಸ್​ ಪತ್ರ ಬರೆದಿದ್ದಾರೆ. ಶಾಸಕ ಶ್ರೀವತ್ಸ್​ ಅವರ ಪತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮತಿ ಸೂಚಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:38 pm, Thu, 31 October 24

ಮಸ್ಟಾಂಗ್, ವೆಲ್​ಫೈಯರ್​; ಹೇಗಿದೆ ನೋಡಿ ದರ್ಶನ್ ಕಾರ್ ಕಲೆಕ್ಷನ್
ಮಸ್ಟಾಂಗ್, ವೆಲ್​ಫೈಯರ್​; ಹೇಗಿದೆ ನೋಡಿ ದರ್ಶನ್ ಕಾರ್ ಕಲೆಕ್ಷನ್
ಬೆನ್ನುನೋವಿನ ಸಮಸ್ಯೆಗಾಗಿ ಇಂದು ಮಧ್ಯಾಹ್ನ ವೈದ್ಯರನ್ನು ಕಾಣಲಿರುವ ದರ್ಶನ್
ಬೆನ್ನುನೋವಿನ ಸಮಸ್ಯೆಗಾಗಿ ಇಂದು ಮಧ್ಯಾಹ್ನ ವೈದ್ಯರನ್ನು ಕಾಣಲಿರುವ ದರ್ಶನ್
ಅನ್ನಭಾಗ್ಯ ಯೋಜನೆಯಡಿ ನೀಡುವ ಅಕ್ಕಿ ಕಡಿತಗೊಳಿಸುವ ಸಾಧ್ಯತೆ: ಕುಮಾರಸ್ವಾಮಿ
ಅನ್ನಭಾಗ್ಯ ಯೋಜನೆಯಡಿ ನೀಡುವ ಅಕ್ಕಿ ಕಡಿತಗೊಳಿಸುವ ಸಾಧ್ಯತೆ: ಕುಮಾರಸ್ವಾಮಿ
‘ನಿಮ್ಮ ಗುಣವೇ ಸರಿಯಿಲ್ಲ’; ಮಂಜು-ಭವ್ಯಾ ಮಧ್ಯೆ ನಡೆಯಿತು ಜಗಳ
‘ನಿಮ್ಮ ಗುಣವೇ ಸರಿಯಿಲ್ಲ’; ಮಂಜು-ಭವ್ಯಾ ಮಧ್ಯೆ ನಡೆಯಿತು ಜಗಳ
Daily Devotional: ಅಭ್ಯಂಜನ ಸ್ನಾನದ ಮಹತ್ವ ಹಾಗೂ ಪ್ರಯೋಜನ ತಿಳಿಯಿರಿ
Daily Devotional: ಅಭ್ಯಂಜನ ಸ್ನಾನದ ಮಹತ್ವ ಹಾಗೂ ಪ್ರಯೋಜನ ತಿಳಿಯಿರಿ
Nithya Bhavishya: ನರಕ ಚತುರ್ದಶಿ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನರಕ ಚತುರ್ದಶಿ ದಿನದ ರಾಶಿ ಭವಿಷ್ಯ ತಿಳಿಯಿರಿ
ಜಾಮೀನು ಪಡೆದು ಬಳ್ಳಾರಿಯಿಂದ ಹೊರಟ ದರ್ಶನ್ ಕಾರಿಗೆ ಮುಗಿಬಿದ್ದ ಅಭಿಮಾನಿಗಳು
ಜಾಮೀನು ಪಡೆದು ಬಳ್ಳಾರಿಯಿಂದ ಹೊರಟ ದರ್ಶನ್ ಕಾರಿಗೆ ಮುಗಿಬಿದ್ದ ಅಭಿಮಾನಿಗಳು
ಪ್ರಚಾರಕ್ಕೆ ಹೋದ ಜನಾರ್ದನ ರೆಡ್ಡಿ, ಶ್ರೀರಾಮುಲುಗೆ ತರಾಟೆಗೆ ತೆಗೆದುಕೊಂಡ ಜನ
ಪ್ರಚಾರಕ್ಕೆ ಹೋದ ಜನಾರ್ದನ ರೆಡ್ಡಿ, ಶ್ರೀರಾಮುಲುಗೆ ತರಾಟೆಗೆ ತೆಗೆದುಕೊಂಡ ಜನ
‘ಕಾಟೇರ’ ಶೂಟಿಂಗ್ ವೇಳೆಯೇ ದರ್ಶನ್​ಗೆ ಬೆನ್ನು ನೋವು ಇತ್ತು: ತರುಣ್ ಸುಧೀರ್
‘ಕಾಟೇರ’ ಶೂಟಿಂಗ್ ವೇಳೆಯೇ ದರ್ಶನ್​ಗೆ ಬೆನ್ನು ನೋವು ಇತ್ತು: ತರುಣ್ ಸುಧೀರ್
ಅಯೋಧ್ಯೆಯ ಸರಯೂ ನದಿ ದಡದಲ್ಲಿ ಪ್ರಜ್ವಲಿಸಿದ ಲಕ್ಷಾಂತರ ದೀಪಗಳು
ಅಯೋಧ್ಯೆಯ ಸರಯೂ ನದಿ ದಡದಲ್ಲಿ ಪ್ರಜ್ವಲಿಸಿದ ಲಕ್ಷಾಂತರ ದೀಪಗಳು