AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್​​ನಲ್ಲಿ ಮಾತ್ರವಲ್ಲ ಬಿಜೆಪಿಯಲ್ಲೂ ನವೆಂಬರ್ ಕ್ರಾಂತಿ: ರಾಜ್ಯ ರಾಜಕಾರಣದಲ್ಲಿ ಸಂಚಲನ

ಕಾಂಗ್ರೆಸ್​​ನಲ್ಲಿ ಮಾತ್ರವಲ್ಲ ಬಿಜೆಪಿಯಲ್ಲೂ ನವೆಂಬರ್ ಕ್ರಾಂತಿ: ರಾಜ್ಯ ರಾಜಕಾರಣದಲ್ಲಿ ಸಂಚಲನ

ರಮೇಶ್ ಬಿ. ಜವಳಗೇರಾ
|

Updated on:Oct 14, 2025 | 7:34 PM

Share

ನವೆಂಬರ್‌ ತಿಂಗಳಿಗೆ ಕೌಂಡ್‌ಡೌನ್‌ ಶುರುವಾಗಿದೆ. ಸಿದ್ದರಾಮಯ್ಯ ಎರಡನೇ ಬಾರಿ ಸಿಎಂ ಆಗಿ ಎರಡುವರೆ ವರ್ಷ ಆಗುತ್ತಿದೆ. ಸಂಪುಟ ಪುನರ್ ರಚನೆ ಚರ್ಚೆ ಜೋರಾಗಿದ್ದು, ಈ ಸಂಬಂಧ ಎಲ್ಲದಕ್ಕೂ ಸಿದ್ಧರಾಗಿರಿ ಎಂದು ಸಿಎಂ ಸಿದ್ದರಾಮಯ್ಯ ಸಚಿವರಿಗೆ ಹೇಳಿ ಆಗಿದೆ. ಇದರೊಂದಿಗೆ ನವೆಂಬರ್ ಕ್ರಾಂತಿಗೆ ಮುನ್ನುಡಿ ಬರೆದಂತಾಗಿದೆ. ಈ ಸಚಿವ ಸಂಪುಟ ಪುನರ್ ರಚನೆ ನಡುವೆಯೇ ನಾಯಕತ್ವ ಬದಲಾವಣೆ ಚರ್ಚೆ ಸಹ ಜೋರಾಗಿದೆ. ಹೀಗಾಗಿ ರಾಜ್ಯ ಕಾಂಗ್ರೆಸ್​​ ನಲ್ಲಿ ರಾಜಕೀಯ ಚಟುವಟಿಕೆಗಳು ಜೋರಾಗಿವೆ. ಇನ್ನೊಂದೆಡೆ ಬಿಜೆಪಿಯಲ್ಲೂ ಸಹ ನವೆಂಬರ್ ಕ್ರಾಂತಿಯಾಗಲಿದೆ ಎಂದು ಕೈ ಹಿರಿಯ ನಾಯಕ ಕೆಎನ್ ರಾಜಣ್ಣ ಸ್ಫೋಟಕ ಹೇಳಿಕೆ ನೀಡಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ತುಮಕೂರು, (ಅಕ್ಟೋಬರ್ 14): ನವೆಂಬರ್‌ ತಿಂಗಳಿಗೆ ಕೌಂಡ್‌ಡೌನ್‌ ಶುರುವಾಗಿದೆ. ಸಿದ್ದರಾಮಯ್ಯ ಎರಡನೇ ಬಾರಿ ಸಿಎಂ ಆಗಿ ಎರಡುವರೆ ವರ್ಷ ಆಗುತ್ತಿದೆ. ಸಂಪುಟ ಪುನರ್ ರಚನೆ ಚರ್ಚೆ ಜೋರಾಗಿದ್ದು, ಈ ಸಂಬಂಧ ಎಲ್ಲದಕ್ಕೂ ಸಿದ್ಧರಾಗಿರಿ ಎಂದು ಸಿಎಂ ಸಿದ್ದರಾಮಯ್ಯ ಸಚಿವರಿಗೆ ಹೇಳಿ ಆಗಿದೆ. ಇದರೊಂದಿಗೆ ನವೆಂಬರ್ ಕ್ರಾಂತಿಗೆ ಮುನ್ನುಡಿ ಬರೆದಂತಾಗಿದೆ. ಈ ಸಚಿವ ಸಂಪುಟ ಪುನರ್ ರಚನೆ ನಡುವೆಯೇ ನಾಯಕತ್ವ ಬದಲಾವಣೆ ಚರ್ಚೆ ಸಹ ಜೋರಾಗಿದೆ. ಹೀಗಾಗಿ ರಾಜ್ಯ ಕಾಂಗ್ರೆಸ್​​ ನಲ್ಲಿ ರಾಜಕೀಯ ಚಟುವಟಿಕೆಗಳು ಜೋರಾಗಿವೆ. ಇನ್ನೊಂದೆಡೆ ಬಿಜೆಪಿಯಲ್ಲೂ ಸಹ ನವೆಂಬರ್ ಕ್ರಾಂತಿಯಾಗಲಿದೆ ಎಂದು ಕೈ ಹಿರಿಯ ನಾಯಕ ಕೆಎನ್ ರಾಜಣ್ಣ ಸ್ಫೋಟಕ ಹೇಳಿಕೆ ನೀಡಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ತುಮಕೂರಿನಲ್ಲಿ ಮಾತನಾಡಿದ ಮಾಜಿ ಸಚಿವ ಕೆ.ಎನ್​.ರಾಜಣ್ಣ , ನೀವು ಬರೀ ಕಾಂಗ್ರೆಸ್​ನವರ ಬಗ್ಗೆ ಮಾತ್ರ ಮಾತಾಡ್ತೀರಾ? ಬಿಜೆಪಿಯಲ್ಲೂ ನವೆಂಬರ್ ಕ್ರಾಂತಿ ಆಗುತ್ತೆ. ವಿಜಯೇಂದ್ರರನ್ನ ತೆಗೆಯಬೇಕು ಅಂತಾ ಒಂದು ಗುಂಪಿದೆ. ಒಂದು ವೇಳೆ ವಿಜಯೇಂದ್ರ ತೆಗೆದ್ರೆ ಯಡಿಯೂರಪ್ಪ ಸುಮ್ಮನಿರ್ತಾರಾ? ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯ. ಬಿಎಸ್​ವೈಗೆ ಮತ ವರ್ಗಾವಣೆ ಮಾಡುವ ಸಾಮರ್ಥ್ಯವಿದೆ. ಅಂತಹ ನಾಯಕರ ವಿರುದ್ಧ ತೀರ್ಮಾನ ತೆಗೆದುಕೊಳ್ಳುವಾಗ ಹೈಕಮಾಂಡ್ ಸಾಕಷ್ಟು ಯೋಚನೆ ಮಾಡುತ್ತೆ. ಸಿದ್ದರಾಮಯ್ಯ ಸಹ ಅಂತಹ ಸಾಮರ್ಥ್ಯ ಇರುವವರು ಎಂದರು.

Published on: Oct 14, 2025 07:12 PM