ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಚೆಂಡೆ ಸದ್ದಿಗೆ ಸ್ಟೂಡೆಂಟ್ಸ್ ಭರ್ಜರಿ ಸ್ಟೆಪ್ಸ್
ಓಣಂ ಕೇರಳಿಗರ ಅತೀ ದೊಡ್ಡ ಹಬ್ಬ. ಆದ್ರೆ ಈ ಓಣಂ ಸಂಭ್ರಮದ ಕಂಪು ಕರ್ನಾಟಕ ಕರಾವಳಿಯಲ್ಲೂ ಸೂಸುತ್ತಿದೆ. ಓಣಂ ರಜೆ ಮುಗಿಸಿ ಬಂದ ವಿದ್ಯಾರ್ಥಿಗಳಿಗಾಗಿ ಕಾಲೇಜೊಂದರಲ್ಲಿ ಹಬ್ಬದ ಸಂಭ್ರಮವನ್ನು ಸೃಷ್ಟಿಸಲಾಗಿತ್ತು. ವಿಶಿಷ್ಟ ರೀತಿಯಲ್ಲಿ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಬ್ಬವನ್ನು ಕಲರ್ ಫುಲ್ಲಾಗಿ ಆಚರಿಸಿದ್ರು.
ಮಂಗಳೂರು, ಸೆ.29: ಮಂಗಳೂರು ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ್ ಕಾಲೇಜಿನಲ್ಲಿ ಓಣಂ ಹಬ್ಬದ ಸಂಭ್ರಮ ಮನೆ ಮಾಡಿದೆ. ಓಣಂ ರಜೆ ಮುಗಿಸಿ ಬಂದ ವಿದ್ಯಾರ್ಥಿಗಳಿಗಾಗಿ ಕಾಲೇಜು ಆಡಳಿತ ಮಂಡಳಿ ಕಾಲೇಜಿನಲ್ಲೇ ಓಣಂ ಹಬ್ಬವನ್ನು ಆಚರಿಸಿತ್ತು. ವಿದ್ಯಾರ್ಥಿಗಳು ನಿತ್ಯದ ಸಮವಸ್ತ್ರ ಬಿಟ್ಟು ಕಲರ್ ಡ್ರೆಸ್ ನಲ್ಲಿ ಮಿಂಚುತ್ತಿದ್ರು. ಮೊದಲಿಗೆ ಕಾಲೇಜಿನ ಕ್ಯಾಂಪಸ್‌ನಲ್ಲಿ ಪುರಾಣ ಪುರುಷ ಮಹಾಬಲಿಯನ್ನು ಮೆರವಣಿಗೆಯಲ್ಲಿ ಕೆರತರಲಾಯಿತು. ಬಳಿಕ ತೆಂಗಿನ ಹೂವನ್ನು ಅರಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇನ್ನು ಚಂಡೆ ಕುಣಿತ, ಮಾಪ್ಲೆ ಸಾಂಗ್ ಸೇರಿದಂತೆ ಸಾಂಸ್ಕೃತಿಕ ವೈಭವವನ್ನು ಮಾಡಲಾಯ್ತು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ