ವನ್​ಪ್ಲಸ್​​ ನಾರ್ಡ್ ಸಿಇ ಸ್ಮಾರ್ಟ್ ಫೋನ್ ಕೆಲವೇ ದಿನಗಳಲ್ಲಿ ಭಾರತದ ಮಾರ್ಕೆಟ್ ಪ್ರವೇಶಿಸಲಿದೆ

ಲೀಕ್ ಆಗಿರುವ ಮಾಹಿತಿಯು ನಾವು ಹೊಸ ವನ್​ಪ್ಲಸ್​ ನಾರ್ಡ್ ಸಿಇ ಸ್ಮಾರ್ಟ್ ಫೋನ್ ಬಗ್ಗೆ ಏನೆಲ್ಲ ನಿರೀಕ್ಷೆ ಇಟ್ಟುಕೊಳ್ಳಬಹುದೆನ್ನುವುದಕ್ಕೆ ಒಂದು ಸುಳಿವು ನೀಡುತ್ತದೆ.

TV9kannada Web Team

| Edited By: Arun Belly

Dec 15, 2021 | 1:03 AM

ಮಾಧ್ಯಮಗಳಿಗೆ ಲೀಕ್ ಆಗಿರುವ ಮಾಹಿತಿಯನ್ನು ನಂಬುವುದಾದರೆ, ವನ್​ಪ್ಲಸ್​ ನಾರ್ಡ್ ಸಿಇ ಸ್ಮಾರ್ಟ್ ಫೋನ್ ಅತಿ ಶೀಘ್ರದಲ್ಲೇ ಭಾರತೀಯ ಮಾರ್ಕೆಟ್ ಪ್ರವೇಶಿಸಲಿದೆ. ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ್ ಇವಾನ್ ಎಂಬ ಕೋಡ್ ಹೆಸರಿನಲ್ಲಿ ತಯಾರಾಗುತ್ತಿರುವ ಮತ್ತು ಐವಿ 2201 ಮಾಡೆಲ್ ಹೊದಿರುವ ವನ್​ಪ್ಲಸ್​ ನಾರ್ಡ್ ಸಿಇ ಸ್ಮಾರ್ಟ್ ಫೋನ್​ಗಳ ಉತ್ಪಾದನೆಯು ಭರದಿಂದ ಸಾಗಿದೆ. ಫೋನ್ಗಳ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳದವರಿಗೆ ಈ ಮಾಹಿತಿ; ವನ್​ಪ್ಲಸ್​ ನಾರ್ಡ್ ಸಿಇ ಫೋನು ವನ್​ಪ್ಲಸ್​ ನಾರ್ಡ್ ಆವೃತ್ತಿಗಿಂತ ಕಡಿಮೆ ವರ್ಚಸ್ಸು ಮತ್ತು ಕೊಂಚ ಕಡಿಮೆ ಬೆಲೆಯ ಫೋನ್ ಆಗಿದೆ.

ಲೀಕ್ ಆಗಿರುವ ಮಾಹಿತಿಯು ನಾವು ಹೊಸ ವನ್​ಪ್ಲಸ್​ ನಾರ್ಡ್ ಸಿಇ ಸ್ಮಾರ್ಟ್ ಫೋನ್ ಬಗ್ಗೆ ಏನೆಲ್ಲ ನಿರೀಕ್ಷೆ ಇಟ್ಟುಕೊಳ್ಳಬಹುದೆನ್ನುವುದಕ್ಕೆ ಒಂದು ಸುಳಿವು ನೀಡುತ್ತದೆ.

ಅಂದಹಾಗೆ, ಇದರ ಬೆಲೆ ಎಷ್ಟಿರಬಹುದು ಅನ್ನುವ ಸುಳಿವನ್ನೂ ನಿಮಗೆ ನೀಡಿಬಿಡುತ್ತೇವೆ. ರೂ. 24,000 ಗಳಿಂದ ರೂ. 28,000 ವರೆಗೆ ಇರಲಿದೆ.

ವನ್​ಪ್ಲಸ್​ ನಾರ್ಡ್ ಸಿಇ ಸ್ಮಾರ್ಟ್ ಫೋನ್ ಮೀಡಿಯಾ ಟೆಕ್ ಡೈಮಿನ್ಸಿಟಿ 900 5ಜಿ ಚಿಪ್ ಸೆಟ್ ನಿಂದ ಕಾರ್ಯಾಗತಗೊಳ್ಳಬಹುದೆಂದು ನಿರೀಕ್ಷಿಸಲಾಗಿದೆ.

ಹೊಸ ಫೋನಿನ ಹಿಂಭಾಗದಲ್ಲಿ 64 ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್, 8 ಮೆಗಾಪಿಕ್ಸಲ್ ವಿಸ್ತೃತ ಲೆನ್ಸ್, ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಒಳಗೊಂಡ ತ್ರಿವಳಿ ಕೆಮೆರಾಗಳ ಸೆಟಪ್ ಇರುವ ನಿರೀಕ್ಷೆಯಿದೆ. ಫೋನಿನ ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಸೆಲ್ಫೀ ಶೂಟರ್ ಇರಲಿದೆ.

ಇದನ್ನೂ ಓದಿ:   Viral Video: ಮದುವೆ ಮಂಟಪದಲ್ಲಿ ತಮಾಷೆ ಮಾಡಿದ ವರನ ಸ್ನೇಹಿತರಿಗೆ ಸರಿಯಾದ ಉತ್ತರ ಕೊಟ್ಟ ವಧು; ವಿಡಿಯೋ ನೋಡಿ

Follow us on

Click on your DTH Provider to Add TV9 Kannada