ರಾತ್ರಿಯಿಡೀ ಧಾರಾಕಾರ ಮಳೆ, ಹಗಲಿಡೀ ತುಂತುರು ಮಳೆ, ಬೆಂಗಳೂರನ್ನು ಬೆಂಬಿಡದ ವರುಣದೇವ!

ರಾತ್ರಿಯಿಡೀ ಧಾರಾಕಾರ ಮಳೆ, ಹಗಲಿಡೀ ತುಂತುರು ಮಳೆ, ಬೆಂಗಳೂರನ್ನು ಬೆಂಬಿಡದ ವರುಣದೇವ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 06, 2021 | 9:57 PM

ಮಂಗಳವಾರ ರಾತ್ರಿ ಧಾರಾಕಾರವಾಗಿ ಸುರಿದ ಮಳೆ ತನ್ನ ಪ್ರತಾಪವನ್ನು ಬುಧವಾರವೂ ಮುಂದುವರೆಸಿತು. ಅದರೆ ದಿನವಿಡೀ ನಗರದ ನಿವಾಸಿಗಳನ್ನು ಕಾಡಿದ್ದು ನಿಲ್ಲದ ತುಂತುರು ಮಳೆ.

ಬೆಂಗಳೂರು ಮಹಾನಗರದಲ್ಲಿ ಮಳೆರಾಯನ ಕಾಟ ಮುಂದಿವರೆದಿದೆ. ಕಳೆದೊಂದು ವಾರದಿಂದ ಪ್ರತಿದಿನ ಮಳೆಯಾಗುತ್ತಿದೆ. ಮಂಗಳವಾರ ರಾತ್ರಿ ಧಾರಾಕಾರವಾಗಿ ಸುರಿದ ಮಳೆ ತನ್ನ ಪ್ರತಾಪವನ್ನು ಬುಧವಾರವೂ ಮುಂದುವರೆಸಿತು. ಅದರೆ ದಿನವಿಡೀ ನಗರದ ನಿವಾಸಿಗಳನ್ನು ಕಾಡಿದ್ದು ನಿಲ್ಲದ ತುಂತುರು ಮಳೆ. ರಾತ್ರಿಯಿಡೀ ಮಳೆ ಜೋರಾಗಿದ್ದರಿಂದ ನಗರದ ಪ್ರಮುಖ ರಸ್ತೆಗಳ ಮೇಲೆ ಮೊಣಕಾಲು ಮಟ್ಟ ನೀರು ಹರಿಯುತಿತ್ತು. ಬಿ ಎಮ್ ಟಿ ಸಿ ಬಸ್ಸುಗಳು, ಕಾರು, ಆಟೋ, ಬೈಕ್ ಇನ್ನಿತರ ವಾಹನಗಳು ಜಲಾವೃತ ರೋಡ್​ಗಳ ಮೇಲೆಯೇ ತಮ್ಮ ಪಕ್ಕದಲ್ಲಿದ್ದ ವಾಹನ ಮತ್ತು ಕೊಡೆ ಹಿಡಿದೋ, ರೇನ್ ಕೋಟ್ ಇಲ್ಲವೇ ಜರ್ಕಿನ್​ಘಳನ್ನು ಧರಿಸಿಯೋ ರಸ್ತೆಗಳ ಮೇಲೆ ಬ್ಯಾಲೆನ್ಸ್ ಮಾಡುತ್ತಾ ಅತಿ ಜಾಗರೂಕತೆಯಿಂದ ನಡೆದು ಹೋಗುತ್ತಿದ್ದ ಪಾದಾಚಾರಿಗಳ ಮೇಲೆ ನೀರು ಹಾರಿಸುತ್ತಾ ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಪಾದಾಚಾರಿಗಳ ಜೊತೆ ವಾಹನಗಳ ಚಾಲಕರು ಸಹ ರಸ್ತೆಗಳ ಸ್ಥಿತಿಗಾಗಿ ಬಿ ಬಿ ಎಮ್ ಪಿ ಮತ್ತು ಸರ್ಕಾರವನ್ನು ಶಪಿಸುತ್ತಿದ್ದರು.

ಶಾಂತಿನಗರ, ಮೆಜೆಸ್ಟಿಕ್, ಮಲ್ಲೇಶ್ವರಂ, ಯಶ್ವಂತಪುರ, ರಾಜಾಜಿನಗರ, ಆರ್ ಆರ್ ನಗರ, ಸದಾಶಿವ ನಗರ, ಜಯನಗರ, ವಿಜಯನಗರ, ಹಲಸೂರು, ವಿವೇಕ್ ನಗರ, ಹೆಬ್ಬಾಳ, ಯಲಹಂಕ, ಹೆಣ್ಣೂರು, ಕೊತ್ತನೂರು ಮೊದಲಾದ ಎಲ್ಲ ಪ್ರದೇಶಗಳಲ್ಲಿ ರಸ್ತೆಗಳ ಪಾಡು ಒಂದೇ ತೆರನಾಗಿತ್ತು. ನಗರದಲ್ಲಿನ ಹಳೆಯ ಕಟ್ಟಡಗಳಲ್ಲಿ ವಾಸಿಸುತ್ತಿರುವ ಜನ ಹೆದರಿಕೆಯಲ್ಲೇ ರಾತ್ರಿ ಕಳೆದಿದ್ದಾರೆ.

ಮಾರ್ಕೆಟ್ ಪ್ರದೇಶಗಳು ನೀರಿನಿಂದ ಅವೃತವಾಗಿದ್ದವು. ಇಲ್ಲಿ ನೋಡಿ, ಹೂವು ಮಾರುವವರ ಪ್ಲಾಸ್ಟಿಕ್ ಬುಟ್ಟಿಗಳು ನೀರಿನಲ್ಲಿ ತೇಲುತ್ತಿವೆ!

ಇದನ್ನೂ ಓದಿ:  Video: ಪ್ರತಿಭಟನಾನಿರತ ರೈತರ ಮೇಲೆ ಎರಡು ವಾಹನಗಳು ಹರಿದ ವಿಡಿಯೋ ಬಿಡುಗಡೆ ಮಾಡಿದ ಕಾಂಗ್ರೆಸ್​; ಪ್ರಧಾನಿ ಮೋದಿ ವಿರುದ್ಧ ಟೀಕೆ