ಬಾಗಲಕೋಟೆ: ಮೊಸಳೆ ಬಾಯಿಯಿಂದ ಮಾಲೀಕನನ್ನು ಕಾಪಾಡಿದ ಎತ್ತು
ಮನಷ್ಯರಿಗಿಂತ ಪ್ರಾಣಿಗಳಿಗೆ ನಿಯುತ್ತು ಜಾಸ್ತಿ ಎಂಬ ಮಾತು ಮತ್ತೆ ಇಲ್ಲಿ ಸಾಬೀತಾಗಿದೆ. ಮೊಸಳೆ ದಾಳಿಯಿಂದ ಯುವ ರೈತನನ್ನು ಎತ್ತು ಕಾಪಾಡಿದೆ. ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಹೊನ್ಯಾಳ ಗ್ರಾಮದಲ್ಲಿ ಘಟನೆ ನಡೆದಿದೆ.
ಬಾಗಲಕೋಟೆ, ಅಕ್ಟೋಬರ್ 11: ಮನಷ್ಯರಿಗಿಂತ ಪ್ರಾಣಿಗಳಿಗೆ ನಿಯುತ್ತು ಜಾಸ್ತಿ ಎಂಬ ಮಾತು ಮತ್ತೆ ಇಲ್ಲಿ ಸಾಬೀತಾಗಿದೆ. ಮೊಸಳೆ ದಾಳಿಯಿಂದ ಯುವ ರೈತನನ್ನು ಎತ್ತು ಕಾಪಾಡಿದೆ. ಬಾಗಲಕೋಟೆ (Bagalkot) ಜಿಲ್ಲೆ ಬೀಳಗಿ (Bilagi) ತಾಲೂಕಿನ ಹೊನ್ಯಾಳ ಗ್ರಾಮದ ಧರಿಯಪ್ಪ ಮೇಟಿ (32) ಎತ್ತಿನ ಮೈ ತೊಳೆಯಲು ಆಲಮಟ್ಟಿ ಜಲಾಶಯದ ಹಿನ್ನೀರು ಕೃಷ್ಣ ನದಿಗೆ ತೆರಳಿದ್ದರು. ಧರಿಯಪ್ಪ ಮೇಟಿ ಎತ್ತಿನ ಸಮೇತ ನದಿಗೆ ಇಳಿದಿದ್ದರು. ಈ ವೇಳೆ ಮೊಸಳೆ ದಾಳಿ ಮಾಡಿದ್ದು, ಧರಿಯಪ್ಪ ಮೇಟಿ ಅವರ ಬಲಗೈ ಹಿಡಿದಿದೆ.
ಮೊಸಳೆ ದಾಳಿ ಮಾಡಿದ ಕೂಡಲೇ ಧರಿಯಪ್ಪ ಮೇಟಿ ಎಡಗೈಯಿಂದ ಎತ್ತಿನ ಹಗ್ಗ ಹಿಡಿದ್ದಾರೆ. ಕೂಡಲೆ ಎತ್ತು ಮಾಲೀಕನನ್ನು ಹೊತ್ತು ದಡಕ್ಕೆ ಕರೆ ತಂದಿದೆ. ದಡಕ್ಕೆ ಬರುತ್ತಿದ್ದಂತೆ ಮೊಸಳೆ ಧರಿಯಪ್ಪ ಮೇಟಿಯವರನ್ನು ಬಿಟ್ಟು ಓಡಿದೆ. ಆದರೆ, ಅಷ್ಟರ ಒಳಗಾಗಿ ಧರಿಯಪ್ಪ ಮೇಟಿ ಅವರ ಬಲಗೈ ಕಟ್ ಆಗಿದೆ. ಎತ್ತು ಇಲ್ಲದಿದ್ದರೆ ಧರಿಯಪ್ಪ ಮೇಟಿ ಅವರ ಜೀವಕ್ಕೆ ಕುತ್ತು ಕಾದಿತ್ತು. ಈ ಮೂಲಕ ಎತ್ತು ಮಾಲೀಕನ ಜೀವ ಉಳಿಸಿದೆ.
ಇನ್ನು ಗಾಯಾಳು ಧರಿಯಪ್ಪ ಮೇಟಿ ಅವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೀಳಗಿ ಶಾಸಕ ಜೆಟಿ ಪಾಟಿಲ್ ಗಾಯಾಳು ಧರಿಯಪ್ಪ ಮೇಟಿ ಆರೋಗ್ಯ ವಿಚಾರಿಸಿದ್ದಾರೆ. ಶಾಸಕ ಜೆಟಿ ಪಾಟಿಲ್ ಅರಣ್ಯಾಧಿಕಾರಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ, ಧರಿಯಪ್ಪ ಮೇಟಿ ಅವರಿಗೆ ಸೂಕ್ತ ಪರಿಹಾರ ಕೊಡಬೇಕು. ಎಲ್ಲ ದಾಖಲೆಗಳನ್ನು ಕಲೆ ಹಾಕಿ ಪರಿಹಾರ ನೀಡಿ ಎಂದು ಸೂಚನೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ