ಆರ್ಥಿಕ ಸಂಕಷ್ಟದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ: ಬುಟ್ಟಿಯೇ ಮಂಜಮ್ಮ ಜೋಗತಿ ಜೀವನಕ್ಕಾಸರೆ
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿ ಬದುಕು ಸಾಗಿಸಲು ಮತ್ತೆ ಬುಟ್ಟಿ ಹಣಿಯುವ ಕಾಯಕಕ್ಕೆ ಇಳಿದಿದ್ದಾರೆ. ಸಮರ್ಪಕವಾಗಿ ಸಿಗದ ಮಾಶಾಸನ ಮತ್ತು ಕಾರ್ಯಕ್ರಮಗಳೂ ಇಲ್ಲದೆ ಆರ್ಥಿಕ ಸಂಕಷ್ಟ ಎದುರಾಗಿದ್ದು, ಜೀವನ ನಿರ್ವಹಣೆ ಕಷ್ಟವಾಗಿರುವ ಹಿನ್ನೆಲೆಯಲ್ಲಿ ಸ್ವಾವಲಂಬಿ ಬದುಕಿಗೆ ಮುಂದಾಗಿದ್ದಾರೆ. ಹೌದು....ಪದ್ಮಶ್ರೀ ಪ್ರಶಸ್ತಿ ಬಂದ ಬಳಿಕ ಕಾರ್ಯಕ್ರಮಗಳಿಗೆ ಆಹ್ವಾನಿಸಿ ಸನ್ಮಾನ ಮಾಡಿ ಗೌರವ ಸಂಭಾವನೆ ನೀಡುತ್ತಿದ್ದರು. ಜೊತೆಗೆ ಮಾಶಾಸನ ಬರುತ್ತಿದ್ದ ಕಾರಣ ಜೀವನ ನಿರ್ವಹಣೆ ನಡೆಯಿತ್ತು. ಆದರೆ ಈಗ ಈಗ ಕಾರ್ಯಕ್ರಮಗಳೂ ಇಲ್ಲ, ಗೌರವ ಸಂಭಾವನೆಯೂ ಇಲ್ಲದಂತಾಗಿದೆ. ಹೀಗಾಗಿ ಜೀವನ ನಿರ್ವಹಣೆಗಾಗಿ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ಬುಟ್ಟಿ ಹಣೆಯುವ ಕಾಯಕದ ಮೊರೆ ಹೋಗಿದ್ದಾರೆ
ವಿಜಯನಗರ, ನವೆಂಬರ್ 23: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿ ಬದುಕು ಸಾಗಿಸಲು ಮತ್ತೆ ಬುಟ್ಟಿ ಹಣಿಯುವ ಕಾಯಕಕ್ಕೆ ಇಳಿದಿದ್ದಾರೆ. ಸಮರ್ಪಕವಾಗಿ ಸಿಗದ ಮಾಶಾಸನ ಮತ್ತು ಕಾರ್ಯಕ್ರಮಗಳೂ ಇಲ್ಲದೆ ಆರ್ಥಿಕ ಸಂಕಷ್ಟ ಎದುರಾಗಿದ್ದು, ಜೀವನ ನಿರ್ವಹಣೆ ಕಷ್ಟವಾಗಿರುವ ಹಿನ್ನೆಲೆಯಲ್ಲಿ ಸ್ವಾವಲಂಬಿ ಬದುಕಿಗೆ ಮುಂದಾಗಿದ್ದಾರೆ. ಹೌದು….ಪದ್ಮಶ್ರೀ ಪ್ರಶಸ್ತಿ ಬಂದ ಬಳಿಕ ಕಾರ್ಯಕ್ರಮಗಳಿಗೆ ಆಹ್ವಾನಿಸಿ ಸನ್ಮಾನ ಮಾಡಿ ಗೌರವ ಸಂಭಾವನೆ ನೀಡುತ್ತಿದ್ದರು. ಜೊತೆಗೆ ಮಾಶಾಸನ ಬರುತ್ತಿದ್ದ ಕಾರಣ ಜೀವನ ನಿರ್ವಹಣೆ ನಡೆಯಿತ್ತು. ಆದರೆ ಈಗ ಈಗ ಕಾರ್ಯಕ್ರಮಗಳೂ ಇಲ್ಲ, ಗೌರವ ಸಂಭಾವನೆಯೂ ಇಲ್ಲದಂತಾಗಿದೆ. ಹೀಗಾಗಿ ಜೀವನ ನಿರ್ವಹಣೆಗಾಗಿ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ಬುಟ್ಟಿ ಹಣೆಯುವ ಕಾಯಕದ ಮೊರೆ ಹೋಗಿದ್ದಾರೆ. ಒಂದು ಬುಟ್ಟಿ ಹಣಿಯಲು ಒಂದು ದಿನದ ಶ್ರಮ ಹಾಕಬೇಕಿದ್ದು, 300 ರೂಪಾಯಿ ವೆಚ್ಚದಲ್ಲಿ ಸಿದ್ಧವಾಗುವ ಬುಟ್ಟಿಯನ್ನು 500ರಿಂದ 600 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ.
ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ಮಂಜಮ್ಮ ಜೋಗತಿ ಅವರು ವಾಸಿಸುತ್ತಿದ್ದಾರೆ. ಕಳೆದ ನಾಲ್ಕೈದು ತಿಂಗಳಿಂದ ಮಾಶಾಸನ ಬರುತ್ತಿಲ್ಲ, ಈ ಬಗ್ಗೆ ಸಮರ್ಪಕ ಉತ್ತರವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ನೀಡಿಲ್ಲವಂತೆ. ಹೀಗಾಗಿ ಪದ್ಮಶ್ರೀ ಗೌರವ ಪಡೆದ ಸಾಧಕಿಗೆ ಬದುಕು ಕಟ್ಟಿಕೊಳ್ಳಲು ಬುಟ್ಟಿ ಹಣಿಯುವ ಅನಿವಾರ್ಯತೆ ಎದುರಾಗಿದೆ.
