ಇದು ಯಾವ ಸೀಮೆಯ ಬೌಲಿಂಗ್: ಪಾಕ್ ಸ್ಪಿನ್ನರ್ ಶೈಲಿಗೆ ಗ್ರೀನ್ ಆಕ್ರೋಶ
Pakistan vs Australia, 2nd T20I: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 20 ಓವರ್ಗಳಲ್ಲಿ 198 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ 15.4 ಓವರ್ಗಳಲ್ಲಿ ಕೇವಲ 108 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಪಾಕ್ ಪಡೆ ಬರೋಬ್ಬರಿ 90 ರನ್ಗಳ ಜಯ ಸಾಧಿಸಿದೆ.
ಪಾಕಿಸ್ತಾನ್ ವಿರುದ್ಧದ 2ನೇ ಟಿ20 ಪಂದ್ಯದಲ್ಲೂ ಆಸ್ಟ್ರೇಲಿಯಾ ತಂಡ ಸೋಲನುಭವಿಸಿದೆ. ಈ ಬಾರಿ ಸೋತಿದ್ದು ಬರೋಬ್ಬರಿ 90 ರನ್ಗಳ ಅಂತರದಿಂದ. ಈ ಸೋಲಿನ ಬೆನ್ನಲ್ಲೇ ಪಾಕ್ ಸ್ಪಿನ್ನರ್ ಉಸ್ಮಾನ್ ತಾರಿಖ್ ಅವರ ಬೌಲಿಂಗ್ ಶೈಲಿಯ ಬಗ್ಗೆ ಚರ್ಚೆಗಳು ಶುರುವಾಗಿದೆ. ಈ ಪಂದ್ಯದಲ್ಲಿ 20 ಎಸೆತಗಳನ್ನು ಎದುರಿಸಿದ್ದ ಕ್ಯಾಮರೋನ್ ಗ್ರೀನ್ 2 ಸಿಕ್ಸರ್ ಹಾಗೂ 1 ಫೋರ್ನೊಂದಿಗೆ 35 ರನ್ ಬಾರಿಸಿದ್ದರು.
ಆದರೆ ಯಾವಾಗ ಉಸ್ಮಾನ್ ತಾರಿಖ್ ಸ್ಪಿನ್ ದಾಳಿ ಶುರು ಮಾಡಿದರೂ ಕ್ಯಾಮರೋನ್ ಗ್ರೀನ್ ರನ್ಗಳಿಸಲು ತಡಕಾಡಿದರು. ಅದರಲ್ಲೂ ಪಂದ್ಯದ 11ನೇ ಓವರ್ನ 5ನೇ ಎಸೆತದಲ್ಲಿ ಉಸ್ಮಾನ್ ಎಸೆತದಲ್ಲಿ ಕ್ಯಾಚ್ ನೀಡಿ ಗ್ರೀನ್ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು.
ಅತ್ತ ಡಗೌಟ್ಗೆ ತಲುಪುತ್ತಿದ್ದಂತೆ ಕ್ಯಾಮರೋನ್ ಗ್ರೀನ್ ಉಸ್ಮಾನ್ ತಾರಿಖ್ ಅವರ ಬೌಲಿಂಗ್ ಶೈಲಿ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಕಂಡು ಬಂತು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪಾಕ್ ಸ್ಪಿನ್ನರ್ನ ಬೌಲಿಂಗ್ ಆ್ಯಕ್ಷನ್ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 20 ಓವರ್ಗಳಲ್ಲಿ 198 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ 15.4 ಓವರ್ಗಳಲ್ಲಿ ಕೇವಲ 108 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಪಾಕ್ ಪಡೆ ಬರೋಬ್ಬರಿ 90 ರನ್ಗಳ ಜಯ ಸಾಧಿಸಿದೆ.

