Pahelgam Terrorist Attack: ಕನ್ನಡಿಗರನ್ನು ಕರೆತರಲು ತೆರಳಿರುವ ಸಂತೋಷ್ ಲಾಡ್ ಕಂಡು ಪಲ್ಲವಿಗೆ ದುಃಖ ಉಕ್ಕಿಬಂತು!

Updated on: Apr 23, 2025 | 10:32 AM

Pahelgam Terrorist Attack: ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಒಟ್ಟು ಮೂವರು ಕನ್ನಡಿಗರು ಬಲಿಯಾಗಿರುವ ಸುದ್ದಿ ಇದೆ. ಪಾರ್ಥೀವ ಶರೀರಗಳನ್ನು ರಾಜ್ಯಕ್ಕೆ ವಾಪಸ್ಸು ತೆಗೆದುಕೊಂಡು ಬರಲು ಮತ್ತು ಕಾಶ್ಮೀರ ಪ್ರವಾಸ ತೆರಳಿದ್ದ ಎಲ್ಲ ಕನ್ನಡಿಗರನ್ನು ವಾಪಸ್ಸು ಕರೆತರಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಚಿವ ಸಂತೋಷ್ ಲಾಡ್ ಮತ್ತು ಕೆಲ ಅಧಿಕಾರಿಗಳನ್ನು ಡೆಪ್ಯೂಟ್ ಮಾಡಿದ್ದಾರೆ.

ದೆಹಲಿ, ಏಪ್ರಿಲ್ 23: ನಿನ್ನೆ ಮಧ್ಯಾಹ್ನ ಕಾಶ್ಮೀರದ ಪಹಲ್ಗಾಮ್​ನಲ್ಲಿ ಉಗ್ರರ ಗುಂಡಿನ ದಾಳಿಗೆ (terrorists attack) ಬಲಿಯಾದ ಶಿವಮೊಗ್ಗದ ಮಂಜುನಾಥ್ ಪತ್ನಿ ಪಲ್ಲವಿ ಅವರಿಗೆ ರಾಜ್ಯದ ಕಾರ್ಮಿಕ ಮಂತ್ರಿ ಸಂತೋಷ್ ಲಾಡ್ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ನೋಡಿದಾಕ್ಷಣ ದುಃಖದ ಕಟ್ಟೆ ಮತ್ತೊಮ್ಮೆ ಒಡೆಯಿತು. ನಿನ್ನೆಯಿಂದ ಅತ್ತೂ ಅತ್ತೂ ಅವರ ಕಣ್ಣೀರು ಬತ್ತಿ ಹೋಗಿದೆ. ದೂರದ ಊರಲ್ಲಿ ಪತಿಯ ಪಾರ್ಥೀವ ಶರೀರ ಮತ್ತು ಒಂದೇ ಸಮನೆ ಅಳುತ್ತಿದ್ದ ಮಗನನ್ನು ಸಂತೈಸುತ್ತ ಪಲ್ಲವಿ ಪ್ರದರ್ಶಿಸಿರುವ ಧೈರ್ಯ ಅಸಾಮಾನ್ಯವಾದದ್ದು. ಅವರು ಸ್ಥಳಿಯರಿಗೆ ತಮ್ಮ ವೇದನೆಯನ್ನು ಹೇಳುತ್ತಿರುವ ವಿಡಿಯೋ ಮನ ಕಲಕುತ್ತದೆ. ಕನ್ನಡಿಗರನ್ನು ವಾಪಸ್ಸು ಕರೆತರುವ ನಿಮಿತ್ತ ದೆಹಲಿಗೆ ತೆರಳಿರುವ ಸಚಿವ ಲಾಡ್ ಅವರು ಪಲ್ಲವಿ ಅವರನ್ನು ಸಂತೈಸಿದರು.

ಇದನ್ನೂ ಓದಿ:  ಉಗ್ರರ ಗುಂಡಿಗೆ ಬಲಿಯಾದ ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published on: Apr 23, 2025 10:31 AM