ಪಂಚಮಸಾಲಿ ಪೀಠದ ಲೆಕ್ಕಪತ್ರ ಮಂಡನೆ ವೇಳೆ ಗಲಾಟೆ: ಭಕ್ತರ ನಡುವೆಯೇ ಫೈಟ್!
ಪಂಚಮಸಾಲಿ ಪೀಠದ ಆವರಣದಲ್ಲಿ ಟ್ರಸ್ಟ್‌ನ ಲೆಕ್ಕಪತ್ರ ಮಂಡನೆ ವೇಳೆ ಗಲಾಟೆ ನಡೆದಿದೆ. ಪ್ರಧಾನ ಧರ್ಮಧರ್ಶಿ ಬಿಸಿ ಉಮಾಪತಿ ಲೆಕ್ಕ ಮಂಡಿಸುತ್ತಿದ್ದಾಗ ಸ್ವಾಮೀಜಿ ಬೆಂಬಲಿಗರಿಗೆ ಟ್ರಸ್ಟಿನ ಬೆಂಬಲಿಗರು ನಿಂದನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ವೇಳೆ ಸ್ವಾಮೀಜಿ ಬೆಂಬಲಿಗರು ಟ್ರಸ್ಟ್‌ನ ಬೆಂಬಲಿಗರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಮಧ್ಯ ಪ್ರವೇಶಿಸಿದ ಖಾಕಿ ಪರಿಸ್ಥಿತಿ ತಿಳಿಗೊಳಿಸಿದೆ.
ದಾವಣಗೆರೆ, ಏಪ್ರಿಲ್ 27: ಜಿಲ್ಲೆಯ ಹರಿಹರದಲ್ಲಿರುವ ಪಂಚಮಸಾಲಿ ಪೀಠದಲ್ಲಿ ಟ್ರಸ್ಟ್‌ನ ಆಡಳಿತಕ್ಕೆ ಸಂಬಂಧಿಸಿದಂತೆ ಭಿನ್ನಮತ ಭುಗಿಲೆದ್ದಿದೆ. ಸ್ವಾಮೀಜಿ ಹಾಗೂ ಟ್ರಸ್ಟ್‌ನ ಬೆಂಬಲಿಗರ ಮಧ್ಯೆ ತೀವ್ರ ಜಟಾಪಟಿ ನಡೆದಿದೆ. ಟ್ರಸ್ಟ್‌ನ ಪ್ರಧಾನ ಧರ್ಮಧರ್ಶಿ ಬಿ.ಸಿ. ಉಮಾಪತಿ ಲೆಕ್ಕ ಮಂಡನೆ ಸಂದರ್ಭ ಸ್ವಾಮೀಜಿ ಬೆಂಬಲಿಗರಿಗೆ ಟ್ರಸ್ಟಿನ ಬೆಂಬಲಿಗರು ನಿಂದನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ವೇಳೆ ಸ್ವಾಮೀಜಿ ಬೆಂಬಲಿಗರು ಟ್ರಸ್ಟ್‌ನ ಬೆಂಬಲಿಗರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಲೆಕ್ಕ ಕೇಳೋರು ಇಷ್ಟು ದಿನ ಎಲ್ಲಿ ಹೋಗಿದ್ರಿ ಎಂದು ಟ್ರಸ್ಟ್‌ನ ಬೆಂಬಲಿಗ ಕೇಳಿದ್ದಕ್ಕೆ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಈ ವೇಳೆ ಮಧ್ಯೆ ಪ್ರವೇಶ ಮಾಡಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Apr 27, 2026 05:28 PM
Follow Us
Latest Videos
ಕಳೆದ 18 ವರ್ಷದಲ್ಲಿ ಹರಿಹರ ಪಂಚಮಸಾಲಿ ಪೀಠದಲ್ಲಿ ಸಂಗ್ರಹವಾದ ದೇಣಿಗೆ ಎಷ್ಟು?
‘ಕೆಡಿ’ ಸಿನಿಮಾದಲ್ಲಿ ಸುದೀಪ್ ಪಾತ್ರವೇನು? ಕಿಚ್ಚನ ಸುದ್ದಿಗೋಷ್ಠಿ ವಿಡಿಯೋ
ಚನ್ನಪಟ್ಟಣ ನಗರಕ್ಕೇ ನುಗ್ಗಿದ ಒಂಟಿ ಸಲಗ: ಎದುರಿಗೆ ಸಿಕ್ಕಿದ್ದೆಲ್ಲ ಉಡೀಸ್
ಮೇ 4ಕ್ಕೆ ಪ್ರಮಾಣವಚನಕ್ಕೆ ಬರುವೆ, ಬಂಗಾಳದಲ್ಲಿ ಮೋದಿ ವಿಜಯಘೋಷ
