ತಮ್ಮನ್ನು ಕಟುವಾಗಿ ಟೀಕಿಸುತ್ತಿದ್ದ ಲೋಹಿಯಾರಿಂದ ಪಂಡಿತ್ ನೆಹರೂ ಸಲಹೆ ಸೂಚನೆ ಪಡೆಯುತ್ತಿದ್ದರು: ಸಿದ್ದರಾಮಯ್ಯ

|

Updated on: May 27, 2024 | 4:32 PM

ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಪ್ರಾಮಾಣಿಕತೆಯಿಂದ ಕೆಲಸ ಮಾಡಿ, ಬಡವರ, ಶೋಷಿತರ ಪರ ನಿಂತರೆ ಆಧುನಿಕ ಭಾರತದ ಕನಸು ಕಂಡಿದ್ದ ನೆಹರೂ ಅವರಿಗೆ ನಾವು ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ಇನ್ನು ಮುಂದೆ ತಿಂಗಳಲ್ಲಿ ಒಂದು ದಿನವನ್ನು ತಾವು ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಜೊತೆ ಕಳೆಯುವುದಾಗಿ ಅವರು ಹೇಳಿದರು.

ಬೆಂಗಳೂರು: ಭಾರತದ ಪ್ರಥಮ ಪ್ರಧಾನ ಮಂತ್ರಿ ಪಂಡಿತ್ ಜವಾಹರ್​ಲಾಲ್ ನೆಹರೂ (Pandit Jawaharlal Nehru,) ಅವರ 60 ನೇ ಪುಣ್ಯತಿಥಿ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ದೇಶದ ಮುಂದೆ ಹತ್ತು ಹಲವು ಸಮಸ್ಯೆಗಳಿದ್ದವು ಮತ್ತು ಎಲ್ಲವನ್ನು ನೆಹರೂರವರು ಅತ್ಯಂತ ಚಾಣಾಕ್ಷತೆ ಮತ್ತು ಸಮರ್ಥವಾಗಿ ನಿಭಾಯಿಸಿದರು. ಸಂವಿಧಾನದಲ್ಲಿ ತಿದ್ದುಪಡಿಯನ್ನು ತಂದು ಭೂಸುಧಾರಣಾ ಕಾಯ್ದೆ (ಉಳುವವನೇ ಭೂಮಿ ಒಡೆಯ) (Land Reforms Act) ಜಾರಿಗೆ ತಂದು ದೇಶದ ಅಸಂಖ್ಯಾತ ಬಡ ರೈತರ ಬದುಕಿಗೆ ಆಸರೆ ಒದಗಿಸಿದರು. ನೆಹರೂ ಕಾಲದಿಂದ ಅರಂಭಿಸಿ ಕಾಂಗ್ರೆಸ್ ಸದಾ ಬಡವರ ಪರ ನಿಂತುಕೊಂಡಿದೆ.

ಅದರೆ ಬಿಜೆಪಿ ಸರ್ಕಾರ ನೆಹರೂ ತತ್ವಸಿದ್ಧಾಂತಗಳಿಗೆ ತದ್ವಿರುದ್ಧವಾದ ಧೋರಣೆ ಹೊಂದಿದೆ. ನೆಹರೂ ಅವರು ಯಾವತ್ತೂ ತಮ್ಮ ವಿರೋಧಿಗಳನ್ನು ದ್ವೇಷಿಸಲಿಲ್ಲ, ತಮ್ಮನ್ನು ಟೀಕಿಸುವವರ ಬಗ್ಗೆ ಗೌರವಾದರಗಳನ್ನು ಹೊಂದಿದ್ದರು.ಅವರನ್ನು ಕಟುವಾಗಿ ಟೀಕಿಸುತ್ತಿದ್ದ ಸಮಾಜವಾದಿ ನಾಯಕ ರಾಮ ಮನೋಹರ ಲೋಹಿಯಾ ಅವರಿಂದ ಸಲಹೆ ಸೂಚನೆಗಳನ್ನು ಪಡೆಯುತ್ತಿದ್ದರು.

ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಪ್ರಾಮಾಣಿಕತೆಯಿಂದ ಕೆಲಸ ಮಾಡಿ, ಬಡವರ, ಶೋಷಿತರ ಪರ ನಿಂತರೆ ಆಧುನಿಕ ಭಾರತದ ಕನಸು ಕಂಡಿದ್ದ ನೆಹರೂ ಅವರಿಗೆ ನಾವು ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ಇನ್ನು ಮುಂದೆ ತಿಂಗಳಲ್ಲಿ ಒಂದು ದಿನವನ್ನು ತಾವು ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಜೊತೆ ಕಳೆಯುವುದಾಗಿ ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ತಡವಾಗಿ ಬಂದು ಪಂಡಿತ ಜವಾಹರಲಾಲ್ ನೆಹರೂ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಸಿಎಂ ಸಿದ್ದರಾಮಯ್ಯ