ಪವಿತ್ರಾ ಗೌಡ ಗೆಳತಿ ಸಮತಾ ದರ್ಶನ್ರನ್ನು ಭೇಟಿಯಾಗಬೇಕೆಂದಾಗ ನಟ ಸಹ ಒಪ್ಪಿಗೆ ಸೂಚಿಸಿದರು!
ಪವಿತ್ರಾ ಗೌಡರ ಸ್ನೇಹಿತೆಯೆಂದ ಮೇಲೆ ದುಬಾರಿ ಕಾರೊಂದರಲ್ಲಿ ಜಮ್ಮಂತ ಸೆಂಟ್ರಲ್ ಜೈಲಿಗೆ ಬಂದಿರುತ್ತಾರೆ ಎಂಬ ಭಾವನೆ ಮೂಡೋದು ಸಹಜವೇ. ಅದರೆ ಸಮತಾ ಸಿರೆಯುಟ್ಟು ತಮ್ಮ ಮತ್ತೊಬ್ಬ ಗೆಳತಿಯೊಂದಿಗೆ ಆಟೋರಿಕ್ಷಾವೊಂದರಲ್ಲಿ ಜೈಲು ಅವರಣಕ್ಕೆ ಆಗಮಿಸಿದರು. ಭೇಟಿಯ ನಂತರವೂ ಅವರು ಅವಸರದಲ್ಲಿ ಆಟೋವೊಂದನ್ನು ಹತ್ತಿ ಹೋಗುವುದನ್ನು ನೋಡಬಹುದು
ಆನೇಕಲ್: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ನಂಬರ್ 2 ಆಗಿರುವ ಚಿತ್ರನಟ ದರ್ಶನ್ರನ್ನು ನೋಡಲು ಮಾತಾಡಿಸಲು ಹಲವಾರು ಜನ ಬರುತ್ತಾರೆ. ನಿನ್ನೆ ಅವರ ತಾಯಿ, ಸಹೋದರ ಮತ್ತು ಮಗ ಬಂದಿದ್ದರು. ದೂರದ ಹುಬ್ಬಳ್ಳಿಯಿಂದ ಒಬ್ಬ ಅಜ್ಜಿಯೂ ನಿನ್ನೆ ಸೆಂಟ್ರಲ್ ಜೈಲಿನ ಆವರಣಕ್ಕೆ ಬಂದು ದರ್ಶನ್ ರನ್ನು ಭೇಟಿಯಾಗುವ ಆಸೆ ವ್ಯಕ್ತಪಡಿಸಿದ್ದರು. ಅದರೆ ಜೈಲು ಅಧಿಕಾರಿಗಳು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅದಿರಲಿ, ಇವತ್ತು ಪವಿತ್ರಾ ಗೌಡ ಅವರ ಆಪ್ತ ಸ್ನೇಹಿತೆ ಸಮತಾ ಪರಪ್ಪನ ಅಗ್ರಹಾರದಲ್ಲಿರುವ ಸೆಂಟ್ರಲ್ ಜೈಲಿಗೆ ಬಂದು ದರ್ಶನ್ ರನ್ನು ಭೇಟಿಯಾದರು. ಸಮತಾ ನಟನನ್ನು ಬೇಟಿಯಾಗಿದ್ದು ಕೊಂಚ ಆಶ್ಚರ್ಯ ಮೂಡಿಸೋದು ಸಹಜವೇ. ಅವರು ತಮ್ಮ ಸ್ನೇಹಿತೆಯನ್ನು ಭೇಟಿಯಾಗುವ ಬದಲು ದರ್ಶನ್ ರನ್ನು ಭೇಟಿಯಾಗಲು ನಿರ್ಧರಿಸಿದ್ದು ಯಾಕೆ ಅಂತ ಗೊತ್ತಾಗಲಿಲ್ಲ. ಮತ್ತೂ ಸೋಜಿಗದ ಸಂಗತಿಯೆಂದರೆ ಸಮತಾರೊಂದಿಗೆ ಮಾತಾಡಲು ದರ್ಶನ್ ಒಪ್ಪಿಗೆ ಸೂಚಿಸಿದ್ದು. ನಮ್ಮ ವರದಿಗಾರ ನೀಡಿರುವ ಮಾಹಿತಿ ಪ್ರಕಾರ ಅವರಿಬ್ಬರ ನಡುವೆ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆದಿದೆ.
.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹೆಣ್ಣಿಗಾಗಿ ಬದುಕು ಹಾಳುಮಾಡಿಕೊಂಡೆಯಲ್ಲ ಎಂದ ಹುಬ್ಬಳ್ಳಿಯಿಂದ ಬಂದ ದರ್ಶನ್ನ ವೃದ್ಧೆ ಅಭಿಮಾನಿ