ಮಗಳು ಜೈಲಿಂದ ಹೊರಬಂದ ನಂತರ ಪವಿತ್ರಾ ತಾಯಿ ನಟ ದರ್ಶನ್ ಹೆಸರಲ್ಲಿ ಅರ್ಚನೆ ಮಾಡಿಸಿದರು!
ದರ್ಶನ್ ಮತ್ತು ಪವಿತ್ರಾ ಗೌಡ ನಡುವಿನ ಸಂಬಂಧ ಜಗಜ್ಜಾಹೀರು ಮತ್ತು ಎರಡೂ ಕುಟುಂಬಗಳು ಈ ಸತ್ಯವನ್ನು ಅಂಗೀಕರಿಸಿವೆ. ಆದರೆ ರೇಣುಕಾಸ್ವಾಮಿ ಕೊಲೆ ಪ್ರಕರಣ ನಡೆದ ಬಳಿಕ ಪರಿಸ್ಥಿತಿ ಬದಲಾಗಬಹುದೆಂಬ ನಿರೀಕ್ಷೆ ಹುಸಿಹೋಗಿದೆ. ಅಥವಾ ದರ್ಶನ್ ಮೇಲಿನ ಪ್ರೀತಿ ಮತ್ತು ಅಭಿಮಾನದಿಂದ ಪವಿತ್ರಾ ತಾಯಿ ನಟನ ಹೆಸರಲ್ಲಿ ಅರ್ಚನೆ ಮಾಡಿಸಿರುವ ಸಾಧ್ಯತೆಯೂ ಇಲ್ಲದಿಲ್ಲ.
ಆನೇಕಲ್ (ಬೆಂಗಳೂರು): ಇದು ಸರಿಯೋ ತಪ್ಪೋ ಅಂತ ನಮಗಂತೂ ಅರ್ಥವಾಗುತ್ತಿಲ್ಲ, ಅದರೆ ನಮ್ಮ ನಿಮ್ಮ ಯೋಚನೆ ಅನಿಸಿಕೆಗಳಿಂದ ಪವಿತ್ರಾ ಗೌಡ ಕುಟುಂಬದ ಮೇಲೆ ಯಾವುದೇ ಪರಿಣಾಮ ಬೀರುವುವುದಿಲ್ಲ. ವಿಷಯ ಏನೂಂತ ನಿಮಗೆ ಸ್ಪಷ್ಟವಾಗಿರಬಹುದು. ರೇಣುಕಾಸ್ವಾಮಿ ಕೊಲೆ ಅರೋಪಿ ಪವಿತ್ರಾ ಗೌಡಗೆ ಹೈಕೋರ್ಟ್ ಜಾಮೀನು ನೀಡಿದ್ದು ಇವತ್ತು ಅವರು ಜೈಲಿಂದ ಬಿಡುಗಡೆ ಹೊಂದಿದರು. ಮನೆಗೆ ತೆರಳುವ ಮೊದಲು ಜೈಲು ಹೊರಭಾಗದಲ್ಲಿರುವ ವಜ್ರಮುನೇಶ್ವರ ದೇವಸ್ಥಾನದಲ್ಲಿ ಪ್ರವಿತ್ರಾ ಕುಟುಂಬ ಪೂಜೆ ಸಲ್ಲಿಸುತ್ತದೆ. ಅರ್ಚನೆ ಮಾಡಿಸುವಾಗ ಪವಿತ್ರಾ ತಾಯಿ ದರ್ಶನ್ ಹೆಸರಲ್ಲಿ ಅದನ್ನು ಮಾಡಿಸುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪವಿತ್ರಾ ಗೌಡ ಜಾಮೀನು ಆದೇಶದ ಮಹತ್ವ ವಿವರಿಸಿದ ವಕೀಲೆ ಶಿಲ್ಪಾ
Latest Videos