ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ರೋಡ್ ಶೋ; ರಾಮಜನ್ಮಭೂಮಿಯ ಜನರಿಂದ ಅದ್ದೂರಿ ಸ್ವಾಗತ

Updated on: Nov 25, 2025 | 3:32 PM

ಅಯೋಧ್ಯೆಯ ರಾಮ ಮಂದಿರದಲ್ಲಿ ಧ್ವಜಾರೋಹಣ ಸಮಾರಂಭಕ್ಕೂ ಮುನ್ನ ಪ್ರಧಾನಿ ಮೋದಿ ಅಯೋಧ್ಯೆ ರಾಮ ಮಂದಿರದ ಶಿಖರವನ್ನು ಅಲಂಕರಿಸುತ್ತಿದ್ದಂತೆ ಏಕತೆ ಮತ್ತು ಭಕ್ತಿಯ ಮನೋಭಾವಕ್ಕೆ ಸಾಕ್ಷಿಯಾಗಲಿ. ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಜನ್ಮಭೂಮಿ ದೇವಾಲಯದಲ್ಲಿ ಧ್ವಜಾರೋಹಣ ಸಮಾರಂಭಕ್ಕೂ ಮುನ್ನ ಅಯೋಧ್ಯೆಯಲ್ಲಿ ರೋಡ್ ಶೋ ನಡೆಸಿದರು.ಇದಾದ ಬಳಿಕ ಅವರು ರಾಮ ಮಂದಿರದ 191 ಅಡಿ ಎತ್ತರದ ಶಿಖರದ ಮೇಲೆ ಪವಿತ್ರ ಕೇಸರಿ ಧ್ವಜವನ್ನು ಹಾರಿಸಿದರು.

ಅಯೋಧ್ಯೆ, ನವೆಂಬರ್ 25: ಅಯೋಧ್ಯೆಯ ಪಾಲಿಗೆ ಇಂದು ಐತಿಹಾಸಿಕ ದಿನ. ರಾಮಮಂದಿರದಲ್ಲಿ ಇಂದು ಧರ್ಮ ಧ್ವಜಾರೋಹಣ ನೆರವೇರಿಸಲಾಯಿತು. ಐತಿಹಾಸಿಕ ಕೇಸರಿ ಧ್ವಜಾರೋಹಣಕ್ಕೂ ಮುನ್ನ ಪ್ರಧಾನಿ ಮೋದಿ (PM Narendra Modi) ಬೃಹತ್ ರೋಡ್ ಶೋ ನಡೆಸಿದರು. ಈ ವೇಳೆ ಅಯೋಧ್ಯೆಯ ಜನರು ತ್ರಿವರ್ಣ ಧ್ವಜಗಳನ್ನು ಹಿಡಿದು, ಹೂಮಳೆ ಸುರಿಸುತ್ತಾ ಪ್ರಧಾನಿ ಮೋದಿಯವರನ್ನು ಅದ್ದೂರಿಯಾಗಿ ಸ್ವಾಗತಿಸಿದರು. ಇದಾದ ಬಳಿಕ ಪಿಎಂ ಮೋದಿ ರಾಮ ಮಂದಿರದ 191 ಅಡಿ ಎತ್ತರದ ಶಿಖರದ ಮೇಲೆ ಪವಿತ್ರ ಕೇಸರಿ ಧ್ವಜವನ್ನು ಹಾರಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ