ಅಯೋಧ್ಯೆಯ ರಾಮ ಮಂದಿರದಲ್ಲಿ ಧರ್ಮ ಧ್ವಜಾರೋಹಣ, ಪ್ರಧಾನಿ ಮೋದಿಯಿಂದ ಉದ್ಘಾಟನೆ ಲೈವ್
ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಿದ್ದು, ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿವೆ. ಇಂದು ಪ್ರಧಾನಿ ನರೇಂದ್ರ ಮೋದಿ ಧರ್ಮ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸುತ್ತಿದ್ದು, ಅದರ ವಿಡಿಯೋ ಇಲ್ಲಿದೆ. ಧರ್ಮ ಧ್ವಜಾರೋಹಣ ಮಾಡುವ ಮೂಲಕ 500 ವರ್ಷಗಳ ಸುದೀರ್ಘ ಹೋರಾಟಕ್ಕೆ ತಾತ್ವಿಕ ಅಂತ್ಯ ಹಾಡಿದ್ದಾರೆ. ಈ ಧ್ವಜಾರೋಹಣವು ವಿಜಯದ ಸಂಕೇತವಾಗಿದ್ದು, ಶಾಸ್ತ್ರಗಳ ಪ್ರಕಾರ ಯುದ್ಧ, ಶಾಂತಿ ಅಥವಾ ರಾಜ ಪಟ್ಟಾಭಿಷೇಕದ ಸಂದರ್ಭಗಳಲ್ಲಿ ಧ್ವಜಾರೋಹಣ ಮಾಡಲಾಗುತ್ತದೆ.

ಅಯೋಧ್ಯೆ, ನವೆಂಬರ್ 25: ಅಯೋಧ್ಯೆ(Ayodhya)ಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಿದ್ದು, ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿವೆ. ಇಂದು ಪ್ರಧಾನಿ ನರೇಂದ್ರ ಮೋದಿ ಧರ್ಮ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸುತ್ತಿದ್ದು, ಅದರ ವಿಡಿಯೋ ಇಲ್ಲಿದೆ. ಧರ್ಮ ಧ್ವಜಾರೋಹಣ ಮಾಡುವ ಮೂಲಕ 500 ವರ್ಷಗಳ ಸುದೀರ್ಘ ಹೋರಾಟಕ್ಕೆ ತಾತ್ವಿಕ ಅಂತ್ಯ ಹಾಡಿದ್ದಾರೆ. ಈ ಧ್ವಜಾರೋಹಣವು ವಿಜಯದ ಸಂಕೇತವಾಗಿದ್ದು, ಶಾಸ್ತ್ರಗಳ ಪ್ರಕಾರ ಯುದ್ಧ, ಶಾಂತಿ ಅಥವಾ ರಾಜ ಪಟ್ಟಾಭಿಷೇಕದ ಸಂದರ್ಭಗಳಲ್ಲಿ ಧ್ವಜಾರೋಹಣ ಮಾಡಲಾಗುತ್ತದೆ.
ರಾಮಮಂದಿರ ನಿರ್ಮಾಣದೊಂದಿಗೆ ಅಯೋಧ್ಯೆ ನಗರವು ಅಭೂತಪೂರ್ವ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ರಾಮಪಥ ಮತ್ತು ಭಕ್ತಿಪಥದಂತಹ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಅದಕ್ಕೆ ಆಧುನಿಕ ಸ್ಪರ್ಶ ನೀಡಲಾಗಿದೆ. ನಿರ್ಮಾಣಕ್ಕೂ ಮುನ್ನ ಸಂಚಾರಕ್ಕೆ ಅಡಚಣೆಯಂತಿದ್ದ ಕಿರಿದಾದ ರಸ್ತೆಗಳು ಈಗ ಸುಸಜ್ಜಿತವಾಗಿವೆ. ಲತಾ ಮಂಗೇಶ್ಕರ್ ಚೌಕ್ ಹಾಗೂ ಸೂರ್ಯವಂಶದ ಕಲಾಕೃತಿಗಳಿಂದ ಕೂಡಿದ ವಿಶೇಷ ರಸ್ತೆಗಳು ಸಂದರ್ಶಕರನ್ನು ಆಕರ್ಷಿಸುತ್ತವೆ. ಸರಯೂ ನದಿಯ ತಟದಲ್ಲಿ ರಾಮ್ ಕೀ ಪೇಡಿ ನಿರ್ಮಿಸಲಾಗಿದ್ದು, ದೀಪಾಲಂಕಾರದಿಂದ ಅಲಂಕೃತಗೊಂಡಿದೆ. ಈ ಸ್ಥಳವು ದೀಪಾವಳಿ ಆಚರಣೆಗಳಿಗೆ ಹೆಸರುವಾಸಿಯಾಗಿದೆ.
ರಾಮ ಮಂದಿರ ನಿರ್ಮಾಣ ಪ್ರದೇಶವು ಸುಮಾರು 57,000 ಚದರ ಅಡಿ ಆಗಿದ್ದು, ಕಟ್ಟಡವು ಮೂರು ಅಂತಸ್ತಿನ ರಚನೆಯಾಗಿದೆ. ಇದು ಕುತುಬ್ ಮಿನಾರ್‌ಗಿಂತಲೂ ಶೇಕಡ 70 ಹೆಚ್ಚು ಎತ್ತರದ್ದಾಗಿದೆ. ರಾಮ ಮಂದಿರವು ಬೃಹತ್ ಕಂಬಳ ಮೇಲೆ ನಿಂತಿದ್ದು, ಶ್ರೀ ರಾಮ ದೇವರು ಇರುವ ಅತ್ಯಂತ ಪವಿತ್ರ ಭಾಗವನ್ನು ಗರ್ಭ ಗೃಹ ಅಥವಾ ಗರ್ಭ ಗುಡಿ ಎಂದು ಹೇಳಲಾಗುತ್ತದೆ. ಮಂದಿರದ ಮೂರನೇ ಮಹಡಿಯಲ್ಲಿ ಅತಿ ಎತ್ತರದ ಶಿಖರ ರೂಪದ ಗೋಪುರವಿದೆ. ಐದು ಮಂಟಪಗಳ ಮೇಲೆ ಐದು ಶಿಖರಗಳಿದ್ದು, ಒಟ್ಟು 300 ಕಂಬಗಳು ಮತ್ತು 44 ತೇಗದ ಬಾಗಿಲುಗಳನ್ನು ಹೊಂದಿದೆ.
ದೇವಾಲಯದ ಸಂಕೀರ್ಣವು ಸುಮಾರು 60 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಮುಖ್ಯ ರಾಮಮಂದಿರದ ಜೊತೆಗೆ ಸಪ್ತರ್ಷಿಗಳಿಗೆ ಸಂಬಂಧಿಸಿದ ಏಳು ವಿಶೇಷ ದೇವಾಲಯಗಳು, ಗಣಪತಿ ದೇವಾಲಯ ಮತ್ತು ರಾಮಾಯಣದಲ್ಲಿ ಅಳಿಲಿನ ಸೇವೆಗೆ ಗೌರವ ಸಲ್ಲಿಸುವ ವಿಶೇಷ ಶಿಲ್ಪವನ್ನೂ ನಿರ್ಮಿಸಲಾಗಿದೆ.
ಮೊದಲ ಮಹಡಿಯಲ್ಲಿ ಭವ್ಯವಾದ ರಾಮ ದರ್ಬಾರ್ ಹಾಲ್ ರಚಿಸಲಾಗಿದ್ದು, ರಾಮ, ಸೀತೆ, ಲಕ್ಷ್ಮಣ ಮತ್ತು ಹನುಮಂತನ ಪ್ರತಿಮೆಗಳೊಂದಿಗೆ ರಾಮ ತನ್ನ ಪರಿವಾರ ಮತ್ತು ತಜ್ಞರೊಂದಿಗೆ ದರ್ಬಾರ್ ನಡೆಸುವ ಭಂಗಿಯನ್ನು ಚಿತ್ರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ದರ್ಬಾರ್‌ನಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ಈ ಐತಿಹಾಸಿಕ ಕಾರ್ಯಕ್ರಮಕ್ಕಾಗಿ ಅಯೋಧ್ಯೆಯಲ್ಲಿ ವ್ಯಾಪಕ ಭದ್ರತೆ ಏರ್ಪಡಿಸಲಾಗಿದೆ. 7000ಕ್ಕೂ ಅಧಿಕ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು, ತಾತ್ಕಾಲಿಕ ಪೊಲೀಸ್ ಮತ್ತು ಸೇನಾ ಪಡೆಗಳು ಸೇವೆ ಸಲ್ಲಿಸುತ್ತಿವೆ. ಸುಮಾರು 6000 ವಿಶೇಷ ಅತಿಥಿಗಳಿಗೆ ನಿರ್ದಿಷ್ಟ ಗೇಟ್‌ಗಳಿಂದ ಪ್ರವೇಶ ಕಲ್ಪಿಸಲಾಗಿದ್ದು, ಪ್ರಮುಖ ರಾಜಕಾರಣಿಗಳು ಮತ್ತು ವಿಶೇಷ ಭದ್ರತೆಯ ಅತಿಥಿಗಳು ಗೇಟ್ ನಂಬರ್ 3 ಮತ್ತು 11ರ ಮೂಲಕ ಪ್ರವೇಶ ಪಡೆಯುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




