AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿಬೆಟನ್ ನಿರಾಶ್ರಿತರ 'ಹಸಿರು' ಸಾಧನೆಗೆ ಮೋದಿ ಮೆಚ್ಚುಗೆ! ಎಕೊ‌ ನಳಂದ‌ ಅರಣ್ಯ ಸಂಸ್ಥಾಪಕರ ಹರ್ಷ

ಟಿಬೆಟನ್ ನಿರಾಶ್ರಿತರ ‘ಹಸಿರು’ ಸಾಧನೆಗೆ ಮೋದಿ ಮೆಚ್ಚುಗೆ! ಎಕೊ‌ ನಳಂದ‌ ಅರಣ್ಯ ಸಂಸ್ಥಾಪಕರ ಹರ್ಷ

Gopal AS
| Edited By: |

Updated on: Apr 28, 2026 | 2:53 PM

Share

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಕೊಡಗಿನ ಗಡಿಯಂಚಿನ ಬೈಲುಕುಪ್ಪೆಯ ಟಿಬೆಟನ್ ಖಾಸಗಿ ಅರಣ್ಯವನ್ನು ಶ್ಲಾಘಿಸಿರುವುದು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಟಿಬೆಟನ್ ಕ್ಯಾಂಪ್‌ನಲ್ಲಿರುವ 'ಎಕೋ ನಳಂದ' ಅರಣ್ಯದ ಸಂಸ್ಥಾಪಕ ಕರ್ಮ ಸಮ್ತೆನ್ಲಿಂಗ್ಪ ರಿನ್ಪೊಚೆ ಈ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ಕೊಡಗು, ಏಪ್ರಿಲ್ 28: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಕೊಡಗಿನ ಗಡಿಯಂಚಿನ ಬೈಲುಕುಪ್ಪೆಯ ಟಿಬೆಟನ್ ಖಾಸಗಿ ಅರಣ್ಯವನ್ನು ಶ್ಲಾಘಿಸಿರುವುದು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಟಿಬೆಟನ್ ಕ್ಯಾಂಪ್‌ನಲ್ಲಿರುವ ‘ಎಕೋ ನಳಂದ’ ಅರಣ್ಯದ ಸಂಸ್ಥಾಪಕ ಕರ್ಮ ಸಮ್ತೆನ್ಲಿಂಗ್ಪ ರಿನ್ಪೊಚೆ ಈ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ಕಳೆದ 30 ವರ್ಷಗಳಿಂದ ಶ್ರಮವಹಿಸಿ 100 ಎಕರೆ ಬರಡು ಭೂಮಿಯನ್ನು ದಟ್ಟ ಅರಣ್ಯವನ್ನಾಗಿ ಪರಿವರ್ತಿಸಿರುವ ಇವರು, ವಿಶ್ವದ ವಿವಿಧ ಭಾಗಗಳ ಔಷಧೀಯ ಗಿಡಗಳನ್ನು ಇಲ್ಲಿ ಬೆಳೆಸಿದ್ದಾರೆ. ನಮಗೆ ಆಶ್ರಯ ನೀಡಿದ ಭಾರತಕ್ಕೆ ನಾವು ನೀಡುತ್ತಿರುವ ಕಾಣಿಕೆ ಇದು ಎಂದು ಅವರು ಭಾವನಾತ್ಮಕವಾಗಿ ನುಡಿದಿದ್ದಾರೆ. ನೂರಾರು ಪಕ್ಷಿ-ಸಂಕುಲಗಳಿಗೆ ಆಶ್ರಯತಾಣವಾಗಿರುವ ಈ ಅರಣ್ಯದಿಂದಾಗಿ ಸ್ಥಳೀಯ ವಾತಾವರಣವೂ ತಂಪಾಗಿದೆ. ಪ್ರಧಾನಿಯವರ ಮಾತು ನಮಗೆ ಇನ್ನಷ್ಟು ಸ್ಫೂರ್ತಿ ನೀಡಿದೆ ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us