ಮೈತ್ರಿ ಮಾಡಿಕೊಂಡ ಪಕ್ಷಗಳನ್ನು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಯಾವತ್ತೂ ಕೈಬಿಟ್ಟಿಲ್ಲ: ಜಿ ಟಿ ದೇವೇಗೌಡ

|

Updated on: May 09, 2024 | 2:27 PM

ನಾವು ಪ್ರಜ್ವಲ್ ನನ್ನು ಸಮರ್ಥಿಸಿಕೊಂಡಿದ್ದರೆ, ನಮ್ಮಿಂದ ತಪ್ಪಾಗಿದ್ದರೆ ಅವರು ಮೈತ್ರಿ ಕೊನೆಗಾಣಿಸುವ ಬಗ್ಗೆ ಯೋಚನೆ ಮಾಡುತ್ತಿದ್ದರು, ತಪ್ಪು ಯಾರೇ ಮಾಡರಲಿ ಅವರಿಗೆ ಶಿಕ್ಷೆಯಾಗಬೇಕೆನ್ನುವುದು ಪಕ್ಷದ ನಿಲುವಾಗಿದೆ ಹಾಗಾಗಿ, ಮೈತ್ರಿ ಯಾವುದೇ ಧಕ್ಕೆ ಇಲ್ಲ ಎಂದು ದೇವೇಗೌಡ ಹೇಳಿದರು.

ಬೆಂಗಳೂರು: ಪ್ರಜ್ವಲ್ ರೇವಣ್ಣ ಪ್ರಕರಣದ ನಂತರ ಬಿಜೆಪಿ, ಜೆಡಿಎಸ್ ಜೊತೆ ಅಂತರ ಕಾಯ್ದುಕೊಳ್ಳುತ್ತಿದೆ ಎಂದು ಹರಡಿರುವ ಸುದ್ದಿಯನ್ನು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ (GT Devegowda) ತಳ್ಳಿಹಾಕಿದರು. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಮತ್ತು ಗೃಹ ಸಚಿವ ಅಮಿತ್ ಶಾ (Amit Shah) ದೇಶವನ್ನೇ ಅಳುತ್ತಿದ್ದಾರೆ, ತಮ್ಮ ಜೊತೆ ಮೈತ್ರಿ ಮಾಡಿಕೊಂಡ ಯಾವ ಪಕ್ಷವನ್ನೂ ಅವರು ಯಾವತ್ತೂ ಕೈ ಬಿಟ್ಟಿಲ್ಲ, ಮೊದಲು 96 ಸೀಟು ಪಡೆದು ನಂತರ ಕೇವಲ 43 ಸೀಟುಗಳಿಗೆ ತೃಪ್ತಿಪಟ್ಟುಕೊಂಡಿದ್ದ ನಿತೀಶ್ ಕುಮಾರ್ ಜೊತೆ ಮೈತ್ರಿ ಬೆಳೆಸಿದ ಮೋದಿಯವರು ಪುನಃ ಅವರನ್ನೇ ಬಿಹಾರದ ಮುಖ್ಯಮಂತ್ರಿ ಮಾಡಿದ್ದರು ಎಂದು ದೇವೇಗೌಡ ಹೇಳಿದರು. ನಾವು ಪ್ರಜ್ವಲ್ ನನ್ನು ಸಮರ್ಥಿಸಿಕೊಂಡಿದ್ದರೆ, ನಮ್ಮಿಂದ ತಪ್ಪಾಗಿದ್ದರೆ ಅವರು ಮೈತ್ರಿ ಕೊನೆಗಾಣಿಸುವ ಬಗ್ಗೆ ಯೋಚನೆ ಮಾಡುತ್ತಿದ್ದರು, ತಪ್ಪು ಯಾರೇ ಮಾಡರಲಿ ಅವರಿಗೆ ಶಿಕ್ಷೆಯಾಗಬೇಕೆನ್ನುವುದು ಪಕ್ಷದ ನಿಲುವಾಗಿದೆ ಹಾಗಾಗಿ, ಮೈತ್ರಿ ಯಾವುದೇ ಧಕ್ಕೆ ಇಲ್ಲ ಎಂದು ದೇವೇಗೌಡ ಹೇಳಿದರು. ಸಂತ್ರೆಸ್ತೆಯರನ್ನು ಸಂತೈಸುವ ಕೆಲಸ ಕುಮಾರಸ್ವಾಮಿಯವರಿಂದ ಆಗಬೇಕು ಎಂದು ಕಾಂಗ್ರೆಸ್ ನಾಯಕರು ಹೇಳಿರುವುದಕ್ಕೆ ಬೆಂಕಿಯುಗುಳಿದ ದೇವೇಗೌಡ, ಅದು ಸರ್ಕಾರದ ಕೆಲಸ ಮತ್ತು ಜವಾಬ್ದಾರಿ, ಕುಮಾರಸ್ವಾಮಿ ಯಾಕೆ ಮಾಡಬೇಕು? ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಪ್ರಜ್ವಲ್ ರೇವಣ್ಣ ಪ್ರಕರಣ; ಎಸ್ಐಟಿ ತನಿಖೆ ಒನ್ ವೇನಲ್ಲಿ ಸಾಗುತ್ತಿರುವ ಕಾರಣ ಸಿಬಿಐಗೆ ವಹಿಸಿಕೊಡಬೇಕು: ಜಿಟಿ ದೇವೇಗೌಡ