ಗೆಳತಿ ಮನೆಯಲ್ಲಿ ಕಳ್ಳತನ; ಬಟ್ಟೆ ಬದಲಿಸುವ ನೆಪದಲ್ಲಿ ಚಿನ್ನಾಭರಣ ಹೊತ್ತು ಪರಾರಿ

Edited By:

Updated on: Dec 17, 2021 | 9:46 AM

ಬಟ್ಟೆ ಬದಲಿಸುವ ನೆಪದಲ್ಲಿ ಪದೇ ಪದೇ ರೂಮ್​ಗೆ ಹೋಗಿದ್ದ ಅಜ್ರಾ, ಸುಮಾರು 11 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದಿದ್ದಾಳೆ.

ಬೆಂಗಳೂರು: ಬಟ್ಟೆ ಬದಲಿಸುವ ನೆಪದಲ್ಲಿ ಸ್ನೇಹಿತೆ ಮನೆಯಲ್ಲಿದ್ದ ಚಿನ್ನ ಕದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಎರಡು ದಿನದ ಹಿಂದೆ ಜೆಜೆ ನಗರದ ಗೆಳತಿ ಮನೆಗೆ ಬಂದ ಅಜ್ರಾ ಎಂಬ ಯುವತಿ ಚಿನ್ನಾಭರಣ ಹೊತ್ತು ಪರಾರಿಯಾಗಿದ್ದಾಳೆ. ಮಧ್ಯಾಹ್ನ 3.40ರ ಸುಮಾರಿಗೆ ಮನೆಗೆ ಬಂದ ಅಜ್ರಾಳಿಗೆ, ಗೆಳತಿ ರೂಮ್​ನಲ್ಲಿ ಕಬೋರ್ಡ್ ಲಾಕ್ ಮಾಡದೇ ಇರೋದು ಕಣ್ಣಿಗೆ ಬಿದ್ದಿತ್ತು. ಈ ವೇಳೆ, ಬಟ್ಟೆ ಬದಲಿಸುವ ನೆಪದಲ್ಲಿ ಪದೇ ಪದೇ ರೂಮ್​ಗೆ ಹೋಗಿದ್ದ ಅಜ್ರಾ, ಸುಮಾರು 11 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದಿದ್ದಾಳೆ.

ಅಜ್ರಾ ಗೆಳೆತಿಗೆ ಇತ್ತೀಚೆಗಷ್ಟೇ ಮದ್ವೆಯಾಗಿತ್ತು. ಹೀಗಾಗಿ, ಮನೆಯಲ್ಲಿ ಚಿನ್ನಾಭರಣ ಇಟ್ಟಿದ್ದರು. ಆದರೆ ಅಜ್ರಾ ಆಕೆ ಮನೆಯಲ್ಲೇ ಕಳ್ಳತನ ಮಾಡಿದ್ದಾಳೆ. ಬಳಿಕ, ಗೆಳತಿ ಬಳಿಯೇ ಒಂದು ಕವರ್ ಕೊಡು ಎಂದು ತೆಗೆದುಕೊಂಡು ವೈನಾಗಿ ಚಿನ್ನವನ್ನು ಕದ್ದೊಯ್ದಿದ್ದಾಳೆ. ನಂತರ, ಡಿಜೆಹಳ್ಳಿಯ ತನ್ನ ಮನೆ ಪಕ್ಕದ ನೀರಿನ ಸಿನ್​ಟ್ಯಾಕ್ಸ್​ನಲ್ಲಿ ಕವರ್ ಮುಚ್ಚಿಟ್ಟಿದ್ದಳು. ಇತ್ತ ರಾತ್ರಿ ಲಾಕರ್ ನೋಡಿದ ಸ್ನೇಹಿತೆಗೆ ಮನೆಯಲ್ಲಿ ಕಳ್ಳತನ ಆಗಿರುವುದು ಗೊತ್ತಾಯ್ತು. ಬಳಿಕ, ಪೊಲೀಸರಿಗೆ ದೂರು ನೀಡಿದಾಗ, ಅಜ್ರಾ ಕಳ್ಳಾಟ ಬಯಲಾಗಿದೆ. ಸದ್ಯ ಅಜ್ರಾಳನ್ನು ವಶಕ್ಕೆ ಪಡೆದು ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ:

ಜೈಪುರ್ ಗ್ಯಾಂಗ್​ಗೆ ಸುಪಾರಿ ಕೊಟ್ಟು ಚಿನ್ನದ ಅಂಗಡಿ ಕಳ್ಳತನ; 9 ಆರೋಪಿಗಳು ಅರೆಸ್ಟ್, ಮೂವರು ಎಸ್ಕೇಪ್

ಕಸ ಆಯಲು ಬಂದ ಮಹಿಳೆಯರ ಮೇಲೆ ಕಳ್ಳತನದ ಆರೋಪ, ಬಟ್ಟೆ ಬಿಚ್ಚಿ, ಕೋಲಿನಿಂದ ಥಳಿತ; ಪಾಕಿಸ್ತಾನದಲ್ಲಿ ಅಮಾನವೀಯ ಕೃತ್ಯ