Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಸಕರ ಭವನದ ಮುಂದೆ ಪಾರ್ಕ್​ ಆಗಿದ್ದ ಶಿವಲಿಂಗೇಗೌಡರ ಕಾರಿಗೆ ಗುದ್ದಿದ ಪೊಲೀಸ್ ಜೀಪ್, ಮುಂಭಾಗದ ಡೋರ್ ಜಖಂ

ಶಾಸಕರ ಭವನದ ಮುಂದೆ ಪಾರ್ಕ್​ ಆಗಿದ್ದ ಶಿವಲಿಂಗೇಗೌಡರ ಕಾರಿಗೆ ಗುದ್ದಿದ ಪೊಲೀಸ್ ಜೀಪ್, ಮುಂಭಾಗದ ಡೋರ್ ಜಖಂ

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 25, 2025 | 1:40 PM

ತಮ್ಮ ಕಾರಿಗೆ ಪೊಲೀಸ್ ಜೀಪು ಗುದ್ದಿದ ಬಳಿಕ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಪ್ರತಿಕ್ರಿಯೆ ಇನ್ನೂ ನೀಡಿಲ್ಲ, ಪಾಪ ಏನಂತ ಹೇಳಿಕೆ ನೀಡಿಯಾರು? ಅಚಾತುರ್ಯವಂತೂ ನಡೆದು ಹೋಗಿದೆ, ಪೊಲೀಸ್ ಇಲಾಖೆಯವರು ಅದನ್ನು ರಿಪೇರಿ ಮಾಡಿಸಿಕೊಡುತ್ತಾರೆ ಮತ್ತು ಮಾರ್ಕ್​ಗಳೇನಾದರೂ ಅಗಿದ್ದರೆ ತೆಗೆಸುತ್ತಾರೆ. ಶಾಸಕರು ಇವತ್ತೇ ಅರಸೀಕೆರೆಗೇನಾದರೂ ವಾಪಸ್ಸು ಹೋಗಬೇಕು ಅಂದುಕೊಂಡಿದ್ದರೆ ಪ್ರಯಾಣವನ್ನು ಮುಂದೂಡದೆ ವಿಧಿಯಿಲ್ಲ.

ಬೆಂಗಳೂರು: ಮೊನ್ನೆ ಅರಸೀಕೆರೆ ಶಾಸಕ ಕೆಎಂ ಶಿವಲಿಂಗೇಗೌಡ ಅವರು 4 ಬಾರಿ ಶಾಸಕನಾಗಿರುವ ತನಗೆ ಮಂತ್ರಿಯಾಗುವ ಮಹದಾಸೆ ಇದೆ ಅಂತ ಹೇಳಿದ್ದನ್ನು ನಗರದ ಪೊಲೀಸರು ಬಹಳ ಗಂಭೀರವಾಗಿ ಪರಿಗಣಿಸಿದಂತಿದೆ! ಮಂತ್ರಿಯಾಗಲಿರುವ ಗೌಡರಿಗೆ ಶಾಸಕರಾಗಿ ಉಪಯೋಗಿಸುತ್ತಿರುವ ಕಾರು ಯಾತಕ್ಕೆ ಬೇಕು? ಇದರಿಂದ ಏನು ಪ್ರಯೋಜನ ಅಂತ ಅಂದುಕೊಂಡಿರುವ ಪೊಲೀಸ್ ಜೀಪಿನ ಚಾಲಕರೊಬ್ಬರು ಶಾಸಕರ ಭವನದ ಮುಂದೆ ನಿಂತಿದ್ದ ಗೌಡರ ಕಾರಿಗೆ ಧಡಾರನೆ ಗುದ್ದಿದ್ದಾರೆ! ನಾವು ಹೇಳಿದ್ದು ತಮಾಷೆಗೆ ಮಾರಾಯ್ರೇ, ನೀವು ಅದನ್ನು ಗಂಭೀರವಾಗಿ ಪರಿಗಣಿಸಬೇಡಿ!! ಕಾರಿನ ಫ್ರಂಟ್ ಡೋರ್ ಜಖಂಗೊಂಡಿರುವುದನ್ನು ದೃಶ್ಯಗಳಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ, ಮಿನಿಸ್ಟ್ರಾಗುವ ಆಸೆ ಖಂಡಿತ ಇದೆ: ಕೆಎಂ ಶಿವಲಿಂಗೇಗೌಡ