ಹಿಂದೂ ಸಮಾಜವನ್ನು ಜಾತಿಗಳ ಹೆಸರಲ್ಲಿ ಒಡೆಯುವ ಕೆಲಸ ರಾಜಕೀಯ ಪಕ್ಷಗಳು ಮಾಡಿವೆ: ಕೆಎಸ್ ಈಶ್ವರಪ್ಪ

ಹಿಂದೂ ಸಮಾಜವನ್ನು ಜಾತಿಗಳ ಹೆಸರಲ್ಲಿ ಒಡೆಯುವ ಕೆಲಸ ರಾಜಕೀಯ ಪಕ್ಷಗಳು ಮಾಡಿವೆ: ಕೆಎಸ್ ಈಶ್ವರಪ್ಪ

ಅರುಣ್​ ಕುಮಾರ್​ ಬೆಳ್ಳಿ
|

Updated on: May 09, 2024 | 12:24 PM

ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಮತ್ತು ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ಜಾತಿ ಹೆಸರಲ್ಲಿ ಮತ ಯಾಚಿಸಿದ್ದಾರೆ ಮತ್ತು ತನ್ನ ವಿರುದ್ಧ ರಾಘವೇಂದ್ರ ನಡೆಸಿದ ಷಡ್ಯಂತ್ರದ ಹೊರತಾಗಿಯೂ ತಾನು ಉತ್ತಮ ಲೀಡ್ ನೊಂದಿಗೆ ಗೆಲುವು ಸಾಧಿಸುವುದಾಗಿ ಈಶ್ವರಪ್ಪ ಹೇಳಿದರು.

ಶಿವಮೊಗ್ಗ: ತಮಗೆ ಅನ್ಯಾಯವಾಗಿರುವುದನ್ನು ಮನಗಂಡಿರುವ, ಹಿಂದೂತ್ವದಲ್ಲಿ ನಂಬಿಕೆಯಿರುವ ಮತ್ತು ಬಿಜೆಪಿಯ ಶುದ್ಧೀಕರಣ ಆಗಬೇಕೆಂದು ಬಯಸುತ್ತಿರುವ ಜನರೆಲ್ಲ ನನ್ನ ಪರ ಮತ ಚಲಾಯಿಸಿದ್ದಾರೆ, ಹಾಗಾಗಿ ನಾನು ನಿಶ್ಚಿತವಾಗಿಯೂ ಗೆಲ್ಲುತ್ತೇನೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆಎಸ್ ಈಶ್ವರಪ್ಪ (KS Eshwarappa) ಹೇಳಿದರು. ಈ ಬಾರಿಯ ಚುನಾವಣೆಯಲ್ಲಿ ಮುಸ್ಲಿಂ ಮತದಾರರು (Muslim voters) ಜಾಗೃತಗೊಂಡು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ ಎಂದು ಹೇಳಿದ ಈಶ್ವರಪ್ಪ, ಹಿಂದೂ ಸಮಾಜವನ್ನು (Hindus) ಜಾತಿಗಳ ಹೆಸರಲ್ಲಿ ಒಡೆಯುವ ಕೆಲಸವನ್ನು ರಾಜಕೀಯ ಪಕ್ಷಗಳು ಮಾಡುತ್ತಿದ್ದರೆ ಅದಕ್ಕೆ ತದ್ವಿರುದ್ಧವಾಗಿ ಮುಸಲ್ಮಾನರು ಒಗ್ಗೂಡಿ ಐಕ್ಯತೆಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಹೇಳಿದರು. ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಮತ್ತು ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ಜಾತಿ ಹೆಸರಲ್ಲಿ ಮತ ಯಾಚಿಸಿದ್ದಾರೆ ಮತ್ತು ತನ್ನ ವಿರುದ್ಧ ರಾಘವೇಂದ್ರ ನಡೆಸಿದ ಷಡ್ಯಂತ್ರದ ಹೊರತಾಗಿಯೂ ತಾನು ಉತ್ತಮ ಲೀಡ್ ನೊಂದಿಗೆ ಗೆಲುವು ಸಾಧಿಸುವುದಾಗಿ ಈಶ್ವರಪ್ಪ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ರಾಘವೇಂದ್ರನ ಕುತಂತ್ರ ರಾಜಕಾರಣಕ್ಕೆ ಮತದಾರ ಬಲಿಯಾಗಲ್ಲ, 2 ಲಕ್ಷ ವೋಟುಗಳಿಂದ ಗೆಲ್ಲುತ್ತೇನೆ: ಕೆಎಸ್ ಈಶ್ವರಪ್ಪ