ಎಲ್ಲರಿಗಿಂತ ಮೊದಲು ಮುನಿರತ್ನನನ್ನು ಮಂಪರು ಪರೀಕ್ಷೆಗೊಳಪಡಿಸಬೇಕು: ಕೆ ಎನ್ ರಾಜಣ್ಣ
ಹನಿ ಟ್ರ್ಯಾಪ್ ಮಾಡುವ ಪ್ರಯತ್ನ ನಡೆದಿರುವುದಕ್ಕೆ ದೂರು ಸಲ್ಲಿಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ರಾಜಣ್ಣ ಸೂಕ್ತ ಸಮಯದಲ್ಲಿ ದೂರು ಸಲ್ಲಿಸಲಾಗುವುದು ಎಂದು ಹೇಳಿದರು, ಸದ್ಯಕ್ಕೆ ತಾನೀಗ ತುರುವೇಕೆರೆಗೆ ಹೋಗುತ್ತಿರುವುದಾಗಿ ಹೇಳಿದ ಸಹಕಾರ ಸಚಿವ ಅಲ್ಲಿಂದ ವಾಪಸ್ಸು ಬಂದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸವಿಸ್ತಾರವಾಗಿ ಮಾತಾಡುತ್ತೇನೆಂದು ಹೇಳಿದರು.
ತುಮಕೂರು, ಮಾರ್ಚ್ 24: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ಒಂದೇ ಸಮನೆ ಆರೋಪಗಳನ್ನು ಮಾಡುತ್ತಿರುವ ರಾಜಾರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕೆ? ಸಹಕಾರ ಸಚಿವ ಕೆಎನ್ ರಾಜಣ್ಣ ಅವರು ಹೇಳುವ ಪ್ರಕಾರ ಹೌದು. ಶಿವಕುಮಾರ್ರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕೆಂದು ಮುನಿರತ್ನ ಹೇಳುತ್ತಿದ್ದಾರಲ್ಲ ಅಂತ ಹೇಳಿದಾಗ, ಅವರೇನು ಹೇಳಿದ್ದಾರೆಂದು ಗೊತ್ತಿಲ್ಲ, ಆದರೆ ಮೊದಲೆಲ್ಲ ಶಿವಕುಮಾರ್ ಜೊತೆಗಿದ್ದ ಬಿಜೆಪಿ ಶಾಸಕನ ಮೇಲೆಯೇ ಮೊದಲು ಆ ಪರೀಕ್ಷೆ ನಡೆಸಬೇಕು ಎಂದು ರಾಜಣ್ಣ ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರಾಜಣ್ಣ ಮಾಡಿರುವ ಹನಿ ಟ್ರ್ಯಾಪ್ ಆರೋಪ ಬಹಳ ಸೂಕ್ಷ್ಮ, ಆಫ್ ದಿ ಕಫ್ ಪ್ರತಿಕ್ರಿಯೆ ನೀಡಲ್ಲ: ಪರಮೇಶ್ವರ್