Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಮಗಾರಿ ಹಿನ್ನೆಲೆಯಲ್ಲಿ ನಂದಿಹಿಲ್ಸ್​ಗೆ ಹೋಗುವ ರಸ್ತೆಗಳು ಇಂದಿನಿಂದ ಒಂದು ತಿಂಗಳವರೆಗೆ ಬಂದ್

ಕಾಮಗಾರಿ ಹಿನ್ನೆಲೆಯಲ್ಲಿ ನಂದಿಹಿಲ್ಸ್​ಗೆ ಹೋಗುವ ರಸ್ತೆಗಳು ಇಂದಿನಿಂದ ಒಂದು ತಿಂಗಳವರೆಗೆ ಬಂದ್

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 24, 2025 | 10:34 AM

ಪ್ರೇಮಿಗಳು ಮತ್ತು ವಿಹಾರಪ್ರಿಯರು ಬಹಳ ನಿರಾಶರಾಗುವ ಅವಶ್ಯಕತೆ ಇಲ್ಲ. ಸಮಾಧಾನಕಾರ ಸಂಗತಿಯೇನೆಂದರೆ, ಜಿಲ್ಲಾಡಳಿತವು ವೀಕೆಂಡ್​ನಲ್ಲಿ ಪ್ರವಾಸಿಗರು ನಂದಿಧಾಮಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸಿದೆ. ಶುಕ್ರವಾರ ಸಾಯಂಕಾಲ 6.30 ರಿಂದ ಸೋಮವಾರ ಬೆಳಗ್ಗೆ 8 ಗಂಟೆಯವರೆಗೆ ನಂದಿಹಿಲ್ಸ್ ಗೆ ಹೋಗುವ ರಸ್ತೆಗಳು ಓಪನ್ನಾಗಿರುತ್ತವೆ. ಪ್ರವಾಸಿಗರು ದಿನ ಮತ್ತು ಸಮಯವನ್ನು ನೆನಪಿಟ್ಟುಕೊಂಡಿರಬೇಕು.

ಚಿಕ್ಕಬಳ್ಳಾಪುರ, 24 ಮಾರ್ಚ್ : ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಯಲ್ಲಿ ವಾಸವಾಗಿರುವ ಜನರ ಅದರಲ್ಲೂ ವಿಶೇಷವಾಗಿ ಪ್ರೇಮಿಗಳ ಅಚ್ಚುಮೆಚ್ಚಿನ ವಿಹಾರ ತಾಣವಾಗಿರುವ ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಗಿರಿಧಾಮ, ಸರಳವಾಗಿ ಹೇಳುವುದಾದರೆ ನಂದಿ ಹಿಲ್ಸ್ ಒಂದು ತಿಂಗಳು ಅವಧಿಯವರೆಗೆ ಬಂದ್ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಈ ಭಾಗದಲ್ಲಿ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವುದರಿಂದ ಪ್ರವಾಸಿಗರು ಮತ್ತು ವಿಹಾರಿಗಳು 25ಏಪ್ರಿಲ್, 2025 ರವರೆಗೆ ಇಲ್ಲಿಗೆ ಬರುವುದನ್ನು ಪ್ರತಿಬಂಧಿಸಲಾಗಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ವಯನಾಡು ರೀತಿ ನಂದಿ ಹಿಲ್ಸ್ ಕೂಡ ಕುಸಿಯುತ್ತಂತೆ; ಭೂ ವಿಜ್ಞಾನಿಗಳಿಂದ ಹೊರ ಬಿತ್ತು ಆತಂಕಕಾರಿ ವಿಷಯ