ನಂದಿಹಿಲ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಅಪರಾಧ ಚಟುವಟಿಕೆಗಳು

ನಂದಿಹಿಲ್ಸ್​ಗೆ ಬರುವ ಪ್ರವಾಸಿಗರ ಹಿತರಕ್ಷಣೆಗೆಂದು ರಾಜ್ಯ ಸರ್ಕಾರ ಕೆಲವೇ ವರ್ಷಗಳ ಹಿಂದೆ ನೂತನವಾಗಿ ನಂದಿಗಿರಿಧಾಮ ಪೊಲೀಸ್ ಠಾಣೆಯನ್ನು ನಿರ್ಮಾಣ ಮಾಡಿದೆ. ಆದರೂ ಇತ್ತೀಚಿನ ದಿನಗಳಲ್ಲಿ ನಂದಿ ಹಿಲ್ಸ್ ಪೊಲೀಸ್ ಸ್ಟೇಷನ್(Nandi Hills police station) ವ್ಯಾಪ್ತಿಯನ್ನು ನಟೋರಿಯಸ್ ಕ್ರಿಮಿನಲ್‌ಗಳು, ಕಿಡ್ನಾಪರ್ಸ್​ಗಳ ಅಡ್ಡೆ ಮಾಡಿಕೊಂಡಂತೆ ಕಂಡು ಬಂದಿದೆ.

ನಂದಿಹಿಲ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಹೆಚ್ಚುತ್ತಿರುವ ಅಪರಾಧ ಚಟುವಟಿಕೆಗಳು
ನಂದಿಹಿಲ್ಸ್ ಪೊಲೀಸ್ ಠಾಣೆ
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 25, 2024 | 10:04 PM

ಚಿಕ್ಕಬಳ್ಳಾಪುರ, ಜು.25: ವಿಶ್ವವಿಖ್ಯಾತ ಪ್ರವಾಸಿತಾಣ ನಂದಿಹಿಲ್ಸ್​ಗೆ ಬರುವ ಪ್ರವಾಸಿಗರ ಹಿತರಕ್ಷಣೆಗೆಂದು ರಾಜ್ಯ ಸರ್ಕಾರ ಕೆಲವೇ ವರ್ಷಗಳ ಹಿಂದೆ ನೂತನವಾಗಿ ನಂದಿಗಿರಿಧಾಮ ಪೊಲೀಸ್ ಠಾಣೆಯನ್ನು ನಿರ್ಮಾಣ ಮಾಡಿ, ಕಾನೂನು ಸುವ್ಯವಸ್ಥೆ ಹಾಗೂ ಕ್ರೈಂಗೆ ಎಂದು ಇಬ್ಬಿಬ್ಬರು ಪಿಎಸ್‌ಐಗಳನ್ನು ನೇಮಕ ಮಾಡಿ, ಅವರಿಗೆ ಬೇಕಾದ ಸಿಬ್ಬಂದಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ನಂದಿ ಹಿಲ್ಸ್ ಪೊಲೀಸ್ ಸ್ಟೇಷನ್(Nandi Hills police station) ವ್ಯಾಪ್ತಿಯನ್ನು ನಟೋರಿಯಸ್ ಕ್ರಿಮಿನಲ್‌ಗಳು, ಕಿಡ್ನಾಪರ್ಸ್​ಗಳ ಅಡ್ಡೆ ಮಾಡಿಕೊಂಡಂತೆ ಕಂಡು ಬಂದಿದೆ.

ಉದ್ಯಮಿ ಕಿಡ್ನಾಪ್

ಇದಕ್ಕೆ ಮತ್ತೊಂದು ತಾಜಾ ಉದಾಹರಣೆ ಎಂಬಂತೆ ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಗಿರಿಧಾಮ ಬುಡದಲ್ಲಿರುವ ಕುಡುವತಿ ಗ್ರಾಮದ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ರಾಜಕಾರಿಣಿ ಕೆ.ಆರ್.ನವೀನ್ ತನ್ನ ಒಡೆತನದ ನಂದಿಗಿರಿಧಾಮ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕಸಾಗರಹಳ್ಳಿ ಬಳಿಯ ತೋಟದ ಮನೆಯ ಬಳಿ ಜು.20 ರಂದು ಬೆಳಿಗ್ಗೆ 7.30ರ ಸಮಯದಲ್ಲಿ ವಾಕಿಂಗ್ ಮಾಡುತ್ತಿದ್ದಾಗ, 4 ಜನ ದುಷ್ಕರ್ಮಿಗಳು ಹಣೆಗೆ ಗನ್ ಇಟ್ಟು ಕೊಲೆ ಬೆದರಿಕೆ ಹಾಕಿ, ಕಣ್ಣಿಗೆ ಬಟ್ಟೆ ಕಟ್ಟಿ ಕಿಡ್ನಾಪ್ ಮಾಡಿದ್ದರು.

ಇದನ್ನೂ ಓದಿ:ವಿಜಯನಗರ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಚಟುವಟಿಕೆ ಹೆಚ್ಚಳ; ಸರಸ್ವತಿ ನಗರಕ್ಕೆ ಹೊಸ ಪೊಲೀಸ್ ಠಾಣೆ ಮಂಜೂರು

ಚಿತ್ರಹಿಂಸೆ ಕೊಟ್ಟು 60 ಲಕ್ಷ ರೂ. ಹಣ ವಸೂಲಿ

6 ಜನ ಕಿಡ್ನಾಪರ್ಸ್​ಗಳು ಸಿಲ್ವರ್ ಬಣ್ಣದ ಸ್ವಿಪ್ಟ್ ಕಾರಿನಲ್ಲಿ ನವೀನ್‌ನನ್ನು ಕೂಡಿ ಹಾಕಿಕೊಂಡು, ಕ್ಷಣಕ್ಕೊಂದು, ದಿನಕ್ಕೊಂದು ಏರಿಯಾದಿಂದ ಏರಿಯಾಗೆ ಸಾಗಿಸಿಕೊಂಡು ವಿಕೃತ ಚಿತ್ರಹಿಂಸೆ ನೀಡುತ್ತಾ, ನವೀನ್ ಸಂಬಂಧಿಕರು, ಸ್ನೇಹಿತರು, ಪರಿಚಯಸ್ಥ ಉದ್ಯಮಿಗಳಿಂದ ಹಣವನ್ನು ತರಿಸಿಕೊಂಡು 60 ಲಕ್ಷ ರೂಪಾಯಿ ವಸೂಲಿ ಮಾಡಿದ್ದಾರೆ. ನಂತರ ನಂದಿಹಿಲ್ಸ್ ಪೊಲೀಸ್ ಠಾಣೆ ಎದುರುಗಡೆ ಇರುವ ಎಲ್‌ಜಿ ಲೇಔಟ್‌ನಲ್ಲಿ ಬಿಟ್ಟು ಪರಾರಿಯಾಗಿದ್ದು, ಈ ಕುರಿತು ನಂದಿ ಗಿರಿಧಾಮ ಠಾಣೆ ಪೊಲೀಸರು ಭಾರತೀಯ ನ್ಯಾಯಸಂಹಿತೆ 140(2) 190 ಹಾಗೂ 25 ಸಶಸ್ತ್ರ ನಿಷೇಧ ಕಾಯ್ದೆಯಡಿ ದೂರು ದಾಖಲು ಮಾಡಿಕೊಂಡಿದ್ದಾರೆ.

ನಂದಿಕ್ರಾಸ್ ಬಳಿ ಸೀರೆ ಮಹಿಳಾ ಉದ್ಯಮಿಯ ಕಿಡ್ನಾಪ್ ಹಾಗೂ ರಾಬರಿ

ಇನ್ನು ಇತ್ತೀಚಿಗೆ ಇದೇ ನಂದಿ ಗಿರಿಧಾಮ ಪೊಲೀಸ್ ಠಾಣೆಯ ಎದುರುಗಡೆ ಇರುವ ಲೋಕೇಶ್ ಹೋಟೆಲ್ ಹತ್ತಿರ ಸೀರೆ ಮಹಿಳಾ ಉದ್ಯಮಿ, ಸೀರೆ ಖರೀದಿ ಮಾಡಲು ವಿಜಯಪುರಕ್ಕೆ ಹೋಗುತ್ತಿದ್ದಾಗ, ಠಾಣೆಯ ಬಳಿ ಇರುವ ಎನ್‌ಹೆಚ್-7ರಲ್ಲಿ 5 ಲಕ್ಷಕ್ಕೂ ಹೆಚ್ಚು ಹಣ ಕಿತ್ತುಕೊಂಡು, ಚಿತ್ರಹಿಂಸೆ ನೀಡಿ ಬಿಟ್ಟು ಕಳುಹಿಸಲಾಗಿತ್ತು. ಆಗ ಕೆಲವು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಇದನ್ನೂ ಓದಿ:ಮಕ್ಕಳು ಅಪರಾಧ ಜಗತ್ತಿನಲ್ಲಿ ಗುರುತಿಸಿಕೊಳ್ಳಲು ಈ ವಿಚಾರ ಕಾರಣ? ನಿಯಂತ್ರಣ ಹೇಗೆ? ಡಾ. ನಿವೇದಿತಾ ಹೇಳೋದೇನು?

ಕ್ಯೂ.ವಿ.ಸಿ ವಿಲ್ಲಾದಲ್ಲಿ ಟೆಕ್ಕಿಯನ್ನು ಕೂಡಿಹಾಕಿ ಚಿತ್ರಹಿಂಸೆ

ಕೆಲವೇ ಕೆಲವು ತಿಂಗಳ ಹಿಂದೆ ನಂದಿಹಿಲ್ಸ್ ಪೊಲೀಸ್‌ ಠಾಣೆ ವ್ಯಾಪ್ತಿಯ ನಂದಿ ಗಿರಿಧಾಮದ ಬುಡದಲ್ಲಿರುವ ಶ್ರೀಮಂತರ ಅಡ್ಡೆ ಎಂದೇ ಖ್ಯಾತಿಯಾಗಿರುವ ಕ್ಯೂವಿಸಿ ವಿಲ್ಲಾದಲ್ಲಿ ಹೈದರಾಬಾದ್ ಮೂಲದ ಟೆಕ್ಕಿಯನ್ನು ಕೂಡಿಹಾಕಿ ಆತನಿಂದ ಐಪೋನ್, ಲ್ಯಾಪ್‌ಟಾಪ್, ಬೆಲೆ ಬಾಳುವ ವಾಚ್ ಕಿತ್ತುಕೊಂಡು ಆನ್‌ಲೈನ್ ಬ್ಯಾಂಕಿಂಗ್ ಆಪ್‌ಗಳ ಮೂಲಕ ಸುಮಾರು 18 ಲಕ್ಷಕ್ಕೂ ಹೆಚ್ಚು ಹಣವನ್ನು ಸಾಲ ಮಾಡಿಸಿ ರಾಬರಿ ಮಾಡಲಾಗಿತ್ತು. ಈ ಪ್ರಕರಣದ ತನಿಖೆ ಸಮರ್ಪಕವಾಗಿ ನಡೆಯಲಿಲ್ಲ ಎನ್ನುವ ಆರೋಪ ಕೇಳಿಬಂದಿತ್ತು.

ಪೊಲೀಸ್ ಠಾಣೆ ಎದುರುಗಡೆಯೇ ಕಾರು ತಡೆದು ರಾಬರಿ

ಕೆಲವು ತಿಂಗಳ ಹಿಂದೆ ಹೈದರಾಬಾದ್‌ನಿಂದ ಬೆಂಗಳೂರಿಗೆ ಸ್ವಿಪ್ಟ್ ಕಾರಿನಲ್ಲಿ ಇಬ್ಬರು ಸ್ನೇಹಿತರ ತಂಡ ಪ್ರಯಾಣ ಬೆಳೆಸಿತ್ತು. ರಾತ್ರಿಯಿಡೀ ಪ್ರಯಾಣ ಮಾಡಿ ಆಯಾಸವಾದ ಕಾರಣ ತಮ್ಮ ಸ್ವಿಪ್ಟ್ ಕಾರನ್ನು ನಂದಿ ಗಿರಿಧಾಮ ಪೊಲೀಸ್ ಠಾಣೆಯ ಎದುರುಗಡೆ ರಾಷ್ಟ್ರೀಯ ಹೆದ್ದಾರಿ-44 ರಲ್ಲಿ ರಸ್ತೆ ಬದಿ ನಿಲ್ಲಿಸಿ ನಿದ್ದೆ ಹೋಗಿದ್ದರು. ಆಗ ಮಾರಕಾಸ್ತ್ರಗಳನ್ನು ಹಿಡಿದುಬಂದ 4 ಜನರ ದುಷ್ಕರ್ಮಿಗಳ ತಂಡ, ಕೊಲೆ ಬೆದರಿಕೆ ಹಾಕಿ ಅವರ ಬಳಿ ಇದ್ದ ಪೋನ್, ಕತ್ತಿನಲ್ಲಿದ್ದ ಚಿನ್ನದ ಸರ, ಬೆರಳಿನಲ್ಲಿದ್ದ ಉಂಗುರ ಹಾಗೂ 60 ಸಾವಿರ ರೂಪಾಯಿ ಹಣ ದರೋಡೆ ಮಾಡಲಾಗಿತ್ತು.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಂಡುಕೇಳದ, ನಡೆಯದ ದರೋಡೆ, ಕಿಡ್ನಾಪ್, ಕಳ್ಳತನ ಪ್ರಕರಣಗಳು ನಂದಿ ಗಿರಿಧಾಮ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲೇ ನಡೆಯುತ್ತಿವೆ ಎನ್ನುವ ಆರೋಪ ಹಾಗೂ ದೂರುಗಳು ಪದೆ ಪದೆ ಕೇಳಿ ಬರುತ್ತಿವೆ. ಇನ್ನೂ ಮುಂದಾದ್ರು ಹಿರಿಯ ಪೊಲೀಸ್ ಅಧಿಕಾರಿಗಳು ನಂದಿಹಿಲ್ಸ್ ಪೊಲೀಸ್‌ ಠಾಣೆಯತ್ತ ಗಮನ ಹರಿಸುತ್ತಾರಾ ಕಾದು ನೋಡಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನುನ ಓದಲು ಇಲ್ಲಿ ಕ್ಲಿಕ್ ಮಾಡಿ

ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ