ಪ್ರಜ್ವಲ್ ಪ್ರಕರಣ: ಒಂದು ಹೆಸರು ಎಚ್​ಡಿಕೆ ಹೇಳವ್ರೆ, ಇನ್ನೊಂದು ನಾನ್ ಹೇಳ್ತೀನಿ ಎಂದ ಯತ್ನಾಳ್

Basana Gouda Patil Yatnal on Prajwal Revanna case: ರಾಜ್ಯದಲ್ಲಿ ಎರಡು ಸಿಡಿ ಫ್ಯಾಕ್ಟರಿಗಳಿವೆ. ಒಂದನ್ನು ಕುಮಾರಸ್ವಾಮಿ ಬಹಿರಂಗಪಡಿಸಿದ್ದಾರೆ. ಇನ್ನೊಂದು ಸಿಡಿ ಫ್ಯಾಕ್ಟರಿಯನ್ನು ಮೇ 8ಕ್ಕೆ ನಾನು ಬಹಿರಂಗಪಡಿಸುತ್ತೇನೆ ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ದಾವಣಗೆರೆಗೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಯತ್ನಾಳ್, ಈ ಎರಡು ಸಿಡಿ ಫ್ಯಾಕ್ಟರಿ ಕುಟುಂಬಗಳು ಕರ್ನಾಟಕ ರಾಜಕಾರಣವನ್ನು ಹಾಳು ಮಾಡಿವೆ ಎಂದು ಆರೋಪಿಸಿದ್ದಾರೆ.

ಪ್ರಜ್ವಲ್ ಪ್ರಕರಣ: ಒಂದು ಹೆಸರು ಎಚ್​ಡಿಕೆ ಹೇಳವ್ರೆ, ಇನ್ನೊಂದು ನಾನ್ ಹೇಳ್ತೀನಿ ಎಂದ ಯತ್ನಾಳ್
|

Updated on:May 01, 2024 | 7:00 PM

ದಾವಣಗೆರೆ, ಮೇ 1: ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಸ್ಫೋಟಕ ಮಾಹಿತಿ ಹೊರಗೆಡುವುದಾಗಿ ಹೇಳಿದ್ದಾರೆ. ರಾಜ್ಯದಲ್ಲಿ ಎರಡು ಸಿಡಿ ಫ್ಯಾಕ್ಟರಿಗಳಿವೆ. ಒಂದನ್ನು ಕುಮಾರಸ್ವಾಮಿ ಬಹಿರಂಗಪಡಿಸಿದ್ದಾರೆ. ಮತ್ತೊಂದು ಸಿಡಿ ಫ್ಯಾಕ್ಟರಿ ಹೆಸರನ್ನು ಮೇ ಎಂಟರಂದು ತಿಳಿಸುತ್ತೇನೆ ಎಂದು ಯತ್ನಾಳ್ ಹೇಳಿದ್ದಾರೆ. ಇಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಯತ್ನಾಳ್, ಎರಡನೇ ಸಿಡಿ ಫ್ಯಾಕ್ಟರಿ ಬೇರೆ ಪಕ್ಷದಲ್ಲಿರುವವರು ಎನ್ನುವ ಮೂಲಕ ಕುತೂಹಲ ಮೂಡಿಸಿದ್ದಾರೆ.

ರಾಮನಗರದ ಕಾಂಗ್ರೆಸ್ ಶಾಸಕರ ವಿಡಿಯೋ ರಿಲೀಸ್ ಆಗಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಯತ್ನಾಳ, ‘ನೋಡಿ ಸಾರ್, ರಾಜ್ಯದಲ್ಲಿ ಎರಡು ಫ್ಯಾಕ್ಟರಿಗಳದಾವು ಅಂತ ಹೇಳಿವ್ನಿ. ಇವರ ದಂಧಾನೆ ಅದೇ ಅದ. ಇಬ್ರೂ ಬೇರೆ ಬೇರೆ ಪಾರ್ಟಿಯಲ್ಲಿದ್ರೂ ಇಬ್ಬರ ಸಿಡಿ ಬಿಸಿನೆಸ್ ಒಂದೇ ಇದೆ. ಇವರಿಬ್ಬರೂ ಹಲ್ಕಾ ರಾಜಕಾರಣ ಕರ್ನಾಟಕದಲ್ಲಿ ಮಾಡಕತ್ಯಾರ. ಇವೆರಡು ಕುಟುಂಬ ಕರ್ನಾಟಕ ರಾಜಕಾರಣವನ್ನು ಹಾಳು ಮಾಡೋಕೆ ಕುಂತವ್ರೆ,’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಪ್ರಕರಣದಿಂದ ಬಿಜೆಪಿಗೆ ಹಿನ್ನಡೆ ಆಗುತ್ತದೆ ಎನ್ನುವ ಅಭಿಪ್ರಾಯವನ್ನು ಅವರು ತಳ್ಳಿಹಾಕಿದ್ದಾರೆ. ‘ಪ್ರಜ್ವಲ್ ರೇವಣ್ಣ ಪ್ರಕರಣಕ್ಕೂ ಬಿಜೆಪಿಗೂ ಏನು ಸಂಬಂದ ಐತ್ರಿ? 2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ ಅವರು ಎಂಪಿಯಾಗಿದ್ರು. ಈಗ ರಾಜ್ಯದಲ್ಲಿ ಸರ್ಕಾರ ಯಾರದೈತಿ. ಪ್ರಜ್ವಲ್ ಪರಾರಿ ಆಗೋವಾಗ ಸರ್ಕಾರ ಮಲಗಿತ್ತಾ? ವ್ಯವಸ್ತಿತವಾಗಿ ಈ ಪ್ರಕರಣ ಮುಚ್ಚುವುದು ಕೆಲವು ಅಡ್ಜಸ್ಟ್​ಮೆಂಟ್ ರಾಜಕಾರಣಿಗಳ ಉದ್ದೇಶ,’ ಎಂದು ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣನ ಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿದೆ, ಜನ ಅವನ ಮುಖಕ್ಕೆ ಉಗಿಯುತ್ತಿದ್ದಾರೆ: ಈಶ್ವರಪ್ಪ

ಅಡ್ಜಸ್ಟ್​ಮೆಂಟ್ ರಾಜಕಾರಣ?

ಕರ್ನಾಟಕದಲ್ಲಿ ಪಿಎಸ್​ಐ ಪ್ರಕರಣದ ತನಿಖೆ ಏನಾಯಿತು? ಗಾಂಜಾ ಹಫೀಮು ಸಿಕ್ಕಿದೆ ಎಂದು ರೇಡ್ ಮಾಡಿದ್ರಿ? ಯಾವ ರಾಜಕಾರಣಿ ಮಗ ಈ ಪ್ರಕರಣದಲ್ಲಿ ಇದಾನೆ ಅಂತ ಕಂಡುಹಿಡಿದ್ರಾ? ನೀವು ಅಡ್ಜಸ್ಟ್​ಮೆಂಟ್ ಇದೀರಿ. ಪ್ರಜ್ವಲ್ ಪ್ರಕರಣವನ್ನು ಸಿಬಿಐ ತನಿಖೆ ಕೊಡಿ ಅಂತ ಕೇಳ್ತಿದೇವೆ. ಆದರೆ ನೀವು ಕೊಡುತ್ತಿಲ್ಲ ಎಂದು ಯತ್ನಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:24 pm, Wed, 1 May 24

Follow us