ಕಾಂಗ್ರೆಸ್ ಪ್ರಾಯೋಜಕತ್ವದೊಂದಿಗೆ ಡ್ರೈವರ್ ಕಾರ್ತೀಕ್ ವಿದೇಶದಲ್ಲಿ ಮಜಾ ಮಾಡುತ್ತಿದ್ದಾನೆ: ಆರ್ ಅಶೋಕ
ಅವನಿಗೆ ವಿದೇಶಕ್ಕೆ ಕಳಿಸಲು ಏರ್ ಟಿಕೆಟ್, ಅಲ್ಲಿ ಉಳಿಯಲು ಹೋಟೆಲ್ ವ್ಯವಸ್ಥೆ, ಊಟೋಪಚಾರ-ಲಕ್ಷಾಂತರ ರೂ. ಖರ್ಚು ಮಾಡಲಾಗುತ್ತಿದೆ. ಕಾರ್ತೀಕ್ ನೇ ಪೆನ್ ಡ್ರೈವ್ ಕೊಟ್ಟಿದ್ದು ಅಂತ ದೇವರಾಜೇಗೌಡ ಹೇಳಿದರೂ ವಿದೇಶ ಹೋಗದಂತೆ ಅವನನ್ನು ಯಾಕೆ ತಡೆಯಲಿಲ್ಲ ಎಂದು ಅಶೋಕ ಪ್ರಶ್ನಿಸಿದರು.
ಬೆಂಗಳೂರು: ನಗರದಲ್ಲಿಂದು ಪತ್ರಿಕಾಗೋಷ್ಟಿ ನಡೆಸಿ ಮಾತಾಡಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ (R Ashoka) ಪ್ರಜ್ವಲ್ ರೇವಣ್ಣ ಸೆಕ್ಸ್ ಟೇಪುಗಳ ಪ್ರಕರಣ ತನಿಖೆ ಮಾಡುತ್ತಿರುವ ಎಸ್ಐಟಿ ತಂಡ ಒಂದು ರಬ್ಬರ್ ಸ್ಟ್ಯಾಂಪ್ (rubber stamp), ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ (DK Shivakumar) ಹೇಳಿದಕ್ಕೆಲ್ಲ ಮುದ್ರೆ ಹಾಕೋದೇ ಎಸ್ಐಟಿ ಅಧಿಕಾರಿಗಳ ಕೆಲಸ ಎಂದು ಹೇಳಿದರು. ಎಸ್ಐಟಿ ಕಾರ್ಯವೈಖರಿಯನ್ನು ಉಗ್ರವಾಗಿ ಟೀಕಿಸಿದ ಅವರು ಪೆನ್ ಡ್ರೈವ್ ಗಳನ್ನು ದೇವರಾಜೇಗೌಡಗೆ ಕೊಟ್ಟ ಡ್ರೈವರ್ ಕಾರ್ತೀಕ್ ನನ್ನು ಇದುವರೆಗೆ ಯಾಕೆ ಬಂಧಿಸಿಲ್ಲ ಎಂದು ಕೇಳಿದರು. ಯಕಃಶ್ಚಿತ್ ಒಬ್ಬ ಡ್ರೈವರ್ ಗಾಗಿ ಕಾಂಗ್ರೆಸ್ ಎಷ್ಟು ಖರ್ಚು ಮಾಡುತ್ತಿದೆ ಅನ್ನೋದನ್ನ ಗಮನಿಸಿ. ಅವನಿಗೆ ವಿದೇಶಕ್ಕೆ ಕಳಿಸಲು ಏರ್ ಟಿಕೆಟ್, ಅಲ್ಲಿ ಉಳಿಯಲು ಹೋಟೆಲ್ ವ್ಯವಸ್ಥೆ, ಊಟೋಪಚಾರ-ಲಕ್ಷಾಂತರ ರೂ. ಖರ್ಚು ಮಾಡಲಾಗುತ್ತಿದೆ. ಕಾರ್ತೀಕ್ ನೇ ಪೆನ್ ಡ್ರೈವ್ ಕೊಟ್ಟಿದ್ದು ಅಂತ ದೇವರಾಜೇಗೌಡ ಹೇಳಿದರೂ ವಿದೇಶ ಹೋಗದಂತೆ ಅವನನ್ನು ಯಾಕೆ ತಡೆಯಲಿಲ್ಲ ಎಂದು ಅಶೋಕ ಪ್ರಶ್ನಿಸಿದರು. ದೇವರಾಜೇಗೌಡ ಮತ್ತೊಂದು ಮಾತು ಹೇಳಿದ್ದಾರೆ, ನಿನ್ನೆ ಅವರು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ವಿರುದ್ಧ ನೀಡಿದ ಹೇಳಿಕೆಗಳನ್ನು ವಾಪಸ್ಸು ಪಡೆಯುವಂತೆ ಎಸ್ಐಟಿ ಆಧಿಕಾರಿಗಳು ಅವರ ಮೇಲೆ ಒತ್ತಡ ಹಾಕಿದ್ದಾರಂತೆ! ತಂಡದಲ್ಲಿರುವ ಅಧಿಕಾರಿಗಳಿಗೆ ಸರ್ಕಾರದ ಒತ್ತಡದಲ್ಲಿ ಕೆಲಸ ಮಾಡುವುದು ಸಾಧ್ಯವಾಗುತ್ತಿಲ್ಲವಾದರೆ, ಅದನ್ನು ಅವರು ಸರ್ಕಾರಕ್ಕೆ ತಿಳಿಸಬೇಕು ಎಂದು ಅಶೋಕ ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕಾಂಗ್ರೆಸ್ ಆಡಳಿತದಲ್ಲಿ ಕ್ರೈಮ್ ಸಿಟಿಯಾಗುತ್ತಿದೆ ಬೆಂಗಳೂರು: ಪ್ರತಿಪಕ್ಷ ನಾಯಕ ಆರ್ ಅಶೋಕ ವಾಗ್ದಾಳಿ