Loading video

ನನ್ ಬ್ರದರ್ ಹೇಳಿದ್ರಾ? ಕಾರ್ತಿಕ್​ನನ್ನು ಮಲೇಷ್ಯಾಗೆ ಕಳಿಸಿದ್ಯಾರು ಎಂದ ಎಚ್​ಡಿಕೆಗೆ ಡಿಕೆಶಿ ಟಾಂಟ್

|

Updated on: May 02, 2024 | 5:37 PM

Political verbal due on Prajwal Revanna sex scandal: ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಲು ಸಿದ್ದರಾಮಯ್ಯ ಕಾರಣ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ನೇರವಾಗಿ ಆರೋಪ ಮಾಡಿದ್ದಾರೆ. ಕೇಂದ್ರಕ್ಕೆ ಗೊತ್ತಿಲ್ಲದೇ ಒಬ್ಬ ವ್ಯಕ್ತಿ ವಿದೇಶಕ್ಕೆ ಹೋಗಲು ಹೇಗೆ ಸಾಧ್ಯ ಎಂದು ಸಿಎಂ ಸಿದ್ದರಾಮಯ್ಯ ಕೇಳಿದ್ದಾರೆ. ಇನ್ನು, ರೇವಣ್ಣ ಕಾರ್ ಡ್ರೈವರ್ ಕಾರ್ತಿಕ್​ನನ್ನು ಮಲೇಷ್ಯಾಗೆ ಕಳುಹಿಸಿ ಅಲ್ಲಿಂದ ಬಿಡುಗಡೆ ಮಾಡಿಸಿದ್ದು ಡಿಕೆ ಶಿವಕುಮಾರ್ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.

ಬೆಂಗಳೂರು, ಮೇ 1: ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣದಲ್ಲಿ (Prajwal Revanna sex scandal) ರಾಜಕೀಯ ವಾಗ್ಯುದ್ಧ ನಡೆಯುತ್ತಿದೆ. ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿರುವುದು, ಪೆನ್ ಡ್ರೈವ್ ಲೀಗ್ ಆಗಿದ್ದರ ರೂವಾರಿ ಡ್ರೈವರ್ ಕಾರ್ತಿಕ್ ಮಲೇಷ್ಯಾದಲ್ಲಿರುವ ವಿಚಾರ ಕಾಂಗ್ರೆಸ್ ಮತ್ತು ಎನ್​ಡಿಎ ಮಧ್ಯೆ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ಯಾರು ಏನು ಮಾತಾಡಿದರು, ಇಲ್ಲಿದೆ ಡೀಟೇಲ್ಸ್….

ಎಚ್​ಡಿ ಕುಮಾರಸ್ವಾಮಿ: ಡ್ರೈವರ್ ಕಾರ್ತಿಕ್ ಪ್ರೆಸ್ ಮೀಟ್ ಮಾಡಿ ಹೇಳಿದ್ದಾರಾ? ವಿಡಿಯೋ ಮಾಡಿ ಹೇಳಿಕೆ ನೀಡಿದ್ದಾರೆ. ಮಲೇಷ್ಯಾದಿಂದ ವಿಡಿಯೋ ಮಾಡಿ ಕಳುಹಿಸಿದ್ದಾನೆ. ಅವನನ್ನು ಮಲೇಷ್ಯಾಗೆ ಕಳಿಸಿದ್ದು ಯಾರು?

ಡಿಕೆ ಶಿವಕುಮಾರ್: ಯಾರು ನನ್ನ ಬ್ರದರ್ ಹೇಳಿದ್ರಾ? ಅವರಿಗೆ ಎಲ್ಲಾ ಇನ್ಫಾರ್ಮೇಶನ್ ಗೊತ್ತಿರಬೇಕಲ್ವ. ಸೆಂಟ್ರಲ್​ನಿಂದ ಮಾಹಿತಿ ತರಿಸಲಿ…. ನಂಗೇನು ತಲೆ ಕೆಟ್ಟಿದ್ಯಾ? ರೋಡಲ್ಲಿ ಫೈಟ್ ಮಾಡ್ತೀನಿ. ಹಿಂದೆ ಯಾರನ್ನೋ ಕಳುಹಿಸೋದು, ತೋಟದಲ್ಲಿ ಮಡಗೋದು ಇವೆಲ್ಲಾ ನಂಗೆ ಅಭ್ಯಾಸ ಇಲ್ಲ.

ಇದನ್ನೂ ಓದಿ: ಪಕ್ಷದ ಕಾರ್ಯಕರ್ತೆಯರ ಕರೆಸಿ ಫಾರ್ಮ್​ಹೌಸ್​ನಲ್ಲಿ ಅಶ್ಲೀಲ ವಿಡಿಯೋ ರೆಕಾರ್ಡಿಂಗ್ ಮಾಡಲಾಗಿತ್ತಾ?

ಡಿಕೆ ಸುರೇಶ್: ಕುಮಾರಸ್ವಾಮಿಗೆ ಏನೇನು ಮಾಹಿತಿ ಇರುತ್ತದೋ ನಂಗೆ ಗೊತ್ತಿಲ್ಲ. ಇಂಟರ್ನ್ಯಾನಲ್ ಏಜೆನ್ಸಿ ಇಟ್ಕೊಂಡಿರ್ತಾರೆ ಅವರಿಗೆ ಮಾಹಿತಿ ಇರುತ್ತದೆ. ಇಷ್ಯೂನ ಡೈವರ್ಟ್ ಮಾಡೋಕೆ ಬೇರೆಯವರನ್ನ ಡೈವರ್ಟ್ ಮಾಡ್ತಿರ್ತಾರೆ.

ಪ್ರಲ್ಹಾದ್ ಜೋಷಿ: ನನ್ನ ನೇರವಾದ ಆರೋಪ ಎಂದರೆ ಸಿದ್ದರಾಮಯ್ಯರೇ ಪ್ರಜ್ವಲ್​ ರೇವಣ್ಣ ಅವರನ್ನು ವಿದೇಶಕ್ಕೆ ಕಳುಹಿಸಿದ್ದು. ಇದರಲ್ಲಿ ಯಾವ ಅನುಮಾನವೂ ಇಲ್ಲ. ಈಗ ಡ್ರಾಮಾ ಆಡೋಕೆ ಪ್ರಧಾನಿಗೆ ಪತ್ರ ಬರೀತಾರೆ. ಎಫ್​ಐಆರ್ ಆಗಿಲ್ಲ ಮತ್ತೊಂದು ಆಗಿಲ್ಲ, ಕೇಂದ್ರ ಸರ್ಕಾರ ಏನು ಮಾಡೋಕೆ ಆಗುತ್ತೆ?.

ಸಿದ್ದರಾಮಯ್ಯ: ವಿದೇಶಕ್ಕೆ ಹೋಗೋಕೆ ವೀಸಾ ಕೊಡೋದು ಯಾರು? ಇವರಿಗೆ ಗೊತ್ತಿಲ್ಲದೆ ಹೋಗೋಕೆ ಆಗುತ್ತಾ? ದೇವೇಗೌಡರೇ ಪ್ಲಾನ್ ಮಾಡಿ ಕಳುಹಿಸಿರೋದು.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪ್ರಕರಣ: ಪೆನ್ ಡ್ರೈವ್​ಗಳನ್ನು ಡಿಕೆ ಶಿವಕುಮಾರ್ 2 ತಿಂಗಳು ತಮ್ಮ ಬಳಿ ಇಟ್ಟುಕೊಂಡಿದ್ದು ಯಾಕೆ? ಬಿವೈ ವಿಜಯೇಂದ್ರ

ಜಿಟಿ ದೇವೇಗೌಡ: ಎಂಪಿ ಆದವರಿಗೆ ರೆಡ್ ಪಾಸ್​ಪೋರ್ಟ್ ಕೊಡಲಾಗುತ್ತೆ. ಜರ್ಮನಿ ಮೊದಲಾದ ದೇಶಗಳಿಗೆ ಇವರು ಹೋಗೋಕೆ ವೀಸಾನೆ ಬೇಕಿಲ್ಲ.

ಆರ್.ಬಿ. ತಿಮ್ಮಾಪುರ: ಈ ಪ್ರಜ್ವಲ್ ರೇವಣ್ಣ ಕೃಷ್ಣ ದಾಖಲೆಯನ್ನು ಮುರೀತಾನೆ ಅನ್ಸುತ್ತೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published on: May 02, 2024 05:36 PM