ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ಬಿಡುಗಡೆಗೆ ಸಜ್ಜಾಗಿರುವ ‘45’ ಚಿತ್ರದ ಕಾರ್ಯಕ್ರಮದಲ್ಲಿ ಪ್ರಮೋದ್ ಶೆಟ್ಟಿ ಅವರು ಶೆಟ್ಟಿ ಗ್ಯಾಂಗ್ ಬಿರುಕಿನ ಬಗ್ಗೆ ಮೌನ ಮುರಿದರು. ‘ಶಿವಣ್ಣ, ಉಪೇಂದ್ರ ಅವರ ಬಗ್ಗೆ ಮಾತನಾಡಿದ ಬಳಿಕ ನಾನು ರಾಜ್ ಬಿ. ಶೆಟ್ಟಿ ಬಗ್ಗೆ ಮಾತನಾಡಲೇಬೇಕು’ ಎನ್ನುವ ಮೂಲಕ ಅವರು ಮಾತು ಶುರು ಮಾಡಿದರು. ವಿಡಿಯೋ ನೋಡಿ..
ಕನ್ನಡ ಚಿತ್ರರಂಗದಲ್ಲಿ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಾಜ್ ಬಿ. ಶೆಟ್ಟಿ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಈ ಕಲಾವಿದರು ಜೊತೆಜೊತೆಯಾಗಿ ಸಿನಿಮಾ ಕೆಲಸಗಳನ್ನು ಮಾಡುತ್ತಿದ್ದಾರೆ. ಆ ಕಾರಣದಿಂದ ಅಭಿಮಾನಿಗಳು ಇವರನ್ನು ಶೆಟ್ಟಿ ಗ್ಯಾಂಗ್ (Shetty Gang) ಎಂದು ಕರೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಒಂದು ವದಂತಿ ಹಬ್ಬಿತ್ತು. ಶೆಟ್ಟಿ ಗ್ಯಾಂಗ್ನಲ್ಲಿ ಬಿರುಕು ಮೂಡಿದೆ ಎಂಬ ಅನುಮಾನ ವ್ಯಕ್ತವಾಗಿತ್ತು. ಆ ಬಗ್ಗೆ ನಟ ಪ್ರಮೋದ್ (Pramod Shetty) ಅವರು ಮಾತನಾಡಿದ್ದಾರೆ. ‘45’ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಅವರು ಈ ಕುರಿತು ಮೌನ ಮುರಿದರು. ‘ಶಿವಣ್ಣ, ಉಪೇಂದ್ರ ಅವರ ಬಗ್ಗೆ ಮಾತನಾಡಿದ ಬಳಿಕ ನಾನು ರಾಜ್ ಬಿ. ಶೆಟ್ಟಿ ಬಗ್ಗೆ ಮಾತನಾಡಲೇಬೇಕು. ಮೊನ್ನೆ ನಾನು ರಾಜ್ ಶೆಟ್ಟಿ (Raj B Shetty) ಬಗ್ಗೆ ಜಾಸ್ತಿ ಮಾತನಾಡಿರಲಿಲ್ಲ. ನನ್ನ ಫ್ರೆಂಡ್ ಆದ್ದರಿಂದ ಜಾಸ್ತಿ ಮಾತಾಡೋದು ಬೇಡ ಅಂತ ಸುಮ್ಮನಾಗಿದ್ದೆ. ಆಮೇಲೆ ಮಾಧ್ಯಮಗಳಲ್ಲಿ ನೋಡಿದಾಗ ಗೊತ್ತಾಯಿತು ಇದು ಸಿಕ್ಕಾಪಟ್ಟೆ ಬಿರುಕು ಆಗಿದೆ ಅಂತ. ಇಷ್ಟೊಂದು ಬಿರುಕು ಯಾವಾಗ ಬಂತು? ಹೌದಾ ಅಂತ ತುಂಬಾ ಜನ ನನಗೆ ಫೋನ್ ಮಾಡಿ ಕೇಳಿದರು. ಹೌದು ಏನೀಗ ಅಂತ ನಾನು ಹೇಳಿದೆ. ನಿಮಗೆ ಯಾಕೆ ಬಿಟ್ಟಾಕಿ. ನಾವು ಆರಾಮಾಗಿ ಇದ್ದೇವೆ. ನೀವು ಯಾಕೆ ಜಗಳ ಮಾಡಿಕೊಳ್ಳುತ್ತಿದ್ದೀರಿ ಅಂತ ಕೇಳಿದೆ’ ಎಂದಿದ್ದಾರೆ ಪ್ರಮೋದ್ ಶೆಟ್ಟಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
