TV9 Kannada Digital Live: ಪಿಎಸ್ಐ ನೇಮಕ ಅಕ್ರಮ ಪ್ರಕರಣದಲ್ಲಿ ಕಾಂಗ್ರೆಸ್ ಹಿಟ್ ಆ್ಯಂಡ್ ರನ್ -ಇಂದಿನ ಟಿವಿ9 ಡಿಜಿಟಲ್ ಲೈವ್ ನಲ್ಲಿ ಚರ್ಚೆ
PSI Recruitment Scam: ಪಿಎಸ್ಐ ನೇಮಕಾತಿ ಹಗರಣದಲ್ಲಿ ಯಾವ ಸಾಕ್ಷ್ಯಾಧಾರಗಳನ್ನು ನೀಡದೆ, ಕಾಂಗ್ರೆಸ್ ಪಕ್ಷ ಹಿಟ್ ಅಂಡ್ ರನ್ ಕೇಸ್ ಮಾಡುತ್ತಿದೆಯೇ? ಮೂರನೇ ಬಾರಿ ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಅವರಿಗೆ ನೋಟಿಸ್ ನೀಡಲಾಗಿದೆ. ರಾಜಕೀಯ ಲಾಭ ಪಡೆಯುವ ಹುನ್ನಾರವೇ? ಅಥವಾ ಇಡೀ ಸಿಸ್ಟಮನ್ನು ಸರಿಪಡಿಸುವ ಕಾಳಜಿ ಕಾಂಗ್ರೆಸ್ಗೆ ಇದೆಯೇ? ಇಂದಿನ ಡಿಜಿಟಲ್ ಲೈವ್ ಚರ್ಚೆ ಮಧ್ಯಾಹ್ನ 3.30 ಕ್ಕೆ
ಬೆಂಗಳೂರು: ಪೊಲೀಸ್ ಸಬ್ಇನ್ಸ್ಟೆಕ್ಟರ್ಗಳ ಅಕ್ರಮ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಅವರಿಗೆ ಸಿಐಡಿ ಅಧಿಕಾರಿಗಳು ಮತ್ತೊಮ್ಮೆ ನೊಟೀಸ್ ನೀಡಿದ್ದು, ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದ್ದಾರೆ. 545 ಪಿಎಸ್‌ಐಗಳ ನೇಮಕಾತಿ ಅಕ್ರಮ ಪ್ರಕರಣದ ತನಿಖೆಗೆ ಸಹಕರಿಸಬೇಕು ಎಂದು ಅಧಿಕಾರಿಗಳು ಕೋರಿದ್ದಾರೆ. ಈ ಹಿಂದೆ ಸಿಐಡಿ ನೊಟೀಸ್ ಕೊಟ್ಟಿದ್ದರೂ ಪ್ರಿಯಾಂಕ್ ಖರ್ಗೆ ವಿಚಾರಣೆಗೆ ಹಾಜರಾಗಿರಲಿಲ್ಲ. ನೊಟೀಸ್ಗೆ ಲಿಖಿತ ಉತ್ತರ ಕೊಟ್ಟಿದ್ದರು. ಕಳೆದ ಬಾರಿ ನೊಟೀಸ್ ನೀಡಿದ್ದಾಗ ಕೆಪಿಸಿಸಿ ಸೂಚನೆ ಮೇರೆಗೆ ಪ್ರಿಯಾಂಕ್ ವಿಚಾರಣೆಯಿಂದ ದೂರ ಉಳಿದಿದ್ದರು. ಇದೀಗ ಮತ್ತೊಮ್ಮೆ ನೊಟೀಸ್ ನೀಡಿರುವ ಹಿನ್ನೆಲೆಯಲ್ಲಿ ಖರ್ಗೆ ವಿಚಾರಣೆಗೆ ಹಾಜರಾಗುವ ಬಗ್ಗೆ ಪ್ರಶ್ನೆಗಳು ಮೂಡಿವೆ. ಸಿಐಡಿ ಈಗಾಗಲೇ ಪ್ರಾಥಮಿಕ ತನಿಖೆ ಪೂರ್ಣಗೊಳಿಸಿದ್ದು, ಎರಡನೇ ಹಂತದ ತನಿಖೆ ಆರಂಭವಾಗಿದೆ. ತನಿಖೆ ಚುರುಕಾಗಿ ನಡೆಯುತ್ತಿದ್ದು, ಹಲವು ಅಭ್ಯರ್ಥಿಗಳನ್ನು ಈಗಾಗಲೇ ಬಂಧಿಸಲಾಗಿದೆ.
ಹಾಗಾದರೆ, ಪಿಎಸ್ಐ ನೇಮಕಾತಿ ಹಗರಣದಲ್ಲಿ (PSI Recruitment Scam) ಯಾವ ಸಾಕ್ಷ್ಯಾಧಾರಗಳನ್ನು ನೀಡದೆ, ಕಾಂಗ್ರೆಸ್ ಪಕ್ಷ ಹಿಟ್ ಅಂಡ್ ರನ್ ಕೇಸ್ ಮಾಡುತ್ತಿದೆಯೇ? ಮೂರನೇ ಬಾರಿ ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಅವರಿಗೆ (Congress MLA Priyank Kharge) ನೋಟಿಸ್ ನೀಡಲಾಗಿದೆ. ರಾಜಕೀಯ ಲಾಭ ಪಡೆಯುವ ಹುನ್ನಾರವೇ? ಅಥವಾ ಇಡೀ ಸಿಸ್ಟಮನ್ನು ಸರಿಪಡಿಸುವ ಕಾಳಜಿ ಕಾಂಗ್ರೆಸ್ಗೆ ಇದೆಯೇ? ಈ ವಿಷಯವನ್ನಿಟ್ಟುಕೊಂಡು ಆ್ಯಂಕರ್ ಚಂದ್ರಮೋಹನ್ ಇಂದಿನ ಟಿವಿ 9 ಕನ್ನಡ ಡಿಜಿಟಲ್ ಲೈವ್ ಚರ್ಚೆಯನ್ನು ಮಧ್ಯಾಹ್ನ 3.30 ಕ್ಕೆ ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತ (TV 9 Kannada Digital Live)
ಇದನ್ನೂ ಓದಿ
ವಾರ ಕಳೆದರೂ ಪತ್ತೆಯಾಗದ ಆ್ಯಸಿಡ್ ದಾಳಿ ಕೋರ; ಕಣ್ಣೀರು ಹಾಕುತ್ತ ನಾಗೇಶ್ ಮೇಲೆ ಹಿಡಿಶಾಪ ಹಾಕಿದ ನೊಂದ ಕುಟುಂಬ
Rashid Khan: ರಶೀದ್ ಖಾನ್ ಫ್ಲೈಯಿಂಗ್ ಕಿಸ್ ಕೊಟ್ಟಿದ್ದು ಯಾರಿಗೆ? ವೈರಲ್ ಆಯ್ತು ವಿಡಿಯೋ