‘ಫಸ್ಟ್​ ನೈಟ್​ನಲ್ಲಿ ಎಲ್ಲರೂ ಏನ್​ ಮಾಡ್ತಾರೋ ನಾವು ಅದನ್ನೇ ಮಾಡಿದ್ದು’; ರಚಿತಾ ರಾಮ್​

| Updated By: ರಾಜೇಶ್ ದುಗ್ಗುಮನೆ

Updated on: Nov 10, 2021 | 2:11 PM

ರಚಿತಾ ರಾಮ್​ ಅವರು ಅಜಯ್​ ರಾವ್​ ಜತೆಗೆ ‘ಲವ್​ ಯೂ ರಚ್ಚು’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಆರಂಭದಲ್ಲಿಯೇ ಸಾಕಷ್ಟು ಸುದ್ದಿ ಮಾಡಿತ್ತು.

ನಟಿ ರಚಿತಾ ರಾಮ್ ಕೈಯಲ್ಲಿ ಹಲವು ಸಿನಿಮಾಗಳಿವೆ. ​ಅವರು ‘ಲವ್​ ಯೂ ರಚ್ಚು’ ಚಿತ್ರಕ್ಕಾಗಿ ಹಾಟ್​ ಅವತಾರ ತಾಳಿದ್ದಾರೆ. ‘ಮುದ್ದು ನೀನು..’ ವಿಡಿಯೋ ಸಾಂಗ್​ ರಿಲೀಸ್​ ಆಗಿದ್ದು, ಲಕ್ಷಾಂತರ ವೀಕ್ಷಣೆ ಕಂಡಿದೆ. ಅವರ ಹಾಟ್​ ಅವತಾರ ನೋಡಿ ಫ್ಯಾನ್ಸ್​ ಫಿದಾ ಆಗಿದ್ದಾರೆ. ಅಜಯ್​ ರಾವ್​ ಜತೆ ತುಂಬಾನೇ ಇಂಟಿಮೇಟ್​ ಆಗಿ ಅವರ ಕಾಂಬಿನೇಷನ್​ ಮೂಡಿ ಬಂದಿದೆ. ಈ ವಿಡಿಯೋ ಸಾಂಗ್​ ಸಿನಿಮಾಗೆ ಒಳ್ಳೆಯ ಮೈಲೇಜ್​ ನೀಡುವ ಸಾಧ್ಯತೆ ಇದೆ.

‘ಐ ಲವ್​ ಯೂ’ ಸಿನಿಮಾದಲ್ಲಿ ರಚಿತಾ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದರು. ಮತ್ತೆ ಈ ರೀತಿಯ ದೃಶ್ಯ ಮಾಡುವುದಿಲ್ಲ ಎಂದು ಅವರು ಹೇಳಿದ್ದರು. ‘ಮುದ್ದು ನೀನು.. ವಿಡಿಯೋ ಸಾಂಗ್​ ರಿಲೀಸ್​ ಬಗ್ಗೆ ಕರೆದ ಪ್ರೆಸ್​ಮೀಟ್​ನಲ್ಲಿ ರಚಿತಾ ರಾಮ್​ಗೆ ಈ ಬಗ್ಗೆ ಪ್ರಶ್ನೆ ಎದುರಾಯಿತು. ಆಗ ಅವರು ನೀಡಿದ ಉತ್ತರ ಹೇಗಿತ್ತು ಎನ್ನುವುದಕ್ಕೆ ವಿಡಿಯೋದಲ್ಲಿದೆ ಉತ್ತರ.

ರಚಿತಾ ರಾಮ್​ ಅವರು ಅಜಯ್​ ರಾವ್​ ಜತೆಗೆ ‘ಲವ್​ ಯೂ ರಚ್ಚು’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಆರಂಭದಲ್ಲಿಯೇ ಸಾಕಷ್ಟು ಸುದ್ದಿ ಮಾಡಿತ್ತು. ಫೈಟರ್​ ವಿವೇಕ್​ ಅವರು ಶೂಟಿಂಗ್​ ವೇಳೆ ಹೈ ವೋಲ್ಟೇಜ್​ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದರು. ಈ ಪ್ರಕರಣದಿಂದ ಸಿನಿಮಾ ತಂಡದ ಕೆಲವರು ಅರೆಸ್ಟ್​ ಕೂಡ ಆಗಿದ್ದರು. ಈ ಘಟನೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.

ಇದನ್ನೂ ಓದಿ: ಮತ್ತೆ ಬೋಲ್ಡ್​ ಅವತಾರ ತಾಳಿದ ರಚಿತಾ ರಾಮ್​; ಪಡ್ಡೆ ಹುಡುಗರ ಮನಸ್ಸು ಕದ್ದ ರಚ್ಚು

‘ಅಪ್ಪು ಸರ್​ ವಿಚಾರದಲ್ಲಿ ಮರಣ ಎಂಬ ಪದ ಬಳಸೋಕೆ ನಾನು ಇಷ್ಟಪಡಲ್ಲ’: ರಚಿತಾ ರಾಮ್​​