ಚೊಚ್ಚಲ ಪಂದ್ಯದಲ್ಲೇ 10 ವಿಕೆಟ್ ಕಬಳಿಸಿದ ರಾಹುಲ್ ಚಹರ್
Hampshire vs Surrey: ಹ್ಯಾಂಪ್ಶೈರ್ ಬ್ಯಾಟರ್ಗಳ ಮುಂದೆ ಸ್ಪಿನ್ ಮೋಡಿ ಮಾಡಿದ ಚಹರ್ 24 ಓವರ್ಗಳಲ್ಲಿ ಕೇವಲ 54 ರನ್ ನೀಡಿ 8 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಸರ್ರೆ ತಂಡಕ್ಕೆ 20 ರನ್ಗಳ ರೋಚಕ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಚೊಚ್ಚಲ ಪಂದ್ಯದಲ್ಲೇ 10 ವಿಕೆಟ್ ಕಬಳಿಸುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸಹ ರಾಹುಲ್ ಚಹರ್ ತಮ್ಮದಾಗಿಸಿಕೊಂಡಿದ್ದಾರೆ.
ಭಾರತದ ಪರ ಸ್ಪಿನ್ನರ್ ರಾಹುಲ್ ಕೌಂಟಿ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದಾರೆ. ಸರ್ರೆ ತಂಡದ ಪರ ಕಣಕ್ಕಿಳಿದ ಚೊಚ್ಚಲ ಪಂದ್ಯದಲ್ಲೇ 10 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಸೌತಾಂಪಷ್ಟನ್ನ ರೋಸ್ ಬೌಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಸರ್ರೆ ಹಾಗೂ ಹ್ಯಾಂಪ್ಶೈರ್ ತಂಡಗಳು ಮುಖಾಮುಖಿಯಾಗಿದ್ದವು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸರ್ರೆ ತಂಡವು ಮೊದಲ ಇನಿಂಗ್ಸ್ನಲ್ಲಿ ಕೇವಲ 147 ರನ್ಗಳಿಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಹ್ಯಾಂಪ್ಶೈರ್ ತಂಡವು 248 ರನ್ಗಳಿಸಿ ಆಲೌಟ್ ಆಗಿದೆ. ಈ ಇನಿಂಗ್ಸ್ನಲ್ಲಿ 20.4 ಓವರ್ಗಳನ್ನು ಎಸೆದ ರಾಹುಲ್ ಚಹರ್ 2 ವಿಕೆಟ್ ಕಬಳಿಸಿ ಮಿಂಚಿದ್ದರು.
ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಸರ್ರೆ ತಂಡ ಕಲೆಹಾಕಿದ್ದು ಬರೋಬ್ಬರಿ 281 ರನ್ಗಳು. ಅದರಂತೆ 181 ರನ್ಗಳ ಗುರಿ ಪಡೆದ ಹ್ಯಾಂಪ್ಶೈರ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ರಾಹುಲ್ ಚಹರ್ ಯಶಸ್ವಿಯಾಗಿದ್ದಾರೆ.
ಹ್ಯಾಂಪ್ಶೈರ್ ಬ್ಯಾಟರ್ಗಳ ಮುಂದೆ ಸ್ಪಿನ್ ಮೋಡಿ ಮಾಡಿದ ಚಹರ್ 24 ಓವರ್ಗಳಲ್ಲಿ ಕೇವಲ 54 ರನ್ ನೀಡಿ 8 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಸರ್ರೆ ತಂಡಕ್ಕೆ 20 ರನ್ಗಳ ರೋಚಕ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಚೊಚ್ಚಲ ಪಂದ್ಯದಲ್ಲೇ 10 ವಿಕೆಟ್ ಕಬಳಿಸುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸಹ ರಾಹುಲ್ ಚಹರ್ ತಮ್ಮದಾಗಿಸಿಕೊಂಡಿದ್ದಾರೆ.

