ಪೆಟ್ರೋಲ್ ಬಂಕ್​ನಲ್ಲಿ ಡೀಸೆಲ್​ನಿಂದ ಗಾಡಿ ತೊಳೆದ ಯುವಕ!

Updated on: Apr 04, 2026 | 10:44 PM

ಯುವಕನೊಬ್ಬ ಪೆಟ್ರೋಲ್ ಪಂಪ್​ನಲ್ಲಿ ಡೀಸೆಲ್​ನಿಂದ ತನ್ನ ಸ್ಕಾರ್ಪಿಯೋವನ್ನು ತೊಳೆದಿರುವ ಘಟನೆ ನಡೆದಿದೆ. ಈ ವೈರಲ್ ವಿಡಿಯೋಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅನೇಕ ಜನರು ಇದನ್ನು ಅಪಾಯಕಾರಿ ಎಂದು ಕರೆದರೆ ಇನ್ನು ಕೆಲವರು ಇದನ್ನು ಪ್ರಸ್ತುತ ಪರಿಸ್ಥಿತಿಯ ಗಂಭೀರತೆಯ ಅಣಕ ಎಂದು ಕರೆದಿದ್ದಾರೆ. ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಈ ಘಟನೆ ಬೆಳಕಿಗೆ ಬಂದ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಜೈಪುರ, ಏಪ್ರಿಲ್ 4: ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ಯುವಕನೊಬ್ಬ ಅಪಾಯಕಾರಿ ಸಾಹಸ ಮಾಡಿದ್ದಾನೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಲು ಯುವಕನೊಬ್ಬ ಪೆಟ್ರೋಲ್ ಪಂಪ್‌ನಲ್ಲಿ ತನ್ನ ಸ್ಕಾರ್ಪಿಯೋಗೆ ಡೀಸೆಲ್ ತುಂಬಿಸಿದ ನಂತರ ಡೀಸೆಲ್​ನಿಂದಲೇ ತನ್ನ ಗಾಡಿಯನ್ನು ತೊಳೆದಿರುವ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಆಗಿದ್ದು, ಈ ಕೃತ್ಯ ಎಸಗಿದ ಆತನನ್ನು ಬಂಧಿಸಲು ಒತ್ತಾಯಿಸಲಾಗಿತ್ತು. ಆತನನ್ನು ಪೊಲೀಸರು ಬಂಧಿಸಿದ್ದು, ವಿಡಿಯೋ ಮಾಡಿದವನನ್ನು ಕೂಡ ವಶಕ್ಕೆ ಪಡೆಯಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More