AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೈ ಸನ್ನೆಯೊಂದಿಗೆ ​ವಿಶ್ಲೇಷಣೆ... ಬಿದ್ದು ಬಿದ್ದು ನಕ್ಕ RCB ಆಟಗಾರರು

ಕೈ ಸನ್ನೆಯೊಂದಿಗೆ ​ವಿಶ್ಲೇಷಣೆ… ಬಿದ್ದು ಬಿದ್ದು ನಕ್ಕ RCB ಆಟಗಾರರು

ಝಾಹಿರ್ ಯೂಸುಫ್
|

Updated on: Apr 07, 2026 | 2:20 PM

Share

IPL 2026 RCB vs CSK: ಸಿಎಸ್​ಕೆ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 250 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 19.4 ಓವರ್​ಗಳಲ್ಲಿ 207 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಆರ್​ಸಿಬಿ ತಂಡ 43 ರನ್​ಗಳ ಜಯ ಸಾಧಿಸಿದೆ.

ಇಂಡಿಯನ್ ಪ್ರೀಮಿಯರ್ ಲೀಗ್​ನ ಹೈವೋಲ್ಟೇಜ್ ಮ್ಯಾಚ್​​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯಭೇರಿ ಬಾರಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ 20 ಓವರ್​​ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 250 ರನ್​​​ಗಳು. ಈ ಗುರಿಯನ್ನು ಬೆನ್ನತ್ತಿದ ಸಿಎಸ್​​ಕೆ ಕೇವಲ 207 ರನ್​​ಗಳಿಸಿ 43 ರನ್​​ಗಳಿಂದ ಸೋಲೊಪ್ಪಿಕೊಂಡಿತು.

ಈ ಗೆಲುವಿನ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿ ನಡೆದ ಆಟಗಾರರ ನಡುವಣ ಪ್ರಶಂಸೀಯ ಮಾತುಗಳ ನಡುವೆ ರೊಮಾರಿಯೊ ಶೆಫರ್ಡ್​ ಟಿಮ್ ಡೇವಿಡ್ ಅವರ ಇನಿಂಗ್ಸ್​​ ಅನ್ನು ವಿವರಿಸಿರುವುದು ಇದೀಗ ಭಾರೀ ವೈರಲ್ ಆಗಿದೆ.

ಈ ಪಂದ್ಯದಲ್ಲಿ ಟಿಮ್ ಡೇವಿಡ್ ಅವರು ಎದುರಿಸಿದ ಕೇವಲ 25 ಎಸೆತಗಳಲ್ಲಿ ಅಜೇಯ 70 ರನ್ ಚಚ್ಚಿ ಸಿಎಸ್‌ಕೆ ಬೌಲರ್‌ಗಳನ್ನು ಕಂಗೆಡಿಸಿದ್ದರು. ಈ ಸ್ಫೋಟಕ ಬ್ಯಾಟಿಂಗ್ ಅನ್ನು ಪಂದ್ಯದ ನಂತರ ಡ್ರೆಸ್ಸಿಂಗ್ ರೂಮ್‌ನಲ್ಲಿ ವಿಶ್ಲೇಷಿಸಿದ ಸಹ ಆಟಗಾರ ರೊಮಾರಿಯೋ ಶೆಫರ್ಡ್ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದರು.

ಟಿಮ್ ಡೇವಿಡ್ ಅವರ ಬ್ಯಾಟಿಂಗ್ ಶೈಲಿಯನ್ನು ಅಣಕಿಸಿದ ಶೆಫರ್ಡ್, “ಟಿಮ್, ನೀನು ಮೊದಲು ಐದು ಎಸೆತಗಳನ್ನು ತುಂಬಾ ಶಾಂತವಾಗಿ ಎದುರಿಸಿದ್ದೀಯಾ. ನಂತರ ಏನಾಗುತ್ತೆ ಅಂದ್ರೆ…” ಎಂದು ಹೇಳುತ್ತಾ, ಕೈ ಸನ್ನೆ ಮಾಡಿದ್ದಾರೆ.

ಇತ್ತ ರೊಮಾರಿಯೋ ಶೆಫರ್ಡ್ ಅವರ ಕೈ ಸನ್ನೆಯ ವಿಶ್ಲೇಷಣೆ ಕಂಡು ವಿರಾಟ್ ಕೊಹ್ಲಿ ಸೇರಿದಂತೆ ಇಡೀ ತಂಡವೇ ಜೋರಾಗಿ ನಗಲಾರಂಭಿಸಿದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಶೆಫರ್ಡ್ ಅವರ ಕೈ ಸನ್ನೆಯೇ ಪ್ರಮುಖ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ.

 

Follow Us