‘ರಿಯಲ್ ಸ್ಟಾರ್’ ಉಪೇಂದ್ರ ಹುಟ್ಟುಹಬ್ಬದ ಸಂಭ್ರಮ; ಹೊಸ ಸಿನಿಮಾ ಪೋಸ್ಟರ್ ಬಿಡುಗಡೆ

Updated on: Sep 18, 2026 | 4:15 PM

ಉಪೇಂದ್ರ ಅವರು ಇಂದು (ಸೆ.18) ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು ಅವರ ಮನೆ ಬಳಿ ಬಂದು ಜನ್ಮದಿನಕ್ಕೆ ವಿಶ್ ಮಾಡಿದ್ದಾರೆ. ನೋಟಿನ ಹಾರವನ್ನು ಹಾಕಲಾಗಿದೆ. ಬಗೆಬಗೆಯ ಕೇಕ್ ತಂದು ಕತ್ತರಿಸಲಾಗಿದೆ. ಇದೇ ವೇಳೆ, ಉಪೇಂದ್ರ ನಟಿಸಲಿರುವ ಹೊಸ ಸಿನಿಮಾದ ಪೋಸ್ಟರ್ ಅನಾವರಣ ಮಾಡಲಾಗಿದೆ.

ನಟ ಉಪೇಂದ್ರ ಅವರು ಇಂದು (ಸೆಪ್ಟೆಂಬರ್ 18) ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು ಅವರ ಮನೆ ಬಳಿ ಬಂದು ಜನ್ಮದಿನಕ್ಕೆ ವಿಶ್ ಮಾಡಿದ್ದಾರೆ. ನೋಟಿನ ಹಾರವನ್ನು ಹಾಕಲಾಗಿದೆ. ಬಗೆಬಗೆಯ ಕೇಕ್ ತಂದು ಕತ್ತರಿಸಲಾಗಿದೆ. ಇದೇ ವೇಳೆ, ಉಪೇಂದ್ರ ನಟಿಸಲಿರುವ ಹೊಸ ಸಿನಿಮಾದ ಪೋಸ್ಟರ್ ಅನಾವರಣ ಮಾಡಲಾಗಿದೆ. ‘ನೆಕ್ಸ್ಟ್ ಲೆವೆಲ್’ ಎಂಬುದು ಈ ಚಿತ್ರದ ಶೀರ್ಷಿಕೆ. ಅರವಿಂದ್ ಕೌಶಿಕ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ತರುಣ್ ಶಿವಪ್ಪ ಮತ್ತು ಮಾನಸಾ ತರುಣ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಅಭಿಮಾನಿಗಳ ಸಮ್ಮುಖದಲ್ಲಿ ಈ ಚಿತ್ರದ ಪೋಸ್ಟರ್ ಬಿಡುಗಡೆ ಆಗಿದೆ. ‘ಈ ದಿನವನ್ನು ನಾನು ಜನ್ಮದಿನ ಅಂತ ಕರೆಯಲ್ಲ. ಫ್ಯಾನ್ಸ್ ಡೇ ಎನ್ನುತ್ತೇನೆ. ಚಿಕ್ಕ ವಯಸ್ಸಿನಲ್ಲಿ ನಾವು ಬರ್ತ್​ಡೇ ಮಾಡಿಕೊಂಡವರೇ ಅಲ್ಲ. ಚಿತ್ರರಂಗಕ್ಕೆ ಬಂದ ಮೇಲೆ ಈ ದಿನವನ್ನು ಜ್ಞಾಪಿಸಿದ್ದೇ ಅಭಿಮಾನಿಗಳು’ ಎಂದು ಉಪೇಂದ್ರ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Sep 18, 2026 04:11 PM
Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More