ರೀಯಲ್ಮಿ ಜಿಟಿ ಮಾಸ್ಟರ್​ ಎಡಿಷನ್ ಪೋನ್​​ಗಳಿಗೆ ಭಾರಿ ಬೇಡಿಕೆ, ಇ-ಮಾರ್ಕೆಟ್​​ಗಳಲ್ಲಿ ಆಕರ್ಷಕ ಆಫರ್!

ರೀಯಲ್ಮಿ ಜಿಟಿ ಮಾಸ್ಟರ್​ ಎಡಿಷನ್ ಪೋನ್​​ಗಳಿಗೆ ಭಾರಿ ಬೇಡಿಕೆ, ಇ-ಮಾರ್ಕೆಟ್​​ಗಳಲ್ಲಿ ಆಕರ್ಷಕ ಆಫರ್!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 11, 2021 | 6:23 PM

ಜಿಟಿ ಮಾಸ್ಟರ್​ ಎಡಿಶನ್ ಫೋನ್​​ಗಳು ಭಾರಿ ಬೇಡಿಕೆಯಲ್ಲಿರುವುದಕ್ಕೆ ಎರಡು ಕಾರಣಗಳನ್ನು ಹೇಳಲಾಗುತ್ತಿದೆ. ಮೊದಲನೇಯದ್ದು ಅದರ ಗುಣಮಟ್ಟ ಮತ್ತು ಎರಡನೇಯದ್ದು ಅದರ ಅಪೂರ್ವ ಸೂಟ್​ ಕೇಸ್​​ನಂಥ ವಿನ್ಯಾಸ.

ರೀಯಲ್ಮಿ ಫೋನ್​​ಗಳನ್ನು ಇಷ್ಟಪಡುವವರಿಗೆ ಒಂದು ಸಂತೋಷದ ಸಂಗತಿ. ಕೊವಿಡ್-19 ಪಿಡುಗಿನ ಹೊರತಾಗಿಯೂ ಸೆಲ್​ ಪೋನ್​ಗಳ ಮಾರುಕಟ್ಟೆ ಲವಲವಿಕೆಯಿಂದ ಕೂಡಿದೆ ಮಾರಾಯ್ರೇ. ಅದರಲ್ಲೂ ಹಬ್ಬಗಳ ಈ ಸೀಸನ್​​ನಲ್ಲಿ ಮಧ್ಯಮ ರೇಂಜಿನ ಸ್ಮಾರ್ಟ್​​ ಫೋನ್​​ಗಳಿಗೆ ಎಲ್ಲಿಲ್ಲದ ಬೇಡಿಕೆ. ಎಲ್ಲ ಕಂಪನಿಗಳು ಈ ರೇಂಜಿನ ಫೋನ್​​ಗಳನ್ನು ಹೊಂದಿ​ದ್ದು ಪ್ರೈಸ್​ ವಾರ್​ ಕೂಡ ಜಾರಿಯಲ್ಲಿದೆ. ನಿಮಗೆ ಗೊತ್ತಿದೆ, ರೀಯಲ್ಮಿ ಸಂಸ್ಥೆಯು ಜಿಟಿ ಮಾಸ್ಟರ್​ ಎಡಿಶನ್ ಮಾರ್ಕೆಟ್​​ ಗೆ ರಿಲೀಸ್ ಮಾಡಿದಾಗ ನಾವು ಅದರ ಬಗ್ಗೆ ಚರ್ಚೆ ಮಾಡಿದ್ದೆವು. ಈಗ ಮತ್ತೊಮ್ಮೆ ಅದರ ಬಗ್ಗೆ ಮಾತಾಡುವಂಥ ಪ್ರಮೇಯ ಒದಗಿ ಬಂದಿದೆ. ವಿಷಯ ಏನು ಗೊತ್ತುಂಟಾ? ಮಧ್ಯಮ ರೇಂಜಿನ ಸ್ಮಾರ್ಟ್​​ ಫೋನ್​​ಗಳಲ್ಲಿ ಜಿಟಿ ಮಾಸ್ಟರ್​ ಎಡಿಶನ್ ಗೆ ಎಲ್ಲಿಲ್ಲದ ಬೇಡಿಕೆ. ಫುಲ್ ಡಿಮ್ಯಾಂಡ್​! ಈ ಫೋನ್​​​ಗಳು ಅದೇನೋ ಹೇಳ್ತಾರಲ್ಲ, ಹಾಟ್​ ಕೇಕ್ ರೀತಿ ಮಾರಾಟವಾಗುತ್ತಿವೆ.

ಜಿಟಿ ಮಾಸ್ಟರ್​ ಎಡಿಶನ್ ಫೋನ್​​ಗಳು ಭಾರಿ ಬೇಡಿಕೆಯಲ್ಲಿರುವುದಕ್ಕೆ ಎರಡು ಕಾರಣಗಳನ್ನು ಹೇಳಲಾಗುತ್ತಿದೆ. ಮೊದಲನೇಯದ್ದು ಅದರ ಗುಣಮಟ್ಟ ಮತ್ತು ಎರಡನೇಯದ್ದು ಅದರ ಅಪೂರ್ವ ಸೂಟ್​ ಕೇಸ್​​ನಂಥ ವಿನ್ಯಾಸ. ಎಕ್ಸ್ ಸಿರೀಸ್​​  ಸ್ಮಾರ್ಟ್‌ಫೋನ್‌ಗಳನ್ನು ಬದಲಿಸುವ ಉದ್ದೇಶದಿಂದ ಲಾಂಚ್​​ ಮಾಡಲಾಗಿರುವ, ಜಿಟಿ ಸರಣಿಯು ರೀಯಲ್ಮಿ ಸಂಸ್ಥೆಯ ಹೊಸ ಶ್ರೇಣಿಯಾಗಿದೆ. ಜಿಟಿ ಮಾಸ್ಟರ್ ಆವೃತ್ತಿ ಅತ್ಯುತ್ತಮ ಗುಣಮಟ್ಟದ ಪೋನ್​ ಎಂಬ ಹೆಗ್ಗಳಿಕೆ ಸಂಪಾದಿಸಿದೆ. ಉತ್ತಮ ಗುಣಮಟ್ಟದ 120 ಎಚ್​ಜೆಡ್​ ಸೂಪರ್ ಎಎಮ್​​ಒಎಲ್​​​ಇಡಿ (AMOLED) ಡಿಸ್‌ಪ್ಲೇ ಇದ್ದು ಗೇಮಿಂಗ್ ಮತ್ತು ಚಲನಚಿತ್ರಗಳನ್ನು ನೋಡಲು ಅದ್ಭುತವಾಗಿದೆ.

ಸ್ಟೀರಿಯೋ ಸ್ಪೀಕರ್‌ಗಳನ್ನು ನೀವು ಜಿಟಿ ಮಾಸ್ಟರ್​ ಎಡಿಶನ್ ನಲ್ಲಿ ಹುಡುಕುತ್ತೀರಾದರೆ ಅವು ನಿಮಗೆ ಸಿಗಲಾರವು. ಅದರೆ ನಿಮಗೆ 3.5 ಎಮ್​ ಎಮ್​​ ಹೆಡ್​ ಪೋನ್ ಜ್ಯಾಕ್​ ಖಂಡಿತ ಸಿಗುತ್ತದೆ. ಗೇಮಿಂಗ್ ಅನುಭವವನ್ನು ನೀಡುವುದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G ಪ್ರೊಸೆಸರ್, ಇದು 768G ಗಿಂತ ಯೋಗ್ಯವಾದ ಅಪ್‌ಗ್ರೇಡ್ ಆಗಿದೆ ಮತ್ತು ಮಿಡಿಯಾಟ್ರೆಕ್​​ ನ ಡೈಮೆನ್ಸಿಟಿ 1200 ಗೆ ಸಮನಾಗಿದೆ. ಕೆಮೆರಾ ಕಾರ್ಯಕ್ಷಮತೆ ಹಗಲು ಬೆಳಕಿನಲ್ಲಿ ಉತ್ತಮವಾಗಿದೆ ಆದರೆ ಕಡಿಮೆ ಬೆಳಕಿನಲ್ಲಿ ಮಾತ್ರ ನೈಟ್ ಮೋಡ್‌ನಲ್ಲಿ ಉಳಿತಾಯವಾಗುತ್ತದೆ. ಸ್ಲಿಮ್ ಮಿಡ್ ರೇಂಜ್ ಸ್ಮಾರ್ಟ್‌ಫೋನ್‌ಗೆ ಬ್ಯಾಟರಿ ಬಾಳಿಕೆ ತುಂಬಾ ಒಳ್ಳೆಯದು ಮತ್ತು ಚಾರ್ಜಿಂಗ್ ತುಂಬಾ ವೇಗವಾಗಿ ಆಗುತ್ತದೆ.  ಸುಮಾರು 35 ನಿಮಿಷಗಳಲ್ಲಿ ಶೂನ್ಯದಿಂದ ಶೇಕಡಾ 100 ರಷ್ಟು ತಲುಪಿಬಿಡುತ್ತದೆ.

ಇದನ್ನೂ ಓದಿ: ಅರಬ್​ ಶೇಖ್​ ಬಾಯಲ್ಲಿ ಎಸ್​.ಪಿ. ಬಾಲಸುಬ್ರಹ್ಮಣ್ಯಂ ಹಾಡು; ವೈರಲ್​ ಆಯ್ತು ವಿಡಿಯೋ