ತುಂಗಭಧ್ರಾ ನದಿಪಾತ್ರ ಸ್ವಚ್ಛಗೊಳಿಸುವ ಕೆಲಸ ಮುಂದುವರಿಸಿದ ಹರಿಹರದ ನಾಗರಿಕರು
ನದಿಪಾತ್ರದಲ್ಲಿ ಪೂಜೆಗೆಂದು ಬರುವ ಜನ ಪೂಜಾ ಸಾಮಗ್ರಿಗಳ ತ್ಯಾಜ್ಯವನ್ನು ಅಲ್ಲೇ ನಿಟ್ಟುಹೋಗುತ್ತಾರೆ. ಕೆಲವರು ಸ್ನಾನ ಮತ್ತು ಬಟ್ಟೆ ಒಗೆದುಕೊಳ್ಳಲೂ ಬರುತ್ತಾರೆ. ಒಂದು ವಾರದ ಅವಧಿಯಲ್ಲಿ ದೊಡ್ಡ ಪ್ರಮಾಣದ ತ್ಯಾಜ್ಯ ನದಿಪಾತ್ರದಲ್ಲಿ ಗುಡ್ಡೆಯಾಗುತ್ತಿದೆ. ಹರಿಹರದ ನಾಗರಿಕರು ಪ್ರತಿವಾರ ಕಸವನ್ನು ಸ್ಚಚ್ಛ ಮಾಡುತ್ತಿದ್ದಾರೆ.
ದಾವಣಗೆರೆ: ಜಿಲ್ಲಾಡಳಿತ ಮತ್ತು ಸ್ಥಳೀಯ ಆಡಳಿತ ತಮ್ಮ ಮನವಿಗಳಿಗೆ ಸ್ಪಂದಿಸಲಾರದು ಅನ್ನೋದನ್ನು ಮನಗಮಂಡಿರುವ ಹರಿಹರದ ಪ್ರಜ್ಞಾವಂತ ನಾಗರಿಕರು ತುಂಗಭಧ್ರ ನದಿ ದಡಭಾಗಗಳನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಹರಿಹರ ಪಟ್ಟಣದ ನಿವಾಸಿಗಳು ಪ್ರತಿವಾರ ತಮ್ಮೂರಿನ ಮೂಲಕ ಹಾದುಹೋಗುವ ನದಿಪಾತ್ರವನ್ನು ಪ್ರತಿವಾರ ಸ್ವಚ್ಛಗೊಳಿಸುವ ಪಣತೊಟ್ಟಿದ್ದಾರೆ. ಇಲ್ಲಿ ಗ್ರೂಪ್ ಫೋಟೋಗೆ ಪೋಸ್ ನೀಡುತ್ತಿರುವ ನಾಗರಿಕರ ತಂಡದ ಮುಖ್ಯಸ್ಥರು ಯಾರು ಅಂತ ಗೊತ್ತಿಲ್ಲ, ಆದರೆ ಇವರೆಲ್ಲ ಮಾಡುತ್ತಿರುವ ಕೆಲಸ ಶ್ಲಾಘನೀಯ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ತುಂಗಭದ್ರಾ ಕಾಪಾಡಿದ ಕನ್ನಯ್ಯ ನಾಯ್ಡುಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಋಣ ತೀರಿಸಿದ ಸರ್ಕಾರ
Latest Videos