ಬಾಗಲಕೋಟೆ, ಅ.15: ಜಿಲ್ಲೆಯ ಬೀಳಗಿ(Bilagi) ತಾಲ್ಲೂಕಿನ ಸುನಗ ಗ್ರಾಮದ ಶ್ರೀಶೈಲ ತೋಳಮಟ್ಟಿ ಇವರ ತೋಟದ ಮನೆಯಲ್ಲಿ ಬರೊಬ್ಬರಿ ಏಳು ಅಡಿ ಉದ್ದದ ನಾಗರ ಹಾವು(Cobra) ಪ್ರತ್ಯಕ್ಷವಾಗಿದೆ. ಹೌದು, ಹಾವು ಕಂಡು ಮನೆಯವರು ಗಾಬರಿಗೊಂಡಿದ್ದಾರೆ. ಕೂಡಲೇ ಸ್ಥಳೀಯ ಉರಗ ರಕ್ಷಕ ಬಸಪ್ಪ ದಳವಾಯಿಯವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ಬಸಪ್ಪ ದಳವಾಯಿಯವರು, ಹಾವನ್ನು ಸುರಕ್ಷಿತವಾಗಿ ಹಿಡಿದು, ಯಡಹಳ್ಳಿ ಅರಣ್ಯ ವಲಯದಲ್ಲಿ ಬಿಟ್ಟು ಬಂದಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ