ರಾಯಚೂರಿನ ರಿಮ್ಸ್ ಕೊರೋನಾ ಸೋಂಕಿತರ ಚಿಕಿತ್ಸೆಗೆ ವೆಂಟಿಲೇಟರ್ ಮತ್ತು ಆಕ್ಸಿಜನ್ ಸೇರಿ ಸರ್ವಸನ್ನದ್ಧ

Updated on: May 28, 2025 | 12:01 PM

ರಿಮ್ಸ್ ನಲ್ಲಿರುವ ತಜ್ಞ ವೈದ್ಯರೊಬ್ಬರು ನಮ್ಮ ರಾಯಚೂರು ವರದಿಗಾರನೊಂದಿಗೆ ಮಾತಾಡಿ ಕೋರೋನಾ ಸೋಂಕು ಎಷ್ಟೇ ತೀವ್ರ ಸ್ವರೂಪದ್ದಾಗಿದ್ದರೂ ಸೋಂಕಿತರನ್ನು ಬೇರೆಡೆ ರೆಫರ್ ಮಾಡದೆ ಇಲ್ಲಿಯೇ ಚಿಕಿತ್ಸೆ ನೀಡುವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ, ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರಿಗಾಗಿ ಪ್ರತ್ಯೇಕ ವಾರ್ಡ್​​ಗಳನ್ನು ಮಾಡಲಾಗಿದೆ ಮತ್ತು ರಜೆಮೇಲೆ ತೆರಳಿದ್ದ ಎಲ್ಲ ವೈದ್ಯರು ಹಾಗೂ ಸಿಬ್ಬಂದಿಯನ್ನು ವಾಪಸ್ಸು ಕರೆಸಿಕೊಳ್ಳಲಾಗಿದೆ ಎಂದು ಹೇಳಿದರು.

ರಾಯಚೂರು, ಮೇ 28: ಕೊರೋನಾ ಸೋಂಕು ಮತ್ತೊಮ್ಮೆ ತಲೆಯೆತ್ತಿ ಜನರಲ್ಲಿ ಆತಂಕ ಮೂಡಿಸುತ್ತಿದೆ. ತೆಲಂಗಾಣ ರಾಜ್ಯದ ಗಡಿ ಭಾಗದಲ್ಲಿರುವ ರಾಯಚೂರಿನ ಜಿಲ್ಲಾಸ್ಪತ್ರೆಯಲ್ಲಿ (ಆರ್​ಐಎಂಎಸ್) (Raichur Institute of Medical Sciences) ಸೋಂಕಿನ ಲಕ್ಷಣಗಳಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ಒದಗಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಯಾವುದೇ ಖಾಸಗಿ ಆಸ್ಪತ್ರೆಗಳಿಗೆ ಕಮ್ಮಿಯಿಲ್ಲದಂತೆ ರಿಮ್ಸ್​ನಲ್ಲಿ ಸ್ಪೆಷಲ್ ವಾರ್ಡ್​ಗಳನ್ನು ಸಿದ್ದಪಡಿಸಲಾಗಿದೆ ಮತ್ತು ತೀವ್ರ ಸ್ವರೂಪದ ಸೋಂಕಿನಿಂದ ಬಳಲುವವರಿಗಾಗಿ ವೆಂಟಿಲೇಟರ್​​ಯುಕ್ತ ಬೆಡ್​​​ಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ಆಕ್ಸಿಜನ್ ಸಿಲಿಂಡರ್ ಮತ್ತು ಕೋವಿಡ್ ಚಿಕಿತ್ಸೆಗೆ ಅವಶ್ಯವಿರುವ ಔಷಧಿಗಳನ್ನು ದಾಸ್ತಾನು ಮಾಡಲಾಗಿದೆ.

ಇದನ್ನೂ ಓದಿ:  ಕೊರೋನಾ ಲಸಿಕೆ ಮತ್ತು ಹೃದಯಾಘಾತದ ನಡುವೆ ಯಾವುದೇ ಸಂಬಂಧವಿಲ್ಲ: ಡಾ ರಾಹುಲ್ ಪಾಟೀಲ್, ಹೃದ್ರೋಗ ತಜ್ಞ, ಎಸ್ ಜೆ ಐ ಸಿ ಅರ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ