ಭಾರಿ ಮಳೆಗೆ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕುಗಳಲ್ಲಿ ಹೆದ್ದಾರಿ ಹಾಳು, ಪರಿಶೀಲನೆ ನಡೆಸಿದರು ಶಾಸಕ ರೇಣುಕಾಚಾರ್ಯ
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನಲ್ಲಿ ಹಲವಾರು ರಸ್ತೆಗಳು ಕೊಚ್ಚಿ ಹೋಗಿದ್ದು ಹೊನ್ನಾಳಿ ಶಾಸಕ ಎಮ್ ಪಿ ರೇಣುಕಾಚಾರ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದಾವಣಗೆರೆ: ಈ ಬಾರಿಯ ಮಳೆ ಸೃಷ್ಟಿಸುತ್ತಿರುವ ಅವಾಂತರಗಳು ಒಂದೆರಡಲ್ಲ. ರಸ್ತೆಗಳು ಕೊಚ್ಚಿಹೋಗುತ್ತಿವೆ, ಸೇತುವೆಗಳು ಕುಸಿದು ಬೀಳಿತ್ತಿವೆ, ರೈತರ ಬೆಳೆಗಳು ನಾಶವಾಗುತ್ತಿವೆ ಮತ್ತು ಅನೇಕ ಭಾಗಗಳಲ್ಲಿ ಮನೆಗಳು ಸಹ ಕುಸಿದಿವೆ. ಕಳೆದ ರಾತ್ರಿ ಸುರಿದ ಮಳೆಯಿಂದ ದಾವಣಗೆರೆ ಜಿಲ್ಲೆಯ ಹೊನ್ನಾಳಿ (Honnali) ಮತ್ತು ನ್ಯಾಮತಿ (Nyamati) ತಾಲ್ಲೂಕಿನಲ್ಲಿ ಹಲವಾರು ರಸ್ತೆಗಳು ಕೊಚ್ಚಿ ಹೋಗಿದ್ದು ಹೊನ್ನಾಳಿ ಶಾಸಕ ಎಮ್ ಪಿ ರೇಣುಕಾಚಾರ್ಯ (MP Renukacharya) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Latest Videos