ಹುಬ್ಬಳ್ಳಿಯಲ್ಲಿ ಈದ್ಗಾ ಮೈದಾನದಲ್ಲಿ ಎಲ್ಲರ ಗಮನ ಸೆಳೆದ ಕೇಸರಿ ಗಣೇಶ

Edited By:

Updated on: Sep 14, 2026 | 4:28 PM

ಹುಬ್ಬಳ್ಳಿ ಮೂರು ಸಾವಿರ ಮಠದಿಂದ ಗಣೇಶ ಮೂರ್ತಿಯನ್ನು ಮೆರವಣಿಗಯಲ್ಲಿ ತಗೆದುಕೊಂಡು ಬಂದು ಈದ್ಗಾ ಮೈದಾನದಲ್ಲಿ ಪ್ರತಿಷ್ಟಾಪನೆ ಮಾಡಲಾಯಿತು. ಈ ಬಾರಿ ತಲೆ ಮೇಲೆ ಆರ್ ಎಎಸ್ ಎಸ್ ಗಣವೇಷದಾರಿ ದರಿಸೋ ಕಪ್ಪು ಟೋಪಿಯನ್ನು ಗಣೇಶ ಮೂರ್ತಿ ತಲೆ ಮೇಲೆ ಹಾಕಿದ್ದು ಕೈಯಲ್ಲಿ ಭಗವಾ ಧ್ವಜ ನೀಡಲಾಗಿತ್ತು. ಈದ್ಗಾ ಮೈದಾನದ ಸುತ್ತಮುತ್ತ ಬಿಗಿ ಪೊಲೀಸ್ ಬಂದೂಬಸ್ಥ ನಿಯೋಜನೆ ಮಾಡಲಾಗಿದೆ. ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ.

ಹುಬ್ಬಳ್ಳಿ, (ಸೆ.14): ಹುಬ್ಬಳ್ಳಿಯಲ್ಲಿ ಅನೇಕರು ಗಣೇಶ ಮೂರ್ತಿಗಳನ್ನು ತಗೆದುಕೊಂಡು ಮನಯಲ್ಲಿಯೇ ಪ್ರತಿಷ್ಟಾಪಿಸಿ ಪೂಜೆ ಮಾಡಿದ್ರೆ, ಇನ್ನು ನಗರದಲ್ಲಿ ಸಾವಿರಕ್ಕೂ ಅಧಿಕ ಕಡೆ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪಿಸಲಾಗಿದೆ. ಇನ್ನು ಹುಬ್ಬಳ್ಳಿಯ ಹೃದಯಬಾಗದಲ್ಲಿರುವ ಈದ್ಗಾ ಮೈದಾನದಲ್ಲಿ ಈ ವರ್ಷ ಕೂಡಾ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪಿಸಲಾಗಿದೆ. ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಟಾಪನೆ ವಿಚಾರ ಈ ಹಿಂದೆ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿತ್ತು. ನಂತರ ಪಾಲಿಕೆ ಪರವಾನಿಗ ನೀಡಿದ್ದರಿಂದ ಕಳೆದ ಐದು ವರ್ಷದಿಂದ ಗಣೇಶ ಮೂರ್ತಿ ಪ್ರತಿಷ್ಟಾಪನೆ ಮಾಡಲಾಗುತ್ತಿದೆ. ಈ ವರ್ಷ ಕೂಡಾ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಟಾಪನೆ ಮಾಡಲಾಗಿದೆ. ಹುಬ್ಬಳ್ಳಿ ಮೂರು ಸಾವಿರ ಮಠದಿಂದ ಗಣೇಶ ಮೂರ್ತಿಯನ್ನು ಮೆರವಣಿಗಯಲ್ಲಿ ತಗೆದುಕೊಂಡು ಬಂದು ಈದ್ಗಾ ಮೈದಾನದಲ್ಲಿ ಪ್ರತಿಷ್ಟಾಪನೆ ಮಾಡಲಾಯಿತು. ಈ ಬಾರಿ ತಲೆ ಮೇಲೆ ಆರ್ ಎಎಸ್ ಎಸ್ ಗಣವೇಷದಾರಿ ದರಿಸೋ ಕಪ್ಪು ಟೋಪಿಯನ್ನು ಗಣೇಶ ಮೂರ್ತಿ ತಲೆ ಮೇಲೆ ಹಾಕಿದ್ದು ಕೈಯಲ್ಲಿ ಭಗವಾ ಧ್ವಜ ನೀಡಲಾಗಿತ್ತು. ಈದ್ಗಾ ಮೈದಾನದ ಸುತ್ತಮುತ್ತ ಬಿಗಿ ಪೊಲೀಸ್ ಬಂದೂಬಸ್ಥ ನಿಯೋಜನೆ ಮಾಡಲಾಗಿದೆ. ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us