ಚೇತನ್ ಇನ್ನಾದರೂ ಮನುಷ್ಯನಾಗು: ವಿವಾದದ ಬಳಿಕ ಸಾರಾ ಗೋವಿಂದು ಕಿವಿಮಾತು
ನಟ ‘ಆ ದಿನಗಳು’ ಚೇತನ್ ಅವರು ಡಾ. ರಾಜ್ಕುಮಾರ್ ಸಮಾಧಿ ಬಗ್ಗೆ ನೀಡಿದ ಹೇಳಿಕೆಗೆ ಸಾರಾ ಗೋವಿಂದು ಅವರು ಖಾರವಾಗಿ ಪ್ರತಿಕ್ರಿಯಿಸಿದರು. ಚೇತನ್ ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆ ಕೂಡ ಮಾಡಲಾಗಿದೆ. ಈ ವೇಳೆ ಸಾರಾ ಗೋವಿಂದು ಅವರು ಮಾತನಾಡಿದ ವಿಡಿಯೋ ಇಲ್ಲಿದೆ.
ನಟ ‘ಆ ದಿನಗಳು’ ಚೇತನ್ (Chetan Ahimsa) ಅವರು ಡಾ. ರಾಜ್ಕುಮಾರ್ ಸಮಾಧಿ ಬಗ್ಗೆ ನೀಡಿದ ಹೇಳಿಕೆಗೆ ಸಾರಾ ಗೋವಿಂದು ಅವರು ಖಾರವಾಗಿ ಪ್ರತಿಕ್ರಿಯಿಸಿದರು. ಚೇತನ್ ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆ ಕೂಡ ಮಾಡಲಾಗಿದೆ. ಈ ವೇಳೆ ಸಾರಾ ಗೋವಿಂದು ಅವರು ಮಾತನಾಡಿದ ವಿಡಿಯೋ ಇಲ್ಲಿದೆ. ‘ಗೌರಿ ಲಂಕೇಶ್ ಅವರ ಪಾರ್ಥೀವ ಶರೀರ ನೋಡಲು ಹೋದಾಗ ರವೀಂದ್ರ ಕಲಾಕ್ಷೇತ್ರದಲ್ಲಿ ರೀ ವಾಟಾಳ್ ಅವರೇ ಅಂತ ಕರೆದಿದ್ದ ಈ ಅಯೋಗ್ಯ. ಆವತ್ತೇ ಜನರು ಆಕ್ರೋಶಕ್ಕೆ ಒಳಗಾಗಿದ್ದರು. ನಿನಗೆ ತಂದೆ-ತಾಯಿ ಸಂಸ್ಕಾರ ಹೇಳಿಕೊಟ್ಟಿಲ್ಲವಾ? ಇನ್ಮೇಲಾದರೂ ಮನುಷ್ಯನಾಗು. ಇನ್ಮುಂದೆ ಯಾರ ಬಗ್ಗೆಯಾದರೂ ಮಾತನಾಡುವಾಗ ಅವರ ಚರಿತ್ರೆ ತಿಳ್ಕೋ’ ಎಂದು ಚೇತನ್ ಅವರಿಗೆ ಸಾರಾ ಗೋವಿಂದು (Sa Ra Govindu) ಕಿವಿಮಾತು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos

